ಪಶು-ಪಕ್ಷಿಗಳಿಗೆ ಇರುವಷ್ಟು ಜಾಣ್ಮೆ ಮನುಷ್ಯರಿಗೆ ಇರುವುದಿಲ್ಲವೇನೋ ಎನ್ನುವಂಥ ರೀತಿಯಲ್ಲಿ ಹಲವಾರು ಘಟನೆಗಳು ಆಗಾಗ್ಗೆ ನಡೆಯುತ್ತಲೇ ಇರುತ್ತವೆ. ಅದರ ಸಾಲಿಗೆ ಸೇರಿದೆ ಈ ಅಭಿಮನ್ಯು ಎನ್ನುವ ಪಾರಿವಾಳ. ಈ ಪಾರಿವಾಳವು ಮಂಡ್ಯದಲ್ಲಿರುವ ತನ್ನ ಯಜಮಾನನ್ನು ಹುಡುಕಿ ದೆಹಲಿಯಿಂದ ಬರೋಬ್ಬರಿ 52 ದಿನಗಳ ಕಾಲ ಪ್ರಯಾಣ ಬೆಳೆಸಿ 1,790 ಕಿಲೋ ಮೀಟರ್ ಹಾರಿ ಬಂದಿದೆ.
27
ದಾಖಲೆ ಬರೆದ ಮಂಡ್ಯದ 'ಗಂಡು'
ಈ ಮೂಲಕ ದಾಖಲೆಯನ್ನೂ ಸೃಷ್ಟಿಸಿದೆ ಮಂಡ್ಯದ ಗಂಡು! ಅಷ್ಟಕ್ಕೂ ಇಂಥದ್ದೊಂದು ಘಟನೆಗೆ ಸಾಕ್ಷಿಯಾದದ್ದು ‘ಕರ್ನಾಟಕ ಹೋಮಿಂಗ್ ಪಿಜನ್ ಫೆಡರೇಷನ್’ ಆಯೋಜಿಸಿದ್ದ ರೇಸ್‌ನಲ್ಲಿ. ಕರ್ನಾಟಕದ ಕರ್ನಾಟಕ ಹೋಮಿಂಗ್ ಪಿಜನ್ ಫೆಡರೇಷನ್ ನವರು ದೆಹಲಿಯಲ್ಲಿ ಈ ರೇಸ್ ಅನ್ನು ಆಯೋಜಿಸಿದ್ದರು. ಕರ್ನಾಟಕ, ತಮಿಳುನಾಡು, ಆಂಧ್ರ ಪ್ರದೇಶ ಮತ್ತು ಕೇರಳದಿಂದ ಒಟ್ಟು 22 ಪಾರಿವಾಳಗಳು ಈ ರೇಸ್‌ನಲ್ಲಿ ಭಾಗವಹಿಸಿದ್ದವು.
37
ಕಾಲಿಗೆ ಗುರುತಿಗಾಗಿ ರಿಂಗ್
ಇದು ರೇಸಿಂಗ್ ಆಗಿರುವ ಕಾರಣ, ಪಾರಿವಾಳಗಳ ಗುರುತಿಗೆ ಕಾಲಿಗೆ ರಿಂಗ್ ಹಾಕಲಾಗಿತ್ತು. ಏಪ್ರಿಲ್ 5 ರಂದು ದೆಹಲಿಯಿಂದ ಪಾರಿವಾಳಗಳನ್ನ ಹಾರಿಬಿಡಲಾಗಿತ್ತು.
47
ಏಪ್ರಿಲ್ 5ರಂದು ನಡೆದ ಸ್ಪರ್ಧೆ
ದೆಹಲಿಯಲ್ಲಿ ಏಪ್ರಿಲ್ 5 ರಂದು ಎಲ್ಲಾ ಪಾರಿವಾಳಗಳನ್ನು ಹಾರಿಬಿಡಲಾಗಿತ್ತು. ಈ ಪೈಕಿ 14 ಪಾರಿವಾಳಗಳು ತಮ್ಮ ಮೂಲ ನೆಲೆಗೆ ವಾಪಸಾಗಿವೆ. ಈ ಪೈಕಿ ಅತ್ಯಂತ ಚಿಕ್ಕ ಪಾರಿವಾಳ ಎನ್ನಿಸಿಕೊಂಡಿರೋದು ಅಭಿಮನ್ಯು.
