ಬಳ್ಳಾರಿ: ಡಾ. ರಾಜ್‌ಕುಮಾರ್‌ ಅಭಿಮಾನಿಯ ಮದುವೆ, ಗಮನ ಸೆಳೆದ ವಿವಾಹ ಆಮಂತ್ರಣ ಪತ್ರಿಕೆ

First Published | Nov 8, 2020, 12:55 PM IST

ಬಳ್ಳಾರಿ(ನ.08): ನಗರದ ಡಾ. ರಾಜ್‌ಕುಮಾರ್‌ ಅಭಿಮಾನಿ ಎಚ್‌. ರವಿಕುಮಾರ್‌ ಎಂಬುವರು ತಮ್ಮ ವಿವಾಹದ ವಿಶೇಷ ಆಮಂತ್ರಣ ಮಾಡಿಸಿ ಗಮನ ಸೆಳೆದಿದ್ದಾರೆ.

ಕನ್ನಡಧ್ವಜ ಹೋಲುವ ಹಳದಿ ಹಾಗೂ ಕೆಂಪು ಬಣ್ಣವಿರುವ ಆಮಂತ್ರಣ ಪತ್ರಿಕೆಯ ಲಕೋಟೆ ಒಳಗೆ ಕರ್ನಾಟಕ ಭೂಪಟ ಮಾದರಿಯ ವಿವಾಹ ಆಮಂತ್ರಣ ಪತ್ರಿಕೆ ಇದ್ದು, ಕುವೆಂಪು, ಬೇಂದ್ರೆ, ಕಾರಂತ, ಕಾರ್ನಾಡ್‌, ಮಾಸ್ತಿ, ಅನಂತಮೂರ್ತಿ, ಡಾ. ಚಂದ್ರಶೇಖರ ಕಂಬಾರ, ಡಾ. ವಿ.ಕೃ. ಗೋಕಾಕ್‌, ಡಾ. ರಾಜ್‌ಕುಮಾರ್‌, ಪಾರ್ವತಮ್ಮ ರಾಜ್‌ಕುಮಾರ್‌, ಶಿವರಾಜ್‌ಕುಮಾರ್‌, ರಾಘವೇಂದ್ರ ರಾಜ್‌ಕುಮಾರ್‌, ಪುನೀತ್‌ರಾಜ್‌ಕುಮಾರ್‌ ಅವರ ಭಾವಚಿತ್ರಗಳಿವೆ.
ಆಮಂತ್ರಣ ಪತ್ರಿಕೆಯ ಮತ್ತೊಂದು ಭಾಗದಲ್ಲಿ ವಧು-ವರರ ಹೆಸರು, ವಿವಾಹ ದಿನಾಂಕ ಹಾಗೂ ಸಮಯ ಇದೆ.
Tap to resize

ರಾಷ್ಟ್ರಕವಿ ಕುವೆಂಪು ಅವರ ಎಲ್ಲಾದರೂ ಇರು ಎಂತಾದರೂ ಇರು ಎಂಬ ಕವಿವಾಣಿಯ ಸಾಲುಗಳಿವೆ. ಆಮಂತ್ರಣ ಪತ್ರಿಕೆ ಹೀಗೂ ಮಾಡಿಸಬಹುದು ಎನ್ನುವುದಕ್ಕೆ ಇದು ನಿದರ್ಶನವಾಗಿದೆ.
ಕರ್ನಾಟಕ ಭೂಪಟ ಮಾದರಿ ವಿವಾಹ ಆಮಂತ್ರಣ ಪತ್ರಿ​ಕೆ

Latest Videos

click me!