ಬೆಳಗ್ಗೆ 9.50 ನಿಮಿಷಕ್ಕೆ ಪ್ರಾರಂಭವಾದ ರಥೋತ್ಸವವು 11ರ ತನಕ ದೇಗುಲದ ಸುತ್ತ ಸಂಚರಿಸಿ ಮೂಲ ಸ್ಥಾನಕ್ಕೆ ಬಂದು ನಿಂತಿತು.
ವೀರಾಗಸೆ ತಂಡದವರು ಭಕ್ತರು ಎಸೆಯುವ ತೆಂಗಿನ ಕಾಯಿಯನ್ನು ಕತ್ತಿಯಿಂದ ತುಂಡರಿಸುವುದು ಗಮನ ಸೆಳೆಯಿತು.
ಭಕ್ತರುಬ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ವೈಭವದ ರಥೋತ್ಸವಕ್ಕೆ ಸಾಕ್ಷಿಯಾದರು.
ಸಾಲೂರು ಮಠಾಧೀಶರಾದ ಗುರುಸ್ವಾಮಿಗಳವರಿಗೂ ಪೂಜೆ ಸಲ್ಲಿಸಿ ಮೆರವಣಿಗೆ ಯಲ್ಲಿ ಕರೆತರಲಾಯಿತು.
ಮೆರವಣಿಗೆಯುದ್ಧಕ್ಕೂ ಮಡಿಯುಟ್ಟ ಬೇಡಣ ಕಂಪಣ ಸಮುದಾಯದ 100 ಹೆಣ್ಣು ಮಕ್ಕಳು ಕಳಸ ಹಿಡಿದು ಆರತಿ ಎತ್ತಿ ತೇರನ್ನು ಸ್ವಾಗತಿಸಿದರು.
ಮಹಾಶಿವರಾತ್ರಿ 5ನೇ ದಿನವಾದ ಸೋಮವಾರ ಬೆಳಗ್ಗೆ 3 ಗಂಟೆಯಿಂದಲೇ ಮಾದಪ್ಪನಿಗೆ ವಿಶೇಷ ಪೂಜೆ ಜರುಗಿತು.
ಜಾತ್ರಾ ಮಹೋತ್ಸವದ ಅಂಗವಾಗಿ ಡೊಳ್ಳು ಕುಣಿತ, ವೀರಾಗಸೆ, ನಂದಿದ್ವಜ, ಕಂಸಾಳೆ ನೃತ್ಯ, ವಾದ್ಯಮೇಳಗಳೊಂದಿಗೆ ರಥೋತ್ಸ ವದ ಮುಂಭಾಗ ಪ್ರದರ್ಶನ ಮಾಡಿದರು.
ಉತ್ಸವ ಮೂರ್ತಿಯನ್ನು ಅದ್ಧೂರಿ ಮೆರವಣಿಗೆ ಯೊಂದಿಗೆ ತರಲಾಯಿತು.
ರಥೋತ್ಸವಕ್ಕೂ ಮೊದಲು ವಿಧಿ ವಿಧಾನಗಳೊಂದಿಗೆ ಉತ್ಸವ ಮೂರ್ತಿ ಮಾದೇಶ್ವರ ಸ್ವಾಮಿಗೆ ಧಾರ್ಮಿಕ ವಾಗಿ ಬೇಡಕಂಪಣದ ಆರ್ಚಕರು ಪೂಜೆ ಸಲ್ಲಿಸಿದರು.
ರಥೋತ್ಸವ ಪ್ರಯುಕ್ತ ಅಲಂಕಾರ ಮಾಡಿರುವುದು