57
ವಿ.ಸಿ.ಫಾರಂನ ಪಾರಿವಾಳ
ಇದರ ಮಾಲಿಕ ಮಂಡ್ಯದ ವಿ.ಸಿ.ಫಾರಂನ ಶ್ರೀಧರ್. ಈ ಪಾರಿವಾಳವು ದಿನಗಳ ಕಾಲ ಪ್ರಯಾಣ ಬೆಳೆಸಿ 1,790 ಕಿಲೋ ಮೀಟರ್ ಹಾರಿ ಮಾಲೀಕ ಶ್ರೀಧರ್ ಅವರನ್ನು ತಲುಪಿದೆ. ಆ ಮೂಲಕ ಮೊದಲ ರೇಸ್ನಲ್ಲೇ ಯಶಸ್ಸು ಕಂಡ ಅತಿ ಚಿಕ್ಕ ಪಾರಿವಾಳವೆಂಬ ದಾಖಲೆ ಬರೆದಿದೆ.
67
ಶ್ರೀಧರ್ ಸಂತಸ
'ನಾನು ಸಾಕಿದ ಪಾರಿವಾಳ ಇಷ್ಟು ದೀರ್ಘ ದೂರವನ್ನು ಹಾರಾಟ ನಡೆಸಿ ವಾಪಸ್ಸಾಗಿರುವುದು ನನಗೆ ಹೆಮ್ಮೆಯ ವಿಷಯ' ಎಂದು ಶ್ರೀಧರ್ ತಮ್ಮ ಸಂತಸವನ್ನು ವ್ಯಕ್ತಪಡಿಸಿದ್ದಾರೆ. ಕರ್ನಾಟಕ ಹೋಮಿಂಗ್ ಪಿಜನ್ ಫೆಡರೇಶನ್ ಆಯೋಜಿಸಿದ ಈ ರೇಸ್, ಪಾರಿವಾಳಗಳ ಸಾಮರ್ಥ್ಯ ಮತ್ತು ನಿಷ್ಠೆಯನ್ನು ಪರೀಕ್ಷಿಸುವ ಒಂದು ವಿಶಿಷ್ಟ ಸ್ಪರ್ಧೆಯಾಗಿದೆ.
77
ದಾಖಲೆ ಬರೆದ ಮಂಡ್ಯದ ಪಾರಿವಾಳ
ಇದರಲ್ಲಿ ‘ಅಭಿಮನ್ಯು’ ವಿಜಯ ಸಾಧಿಸಿದ್ದಾನೆ. ಈ ಕ್ಷೇತ್ರದಲ್ಲಿ ಆಸಕ್ತಿ ಹೊಂದಿರುವವರಿಗೆ ಈತ ಈಗ ಸ್ಫೂರ್ತಿಯಾಗಿದ್ದಾನೆ. ಈ ಘಟನೆಯು ಮಂಡ್ಯ ಜಿಲ್ಲೆಯ ಹೆಮ್ಮೆಯನ್ನು ಇನ್ನಷ್ಟು ಉನ್ನತೀಕರಿಸಿದ್ದು, ಪಾರಿವಾಳ ರೇಸಿಂಗ್‌ನಲ್ಲಿ ಕರ್ನಾಟಕದ ಸಾಮರ್ಥ್ಯವನ್ನು ರಾಷ್ಟ್ರೀಯ ಮಟ್ಟದಲ್ಲಿ ತೋರಿಸಿದೆ ಎಂದು ಶ್ಲಾಘನೆ ವ್ಯಕ್ತವಾಗುತ್ತಿದೆ.