ಬಳ್ಳಾರಿ(ಏ.30): ಲಾಕ್‌ಡೌನ್ ಆಗಿದ್ದರಿಂದ ನೆರೆಯ ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯ ನರಸಪೇಟೆಯ ಸತ್ಯನಪಲ್ಲಿ ಗ್ರಾಮದಲ್ಲಿ ರಾಜ್ಯದ ಕೂಲಿ ಕಾರ್ಮಿಕರು ಲಾಕ್ ಆಗಿದ್ದಾರೆ. ಹೀಗಾಗಿ ಈ ಬಡ ಕುಟುಂಬಗಳು ಆಹಾರಕ್ಕಾಗಿ ಪರಿತಪಿಸುತ್ತಿವೆ. ಆಂಧ್ರದಲ್ಲಿ ಕನ್ನಡದವರೆಂದು ರೇಷನ್ ಕಿಟ್ ಕೊಡಲು ಹಿಂದೇಟು ಹಾಕುತ್ತಿದ್ದಾರೆ. ಇದರಿಂದ ತುತ್ತಿನ ಚೀಲ ತುಂಬಿಸಿಕೊಳ್ಳಲು ಕಾರ್ಮಿಕರು ಹರಹಸಾಸ ಪಡುತ್ತಿದ್ದಾರೆ.