ಮಂಡ್ಯ ಲೋಕಾಯುಕ್ತ ದಾಳಿ: ಹಾಸ್ಟೆಲ್ ವಾರ್ಡನ್ ಮನೆಯಲ್ಲೇ ಮಿನಿಬಾರ್, ಕೈ ಇಟ್ಟಲ್ಲೆಲ್ಲಾ ಕಾಸು, ಕದ್ದ ಮಾಲು!

Published : Sep 22, 2026, 10:11 AM IST

ಮಂಡ್ಯ ಜಿಲ್ಲೆಯ ಮದ್ದೂರಿನಲ್ಲಿ ನಿವೃತ್ತ ಬಿಸಿಎಂ ಹಾಸ್ಟೆಲ್ ಸೂಪರಿಡೆಂಟ್ ಶಿವರಾಜು ಅವರ ಮನೆ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಈ ವೇಳೆ ಹಾಸ್ಟೆಲ್ ವಿದ್ಯಾರ್ಥಿಗಳಿಗೆ ಸೇರಬೇಕಿದ್ದ ವಸ್ತುಗಳು, ಅಪಾರ ಪ್ರಮಾಣದ ಮದ್ಯ ಹಾಗೂ ಅಕ್ರಮ ಆಸ್ತಿ ಪತ್ತೆಯಾಗಿದೆ. ಇಲ್ಲಿದೆ ಇನ್ನಷ್ಟು ವಿವರ..

PREV
16

ಮಂಡ್ಯ ಜಿಲ್ಲೆಯಲ್ಲಿ ಬೆಳ್ಳಂ ಬೆಳಗ್ಗೆ ಲೋಕಾಯುಕ್ತ ಅಧಿಕಾರಿಗಳು ನಡೆಸಿದ ದಾಳಿಯಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ (BCM) ನಿವೃತ್ತ ಅಧಿಕಾರಿಯೊಬ್ಬರ ಬಣ್ಣ ಬಯಲಾಗಿದೆ. ಮನೆಯಲ್ಲಿ ಕೈ ಇಟ್ಟಲ್ಲೆಲ್ಲಾ ಕಾಸು ಹಾಗೂ ಕದ್ದ ಮಾಲುಗಳು ಪತ್ತೆಯಾಗಿವೆ. ಜೊತೆಗೆ, ಇಡೀ ಮನೆಯನ್ನೇ ಮಿನಿಬಾರ್ ಮಾಡಿಕೊಂಡಿದ್ದಾರೆ.

26

ಹಾಸ್ಟೆಲ್ ವಿದ್ಯಾರ್ಥಿಗಳಿಗೆ ಸರ್ಕಾರದ ವತಿಯಿಂದ ನೀಡಬೇಕಿದ್ದ ಸವಲತ್ತುಗಳು ಹಾಗೂ ಅಗತ್ಯ ಸಾಮಾಗ್ರಿಗಳನ್ನು ಕದ್ದು ಮನೆಯಲ್ಲೇ ದಾಸ್ತಾನು ಮಾಡಿಕೊಂಡಿದ್ದ ನಿವೃತ್ತ ಸೂಪರಿಡೆಂಟ್ ಮನೆಯಲ್ಲಿ ಸಿಕ್ಕ ಸಿರಿತನದ ದೃಶ್ಯ ಕಂಡು ಅಧಿಕಾರಿಗಳೇ ದಂಗಾಗಿದ್ದಾರೆ.

