ಕೋವಿಡ್ ಸೋಂಕಿತರ ಶವಗಳನ್ನು ಬೇಕಾಬಿಟ್ಟಿಗುಂಡಿಗೆಸೆವುದನ್ನು ತಪ್ಪಿಸುವ ಸಲುವಾಗಿ ಮುಸ್ಲಿಮರ ಮೃತದೇಹಗಳಿಗೆ ಪಿಎಫ್‌ಐ, ಹಿಂದೂಗಳ ಮೃತದೇಹಗಳಿಗೆ ಬಜರಂಗದಳದ ಸದಸ್ಯರು ಗೌರವದ ಅಂತ್ಯಸಂಸ್ಕಾರ ನೆರವೇರಿಸಿರುವ ಬೆನ್ನಲ್ಲೇ, ಇದೀಗ ಕ್ರೈಸ್ತ ಸಮುದಾಯದ ಮೃತದೇಹಗಳಿಗೂ ಧರ್ಮದ ನಿಯಮಗಳಿಗನುಸಾರವಾಗಿ ಅಂತಿಮ ವಿಧಾನಗಳನ್ನು ಪೂರೈಸಿರುವ 2 ಪ್ರತ್ಯೇಕ ಘಟನೆಗಳು ಮಂಗಳೂರಿನಿಂದ ವರದಿಯಾಗಿದೆ.
ಸೋಂಕಿನಿಂದ ಮೃತಪಟ್ಟಕ್ರೈಸ್ತ ಸಮುದಾಯದವರನ್ನು ಕೋವಿಡ್ ನಿಯಮ ಪಾಲಿಸಿ ಚಚ್‌ರ್‍ನಲ್ಲೇ ದಫನ್ ಮಾಡುವ ಮೂಲಕ ಮಂಗಳೂರು ಕ್ರೈಸ್ತ ಧರ್ಮಪ್ರಾಂತ್ಯ ಗೌರವ ಅಂತ್ಯಸಂಸ್ಕಾರಕ್ಕೆ ನಾಂದಿ ಹಾಡಿದೆ.
ದ.ಕ.ಜಿಲ್ಲೆಯಲ್ಲಿ ಕೋವಿಡ್‌ನಿಂದ ಸಾವಿಗೀಡಾದವರ ಶವದ ಅಂತ್ಯಸಂಸ್ಕಾರಕ್ಕೆ ಹಿಂದೂ ಹಾಗೂ ಮುಸ್ಲಿಂ ಸಮುದಾಯದಲ್ಲಿ ಆರಂಭದಲ್ಲಿ ಅಪಸ್ವರ ಕೇಳಿಬಂದಿತ್ತು. ಬಳಿಕ ಅದನ್ನು ಶಮನಗೊಳಿಸಿ ಅರಿವು ಮೂಡಿಸಲಾಗಿತ್ತು. ಆದರೆ ಕ್ರೈಸ್ತ ಸಮುದಾಯದಲ್ಲಿ ಇಲ್ಲಿವರೆಗೆ ಸಾವಿನ ತಾಪತ್ರಯ ಬಂದಿರಲಿಲ್ಲ.
ಇದೀಗ ಕಳೆದ ನಾಲ್ಕು ದಿನಗಳಲ್ಲಿ ಕ್ತೈಸ್ತ ಸಮುದಾಯದ ಇಬ್ಬರು ಕೋವಿಡ್‌ಗೆ ಸಾವಿಗೀಡಾಗಿದ್ದಾರೆ. ಕಳೆದ ಶುಕ್ರವಾರ 67 ವರ್ಷದ ವೃದ್ಧ ಹಾಗೂ ಭಾನುವಾರ 97ರ ವೃದ್ಧೆಯೊಬ್ಬರು ಮೃತಪಟ್ಟಿದ್ದು ಇವರ ಅಂತ್ಯಕ್ರಿಯೆಯನ್ನು ಕ್ರಮವಾಗಿ ಮಂಗಳೂರಿನ ಕುಲಶೇಖರ ಹಾಗೂ ಬೆಂದೂರ್‌ವೆಲ್ ಚಚ್‌ರ್‍ನಲ್ಲಿ ನೆರವೇರಿಸಲಾಗಿತ್ತು.
ಈ ಹಿನ್ನೆಲೆಯಲ್ಲಿ ಮಂಗಳೂರು ಧರ್ಮಪ್ರಾಂತ್ಯದಕ್ಕೆ ಒಳಪಡುವ ದ.ಕ. ಹಾಗೂ ಕಾಸರಗೋಡು ಜಿಲ್ಲೆಯ ಎಲ್ಲ 140 ಚಚ್‌ರ್‍ಗಳಿಗೆ ಮಾರ್ಗದರ್ಶನ ನೀಡಲಾಗಿದೆ. ಮಂಗಳೂರು ಬಿಷಪ್ ನೇತೃತ್ವದ ಕೇಂದ್ರ ಸಮಿತಿ ಕ್ರೈಸ್ತ ವಿಧಿ ವಿಧಾನದ ಮೂಲಕ, ಕೋವಿಡ್ ನಿಯಮದಂತೆ ದಫನಕ್ರಿಯೆ ನಡೆಸಲು ಸೂಚಿಸಿದೆ.
ಕೋವಿಡ್ ಮೃತರ ಅಂತ್ಯಸಂಸ್ಕಾರ ನಡೆಸಲು ಕ್ರೈಸ್ತರಲ್ಲೂ ಪ್ರತ್ಯೇಕ ತಂಡ ರಚಿಸಲಾಗಿದೆ. 10 ಮಂದಿಯ ತಂಡ ಆಯಾ ಚಚ್‌ರ್ ಧರ್ಮಗುರುಗಳ ಹಾಗೂ ಆರೋಗ್ಯ ಸಿಬ್ಬಂದಿ ಮಾರ್ಗದರ್ಶನದಲ್ಲಿ ಚಚ್‌ರ್ ಆವರಣದಲ್ಲೇ ಅಂತ್ಯಸಂಸ್ಕಾರ ನೆರವೇರಿಸಲಾಗುತ್ತದೆ. ಆದರೆ ಕೋವಿಡ್ ಮೃತ ಶರೀರವನ್ನು ಚಚ್‌ರ್‍ನ ಒಳಗೆ ತಂದು ಪ್ರಾರ್ಥನೆ ನಡೆಸುವುದಿಲ್ಲ. ಚಚ್‌ರ್ ಆವರಣದಲ್ಲಿರುವ ದಫನ ಭೂಮಿಯಲ್ಲಿ ಅಂತ್ಯಕ್ರಿಯೆ ನಡೆಸಲಾಗುತ್ತದೆ.