68 ಲಕ್ಷ ರೈತರಿಗೆ ಗುರುತಿನ ಚೀಟಿ: ಸಚಿವ ಬಿ.ಸಿ.ಪಾಟೀಲ್

First Published Mar 1, 2021, 1:15 PM IST

ಹುಬ್ಬಳ್ಳಿ(ಮಾ.01): ‘ರಾಜ್ಯಾದ್ಯಂತ 68 ಲಕ್ಷ ರೈತರಿಗೆ ‘ಸ್ವಾಭಿಮಾನಿ ರೈತ’ ಗುರುತಿನ ಚೀಟಿ​. 20 ರೈತರನ್ನೊಳಗೊಂಡ ಕೃಷಿ ಸಹಕಾರ ಸಂಘ ಸ್ಥಾಪಿಸಿ ಪ್ರತಿ ಗುಂಪಿಗೊಂದು ಟ್ರ್ಯಾಕ್ಟರ್‌ ವಿತರಣೆ. ಕೀಟಬಾಧೆ, ಬೆಳೆರೋಗ ಪರಿಹಾರಕ್ಕಾಗಿ ಆ್ಯಂಬುಲೆನ್ಸ್‌ ಮಾದರಿಯಲ್ಲಿ ‘ಕೃಷಿ ಸಂಜೀವಿನಿ’ ವಾಹನ​- ರೈತರಿಗೆ ಅನುಕೂಲ’ವಾಗಲಿದೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್‌ ಹೇಳಿದ್ದಾರೆ. 

