ಬೆಂಗಳೂರು(ಮೇ 15) ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರಿಗೆ 58ನೇ ಜನ್ಮದಿನ ಸಂಭ್ರಮ. ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ ಶಿವಕುಮಾರ್ ಅವರ ಜನ್ಮದಿನವನ್ನು ಬೆಂಗಳೂರು ನಗರ ಕಾಂಗ್ರೆಸ್ ಪ್ರಚಾರ ಸಮಿತಿ ವಿಶಿಷ್ಟವಾಗಿ ಆಚರಿಸಿದೆ. ಡಿಕೆಶಿ ಜನ್ಮದಿನದ ಅಂಗವಾಗಿ ಅಂಧರ ಶಾಲೆಯ ಮಕ್ಕಳಿಗೆ ದಿನನಿತ್ಯದ ಆಹಾರ ಪದಾರ್ಥಗಳನ್ನು ನೀಡಲಾಯಿತು. ನಾಗರಾಜ್ ಸ್ಮಾರಕ ಹೆರಿಗೆ ಆಸ್ಪತ್ರೆಯಲ್ಲಿ ಗರ್ಭಿಣಿಯರಿಗೆ ಹಾಲು ಹಣ್ಣು ವಿತರಿಸಲಾಯಿತು. ಲಾಕ್ ಡೌನ್ ಕಾರಣಕ್ಕೆ ಸಂಕಷ್ಟದಲ್ಲಿರುವ ಜನರಿಗೆ ಆಹಾರ ವಿತರಣೆ ಮಾಡಲಾಯಿತು. ಕಾಂಗ್ರೆಸ್ ಪಕ್ಷದ ಮುಖಂಡರು ಕವಿಕಾ ಮಾಜಿ ಅಧ್ಯಕ್ಷರಾದ ಎಸ್ ಮನೋಹರ್ , ಜಿ. ಜನಾರ್ಧನ, ಎಂ. ಎ. ಸಲೀಂ, ಶೇಖರ್, ಆನಂದ್, ಜಯಸಿಂಹ, ಉಮೇಶ್, ಪುಟ್ಟರಾಜು ಹಾಗೂ ಮಹೇಶ್ ಇದ್ದರು. Karnataka Congress celebrates KPCC President DK Shivakumar Birthday. Congress party donate food and essential things ಡಿಕೆಶಿ ಜನ್ಮದಿನಕ್ಕೆ ಹೊಸ ಅರ್ಥ ಕೊಟ್ಟ ಕಾಂಗ್ರೆಸ್ ಕಾರ್ಯಕರ್ತರು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರಿಗೆ 58ನೇ ಜನ್ಮದಿನ ಸಂಭ್ರಮ. ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ ಶಿವಕುಮಾರ್ ಅವರ ಜನ್ಮದಿನವನ್ನು ಬೆಂಗಳೂರು ನಗರ ಕಾಂಗ್ರೆಸ್ ಪ್ರಚಾರ ಸಮಿತಿ ವಿಶಿಷ್ಟವಾಗಿ ಆಚರಿಸಿದೆ.