36

ಮದ್ದೂರಿನ ವಿನಾಯಕ ಬಡಾವಣೆಯಲ್ಲಿರುವ ನಿವೃತ್ತ ಬಿಸಿಎಂ ಹಾಸ್ಟೆಲ್ ಸೂಪರಿಡೆಂಟ್ ಶಿವರಾಜು ಎಂಬುವವರ ಮನೆ ಹಾಗೂ ಅವಸರಹಳ್ಳಿಯಲ್ಲಿರುವ ಅವರ ಫಾರಂ ಹೌಸ್ ಮೇಲೆ ಲೋಕಾಯುಕ್ತ ಪೊಲೀಸರು ಏಕಕಾಲಕ್ಕೆ ದಾಳಿ ನಡೆಸಿದ್ದಾರೆ. ಶಿವರಾಜು ಅವರು ಕಳೆದ ತಿಂಗಳು ಮದ್ದೂರಿನಲ್ಲಿಯೇ ಸೇವೆಯಿಂದ ನಿವೃತ್ತರಾಗಿದ್ದರು.

46

ಮನೆಯಲ್ಲಾ ಮಿನಿಬಾರ್, ಕೈ ಇಟ್ಟಲ್ಲೆಲ್ಲಾ ಕದ್ದ ಮಾಲು:

ಶಿವರಾಜು ಅವರ ಮನೆಯನ್ನು ಶೋಧಿಸಿದ ಲೋಕಾಯುಕ್ತ ಅಧಿಕಾರಿಗಳಿಗೆ ಅಚ್ಚರಿ ಕಾದಿತ್ತು. ಇದು ಮನೆಯೋ ಅಥವಾ ಬಾರ್‌ ಹಾಗೂ ಗೋದಾಮ್ಮೋ ಎಂಬ ಅನುಮಾನ ಮೂಡುವಂತೆ ನೂರಾರು ಬೆಲೆಬಾಳುವ ಮದ್ಯದ ಬಾಟಲಿಗಳು ಪತ್ತೆಯಾಗಿವೆ.

56

ಹಾಸ್ಟೆಲ್ ಮಕ್ಕಳಿಗೆ ಹಂಚಬೇಕಿದ್ದ ಬಟ್ಟೆಬರೆಗಳು, ಸೀರೆಗಳು, ಕೈಗಡಿಯಾರಗಳು (Watches), ಚಿನ್ನ ಹಾಗೂ ಬೆಳ್ಳಿ ಸಾಮಾಗ್ರಿಗಳು ಯಾವುದೇ ಬ್ರ್ಯಾಂಡ್‌ಗಳು ಹಾಳಾಗದಂತೆ, ಒಮ್ಮೆಯೂ ಬಳಕೆ ಮಾಡದ ಹೊಸ ರೂಪದಲ್ಲೇ ತುಂಬಿ ತುಳುಕುತ್ತಿರುವುದು ಪತ್ತೆಯಾಗಿದೆ. ಸರ್ಕಾರದ ಸೌಲಭ್ಯಗಳನ್ನು ಮಕ್ಕಳ ಬಾಯಿಗೆ ಮಣ್ಣುಹಾಕಿ ಈತ ತನ್ನ ಸ್ವಂತ ಮನೆಗೆ ಸಾಗಿಸಿರುವುದು ತನಿಖೆಯಲ್ಲಿ ಬಹಿರಂಗಗೊಂಡಿದೆ.

66

ಲೋಕಾಯುಕ್ತ ಇನ್‌ಸ್ಪೆಕ್ಟರ್ ಬ್ಯಾಟರಾಯಗೌಡ ನೇತೃತ್ವದಲ್ಲಿ ಮುಂದುವರೆದ ಈ ದಾಳಿಯಲ್ಲಿ, ಶಿವರಾಜು ಅವರ ಅಕ್ರಮ ಆಸ್ತಿ ಹಾಗೂ ಕದ್ದ ಮಾಲುಗಳ ಕರಾಳ ಮುಖ ಹೊರಬಂದಿದ್ದು, ಅಧಿಕಾರಿಗಳು ಕಡತಗಳು ಹಾಗೂ ಸಿಕ್ಕ ಸಿರಿಧನ, ಚಿನ್ನಾಭರಣಗಳನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆ ಮುಂದುವರೆಸಿದ್ದಾರೆ.

Read more Photos on
click me!

Recommended Stories