ಧಾರವಾಡ ಜಿಲ್ಲೆಯ ನಲವಗುಂದ ತಾಲೂಕಿನಲ್ಲಿ ಆಯೋಜಿಸಲಾಗಿದ್ದ ‘ರೈತರೊಂದಿಗೆ ಒಂದು ದಿನ’ ಕಾರ್ಯಕ್ರಮ
undefined
ತಾಲೂಕಿನ ವಿವಿಧ ಗ್ರಾಮಗಳಲ್ಲಿ ಸಂಚರಿಸಿ ರೈತರೊಂದಿಗೆ ಕೃಷಿ ಚಟುವಟಿಕೆಗಳಲ್ಲಿ ಪಾಲ್ಗೊಂಡ ಸಚಿವ ಬಿ.ಸಿ.ಪಾಟೀಲ್
undefined
ಬೆಳವಟಿಗೆಯಲ್ಲಿ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವ ಬಿ.ಸಿ.ಪಾಟೀಲ್, ನಮ್ಮ ರೈತರಿಗೆ ಯಾವುದೇ ಬಗೆಯ ಗುರುತಿನ ಚೀಟಿ ಇಲ್ಲ. ಈ ನಿಟ್ಟಿನಲ್ಲಿ ರೈತರಿಗೆ ‘ಸ್ವಾಭಿಮಾನಿ ರೈತ’ ಎಂಬ ಗುರುತಿನ ಚೀಟಿ ವಿತರಿಸಲು ನಿರ್ಧರಿಸಲಾಗಿದೆ. ಇದರಲ್ಲಿ ರೈತನ ಫೋಟೋ, ಆಧಾರ ಸಂಖ್ಯೆ, ಊರು, ವಿಳಾಸ ದಾಖಲಾಗಿರುತ್ತದೆ. ಕ್ಯೂಆರ್ಕೋಡ್ಕೂಡ ಇರುತ್ತದೆ. ಈಗಾಗಲೇ ಕೊಪ್ಪಳ ಜಿಲ್ಲೆಯಲ್ಲಿ ಪ್ರಾಯೋಗಿಕವಾಗಿ 1.5 ಲಕ್ಷ ರೈತರಿಗೆ ಈ ಕಾರ್ಡ್ವಿತರಿಸಲಾಗುತ್ತಿದ್ದು ಮುಂದೆ ರಾಜ್ಯದ 68 ಲಕ್ಷ ರೈತರಿಗೆ ವಿಸ್ತರಿಸಲಾಗುವುದು ಎಂದರು.
undefined
ಇನ್ನು 20 ರೈತರ ಗುಂಪನ್ನು ಮಾಡಿಕೊಂಡು ಕೃಷಿ ಸಹಕಾರ ಸೊಸೈಟಿ ತೆರೆಯಲಾಗುತ್ತಿದೆ. ಸರ್ಕಾರದಿಂದ ಈ ಸೊಸೈಟಿಗೆ ಟ್ರ್ಯಾಕ್ಟರ್‌ ಖರೀದಿಸಲು 8 ಲಕ್ಷ ನೀಡಲಾಗುತ್ತಿದ್ದು 2 ಲಕ್ಷ ಸೊಸೈಟಿ ವತಿಯಿಂದ ಭರಿಸಬೇಕು. ಆ ಟ್ರ್ಯಾಕ್ಟರ್ಅನ್ನು ಗುಂಪಿನ 20 ರೈತರು ಬಳಸಬಹುದಾಗಿದೆ. ಈಗಾಗಲೇ 100 ಇಂಥ ಸೊಸೈಟಿಗಳನ್ನು ತೆರೆಯಲಾಗಿದ್ದು ಪ್ರತಿ ಗ್ರಾಮದಲ್ಲೂ ಪ್ರಾರಂಭಿಸಲಾಗುವುದು ಎಂದರು.
undefined
ರೈತರ ಬೆಳೆಗಳಿಗೆ ಕೀಟಬಾಧೆ, ರೋಗ ತಗುಲಿದರೆ ಪರಿಹಾರಕ್ಕಾಗಿ 108 ಆ್ಯಂಬುಲೆನ್ಸ್ಮಾದರಿಯಲ್ಲಿ ‘ಕೃಷಿ ಸಂಜೀವಿನಿ’ ಎಂಬ ಹೆಸರಿನಲ್ಲಿ ವಾಹನಕ್ಕೆ ಚಾಲನೆ ನೀಡಲಾಗುತ್ತಿದೆ. ಇದಕ್ಕಾಗಿ 155313 ಸಂಖ್ಯೆಗೆ ರೈತರು ಕರೆ ಮಾಡಿದರೆ ಸಾಕು. ಕೃಷಿ ಇಲಾಖೆ ಅಧಿಕಾರಿಗಳು, ಕೃಷಿ ತಜ್ಞರು ರೈತರ ಹೊಲಗಳಿಗೆ ತೆರಳಿ ಬೆಳೆಗೆ ಆಗಿರುವ ಸಮಸ್ಯೆ, ಕೀಟಬಾಧೆ ನಿವಾರಣೆಗೆ ಕೈಗೊಳ್ಳಬೇಕಾದ ಕ್ರಮ, ಮಣ್ಣಿನ ಪರೀಕ್ಷೆಯನ್ನು ಎದುರಿನಲ್ಲೇ ಮಾಡಿಕೊಡಲಿದ್ದಾರೆ ಎಂದು ವಿವರಿಸಿದರು.
undefined
ಶಾಲೆಗಳಲ್ಲಿ ಬಿಸಿಯೂಟಕ್ಕೆ ಮತ್ತು ವಿದ್ಯಾರ್ಥಿ ನಿಲಯದಲ್ಲೂ ಸಿರಿಧಾನ್ಯದ ಆಹಾರ ನೀಡಲು ನಿರ್ಧರಿಸಲಾಗಿದೆ. ಈ ಮೂಲಕ ಸಿರಿಧಾನ್ಯ ಬೆಳೆಯುವ ರೈತರಿಗೂ ಉತ್ತೇಜನ ನೀಡಿದಂತಾಗಿದೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ತಿಳಿಸಿದರು. ವಾರಕ್ಕೊಮ್ಮೆ ಮಧ್ಯಾಹ್ನದ ಬಿಸಿಯೂಟಕ್ಕೆ ಶಾಲಾ ಮಕ್ಕಳಿಗೆ ಮತ್ತು ಹಾಸ್ಟೆಲ್ನಲ್ಲಿ ದಿನಕ್ಕೊಮ್ಮೆ ಸಿರಿಧಾನ್ಯ ಆಹಾರ ನೀಡಲಾಗುವುದು ಎಂದರು. ಇದೇವೇಳೆ ಕೃಷಿ ಮಿತ್ರ ಯೋಜನೆಯಡಿ ಡಿಪ್ಲೊಮಾ ವಿದ್ಯಾರ್ಥಿಗಳನ್ನು ನೇಮಕ ಮಾಡಿಕೊಳ್ಳುವ ಕುರಿತು ಮುಖ್ಯಮಂತ್ರಿ ಚರ್ಚಿಸಿದ್ದೇನೆ. ಬಹುಶಃ ಬಜೆಟ್ನಲ್ಲಿ ಘೋಷಣೆ ಮಾಡಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
undefined
click me!