ಸ್ಥಳಕ್ಕೆ ಆಗಮಿಸಿದ ಉರಗ ಸಂರಕ್ಷಕ ಯದುಕುಮಾರ್, ಅತ್ಯಂತ ಕೌಶಲ್ಯದಿಂದ ಮನೆಯ ಪಾಟ್‌ಗಳ ನಡುವೆ ಅವಿತುಕೊಂಡಿದ್ದ ನಾಗರಹಾವನ್ನು ಸುರಕ್ಷಿತವಾಗಿ ಸೆರೆಹಿಡಿದರು. ಹಾವನ್ನು ಡಬ್ಬಿಯಲ್ಲಿ ಹಾಕುವ ಮುನ್ನ ಸುರಕ್ಷಿತವಾಗಿ ನೆಲದ ಮೇಲೆ ಬಿಟ್ಟಾಗ, ಆ ನಾಗರಹಾವು ಬುಸುಗುಡುತ್ತಾ ತನ್ನ ಅಂಗೈಯಗಲದಷ್ಟು ಹೆಡೆಯನ್ನು ಬಿಚ್ಚಿ ನಿಂತಿತು. ಆ ಕ್ಷಣದಲ್ಲಿ ಅದು ಎದುರಿಗೆ ಇದ್ದವರನ್ನು ಹೆದರಿಸಲು ಪ್ರಯತ್ನಿಸುತ್ತಿತ್ತಾದರೂ, ನೋಡಲು ಮಾತ್ರ ಯಾವುದೋ ಮಾಡೆಲ್ ಫೋಟೋಗೆ ಪೋಸ್ ನೀಡಿದಂತೆ ಕಂಡುಬಂತು.