ಮುಳುಗಿದ ತೋಟ, ಕೊಚ್ಚಿಹೋದ ಸೇತುವೆ.. ತತ್ತರಿಸಿದ ಉತ್ತರ ಕನ್ನಡ ವೀಕ್ಷಿಸಿದ ಬೊಮ್ಮಾಯಿ

First Published | Jul 29, 2021, 8:12 PM IST

ಉತ್ತರ ಕನ್ನಡ(ಜು. 29) ಮಳೆ-ಪ್ರವಾಹದಿಂದ ತೀವ್ರ ಸಂಕಷ್ಟಕ್ಕೆ ಗುರಿಯಾಗಿರುವ ಉತ್ತರ ಕನ್ನಡ ಜಿಲ್ಲೆಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಪ್ರವಾಸ ಮಾಡಿ ಹಾನಿ ಮಾಹಿತಿ ಪಡೆದುಕೊಂಡರು. ಯಲ್ಲಾಪುರ ಶಾಸಕ, ಮಾಜಿ ಸಚಿವ ಶಿವರಾಂ ಹೆಬ್ಬಾರ್ ಜತೆಗಿದ್ದರು. 

ಉತ್ತರ ಕನ್ನಡ ಜಿಲ್ಲೆಯಲ್ಲಿ ಪ್ರವಾಹ ಪರಿಸ್ಥಿತಿ ಹಾಗೂ ಪರಿಹಾರ ಕಾರ್ಯಗಳ ಕುರಿತಂತೆ ಮುಖ್ಯಮಂತ್ರಿ  ಇಂದು ಅಧಿಕಾರಿಗಳೊಂದಿಗೆ ಪರಿಶೀಲನಾ ಸಭೆ ನಡೆಸಿದರು. 

ಭಾರೀ ಮಳೆಗೆ ಗುಳ್ಳಾಪುರ ಸೇತುವೆ ಕೊಚ್ಚಿಹೋಗಿತ್ತು. 

Tap to resize

ಯಲ್ಲಾಪುರ ತಾಲ್ಲೂಕಿನ ಬಾರೇಕಳಚೆ - ಕೈಗಾ ರಸ್ತೆ, ಕುಸಿದ ಸೇತುವೆ ಮೊದಲಾದ ಅತಿವೃಷ್ಟಿಯಿಂದ ಹಾನಿಗೊಳಗಾಗಿರುವ ಪ್ರದೇಶಗಳನ್ನು ವೀಕ್ಷಿಸಿದರು. 

ಅತಿವೃಷ್ಟಿಯಿಂದ ಬಾಧಿತರಿಗಾಗಿ ಇರುವ ಶಿರೂರು ಕಾಳಜಿ ಕೇಂದ್ರಕ್ಕೆ ಭೇಟಿ ನೀಡಿ ಪ್ರವಾಹ ಸಂತ್ರಸ್ತರ ಜೊತೆ ಮಾತನಾಡಿದರು. 

ಪ್ರಧಾನಮಂತ್ರಿ ನರೇಂದ್ರ ಮೋದಿ ರಾಷ್ಟ್ರೀಯ ಶಿಕ್ಷಣ ನೀತಿ ಕುರಿತು ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ನಡೆಸಿದ ವೀಡಿಯೋ ಸಂವಾದದಲ್ಲಿ ಮುಖ್ಯಮಂತ್ರಿ  ಬೊಮ್ಮಾಯಿ ಅಂಕೋಲಾ ತಾಲ್ಲೂಕು ಕಚೇರಿಯಿಂದ ಪಾಲ್ಗೊಂಡರು.

ಅತಿವೃಷ್ಟಿಯಿಂದಾಗಿ ಯಲ್ಲಾಪುರ ತಾಲೂಕಿನ ಅರಬೈಲ್ ಘಾಟ್ ನಲ್ಲಿ ಉಂಟಾದ ಹಾನಿ ವೀಕ್ಷಣೆ ಮಾಡಿದರು.

ಯಲ್ಲಾಪುರ ಶಾಸಕ ಶಿವರಾಂ ಹೆಬ್ಬಾರ್ ಮತ್ತು ಅಧಿಕಾರಿಗಳು ಸಿಎಂ ಜತೆಗಿದ್ದರು.

ಅತಿವೃಷ್ಟಿಯಿಂದಾಗಿ ಯಲ್ಲಾಪುರ ತಾಲೂಕಿನ ಅರಬೈಲ್ ಘಾಟ್ ನಲ್ಲಿ ಉಂಟಾದ ಹಾನಿ ವೀಕ್ಷಣೆ ಮಾಡಿದರು.

ಸಿಎಂ ಬಸವರಾಜ ಬೊಮ್ಮಾಯಿ ಯಲ್ಲಾಪುರ ತಾಲ್ಲೂಕು ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಸಿಎಂ ಬಸವರಾಜ ಬೊಮ್ಮಾಯಿ ಯಲ್ಲಾಪುರ ತಾಲ್ಲೂಕು ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

Latest Videos

click me!