ಉಡುಪಿಯಲ್ಲಿ ಮಕರ ಸಂಕ್ರಾತಿ ಹಗಲು ತೇರು ಉತ್ಸವ ವೈಭವ; ಪೋಟೋಗಳು

First Published | Jan 15, 2021, 10:45 PM IST

ಉಡುಪಿ(ಜ. 15)    ಮಕರ ಸಂಕ್ರಾಂತಿ ಪ್ರಯುಕ್ತ ಉಡುಪಿ ಕೃಷ್ಣಮಠದ ರಥಬೀದಿಯಲ್ಲಿ ಶುಕ್ರವಾರ ಬೆಳಿಗ್ಗೆ ಹಗಲು ತೇರು ಉತ್ಸವ ವೈಭವದಿಂದ ನಡೆಯಿತು.    ಸಂಪ್ರದಾಯದಂತೆ ಮಕರ ಸಂಕ್ರಾಂತಿಯಂದು ರಾತ್ರಿ ರಥಬೀದಿಯಲ್ಲಿ 3 ತೇರು ಉತ್ಸವ, ಮಾರನೇ ದಿನ ಚೂರ್ಣೋತ್ಸವ ಅಥವಾ ಹಗಲು ತೇರು ಉತ್ಸವ ನಡೆಯುತ್ತದೆ.

ಕರೋನಾದ ಹಾವಳಿ ಗಣನೀಯವಾಗಿ ಕಡಿಮೆಯಾಗಿರುವುದರಿಂದ ಸಾವಿರಾರು ಸಂಖ್ಯೆಯಲ್ಲಿ ಈ ಎರಡೂ ದಿನಗಳ ಉತ್ಸವಗಳಲ್ಲಿ ಬಾಗವಹಿಸಿದ್ದು, ಜನರ ಹೊಸ ಉತ್ಸಾಹವನ್ನು ತೋರಿಸುತಿತ್ತು.
ಪರ್ಯಾಯ ಅದಮಾರು ಮಠದ ಶ್ರೀ ವಿಶ್ವಪ್ರಿಯ ತೀರ್ಥ ಸ್ವಾಮೀಜಿ ಅವರ ಮಾರ್ಗದರ್ಶನದಲ್ಲಿ, ಪರ್ಯಾಯ ಪೀಠಾಧೀಶರಾದ ಶ್ರೀ ಈಶಪ್ರಿಯ ತೀರ್ಥ ಶ್ರೀಪಾದರು ಬೆಳಿಗ್ಗೆ 8 ಗಂಟೆಗೆ ಚಿನ್ನದ ಮೇನೆಯಲ್ಲಿ ಕೃಷ್ಣದ ಉತ್ಸವ ಮೂರ್ತಿಯನ್ನು ಕೃಷ್ಣಮಠದಿಂದ ಹೊರಗೆ ತಂದು, ಬ್ರಹ್ಮರಥದಲ್ಲಿ ಕೃಷ್ಣನನ್ನು ಆರೋಹಣಗೈದು ಪೂಜೆ ಸಲ್ಲಿಸಿದರು.
Tap to resize

ಈ ಸಂದರ್ಭದಲ್ಲಿ ಅಷ್ಟ ಮಠಾಧೀಶರು ರಥದಿಂದ ಭಕ್ತರ ಮೇಲೆ ಕೃಷ್ಣ ಪ್ರಸಾದ, ಹಣ್ಣುಹಂಪಲು, ನಾಣ್ಯ ಇತ್ಯಾದಿಗಳನ್ನು ಎಸೆದರು, ಅದನ್ನು ಹಿಡಿಯಲು ಭಕ್ತರು ಪೈಪೋಟಿಯನ್ನೇ ನಡೆಸುತಿದ್ದರು.
ನಂತರ ಅಷ್ಟ ಮಠಾಧೀಶರು ರಥವನ್ನು ಎಳೆಯುವ ಮೂಲಕ ರಥೋತ್ಸವಕ್ಕೆ ಚಾಲನೆ ನೀಡಿದರು, ನಂತರ ಸಾವಿರಾರು ಭಕ್ತರು ದೇವರ ನಾಮ ಘೋಷಗಳೊಂದಿಗೆ ರಥವನ್ನು ಭಕ್ತಿಯಿಂದ ಎಳೆದರು.
ಪರ್ಯಾಯ ಅದಮಾರು ಮಠದ ಉಭಯ ಶ್ರೀಗಳೊಂದಿಗೆ ಕೃಷ್ಣಾಪುರ ಮಠದ ಶ್ರೀ ವಿದ್ಯಾಸಾಗರ ತೀರ್ಥರು, ಪಲಿಮಾರು ಮಠದ ಶ್ರೀ ವಿದ್ಯಾಧೀಶ ತೀರ್ಥರು ಮತ್ತು ಶ್ರೀ ವಿದ್ಯಾರಾಜೇಶ್ವರ ತೀರ್ಥರು, ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥರು, ಕಾಣಿಯೂರು ಮಠದ ಶ್ರೀ ವಿದ್ಯಾವಲ್ಲಭ ತೀರ್ಥರು ಮತ್ತು ಸೋದೆ ಮಠದ ಶ್ರೀ ವಿಶ್ವವಲ್ಲಭ ತೀರ್ಥರು ಉತ್ಸವ ದಲ್ಲಿ ಭಾಗಿಯಾದರು.
ರಥೋತ್ಸವದ ನಂತರ ಮಧ್ವಸರೋವರದಲ್ಲಿ ಅಷ್ಟಮಠಾಧೀಶರೊಂದಿಗೆ ಉತ್ಸವದ ಅವಭೃತ ಸ್ನಾನ ನಡೆಯಿತು.
ಉಡುಪಿಯಲ್ಲಿ ಮಕರ ಸಂಕ್ರಾತಿ ಹಗಲು ತೇರು ಉತ್ಸವ ವೈಭವ

Latest Videos

click me!