ಕೋಮಲಾಪುರ ಸರ್ಕಾರಿ ಶಾಲೆಯಲ್ಲಿ ಕೋಲಾಹಲ ಎಬ್ಬಿಸಿದ ಹೆಡ್ ಮಾಸ್ಟರ್ 2ನೇ ಹೆಂಡ್ತಿ; ಮಕ್ಕಳಿಲ್ಲದ ರೂಮಿನಲ್ಲಿ ರಂಪಾಟ!

Published : Mar 04, 2026, 06:28 PM IST

ಕೊಪ್ಪಳ ಜಿಲ್ಲೆಯ ಕೋಮಲಾಪುರ ಗ್ರಾಮದ ಸರ್ಕಾರಿ ಶಾಲೆಯ ಮುಖ್ಯ ಶಿಕ್ಷಕರ ಕೌಟುಂಬಿಕ ಕಲಹವು ಶಾಲೆಯವರೆಗೂ ತಲುಪಿದೆ. ಅವರ ಎರಡನೇ ಪತ್ನಿ ನಿತ್ಯವೂ ಶಾಲೆಗೆ ಬಂದು ಗಲಾಟೆ ಮಾಡುತ್ತಿರುವುದರಿಂದ ಮಕ್ಕಳ ವಿದ್ಯಾಭ್ಯಾಸಕ್ಕೆ ತೊಂದರೆಯಾಗಿದ್ದು, ಗ್ರಾಮಸ್ಥರು ಹಾಗೂ ಪೋಷಕರು ಕ್ರಮಕ್ಕೆ ಆಗ್ರಹಿಸಿದ್ದಾರೆ.

PREV
15

ಕೊಪ್ಪಳ (ಮಾ.04): ವಿದ್ಯಾ ದೇಗುಲವಾಗಬೇಕಿದ್ದ ಶಾಲಾ ಆವರಣವೊಂದು ಈಗ ಕೌಟುಂಬಿಕ ಕಲಹದ ರಣರಂಗವಾಗಿ ಮಾರ್ಪಟ್ಟಿದೆ. ಶಾಲೆಯ ಮುಖ್ಯ ಶಿಕ್ಷಕನ ವೈಯಕ್ತಿಕ ಬದುಕಿನ ಜಗಳ ಬೀದಿಗೆ ಬಂದಿದ್ದು, ಅವರ ಎರಡನೇ ಪತ್ನಿ ಪ್ರತಿದಿನ ಶಾಲೆಗೆ ಬಂದು ರಂಪಾಟ ಮಾಡುತ್ತಿರುವುದು ಮಕ್ಕಳ ವಿದ್ಯಾಭ್ಯಾಸದ ಮೇಲೆ ಗಂಭೀರ ಪರಿಣಾಮ ಬೀರಿದೆ. ಈ ಆತಂಕಕಾರಿ ಘಟನೆ ಕೊಪ್ಪಳ ಜಿಲ್ಲೆಯ ಕುಕನೂರು ತಾಲೂಕಿನ ಕೋಮಲಾಪುರ ಗ್ರಾಮದಲ್ಲಿ ನಡೆದಿದೆ.

25

ಘಟನೆಯ ವಿವರ:

ಕೋಮಲಾಪುರ ಗ್ರಾಮದ ಸರ್ಕಾರಿ ಹಿರಿಯ ಪ್ರೌಢಶಾಲೆಯ ಮುಖ್ಯ ಶಿಕ್ಷಕರಾದ ಸಿದ್ದೇಶ ಶೆಟ್ಟರ್ ಈ ವಿವಾದದ ಕೇಂದ್ರಬಿಂದು. ಸಿದ್ದೇಶ ಅವರಿಗೆ ಈಗಾಗಲೇ ಮೊದಲ ಪತ್ನಿ ಇದ್ದಾರೆ ಎನ್ನಲಾಗಿದ್ದರೂ, ಕಳೆದ ನಾಲ್ಕು ವರ್ಷಗಳ ಹಿಂದೆ ಚನ್ನಮ್ಮ ಎಂಬಾಕೆಯನ್ನು ಎರಡನೇ ಮದುವೆಯಾಗಿದ್ದರು. ಕಳೆದ ನಾಲ್ಕು ವರ್ಷಗಳಿಂದ ಸಂಸಾರ ಸುಗಮವಾಗಿಯೇ ಸಾಗಿತ್ತು. ಆದರೆ, ಕಳೆದ ನಾಲ್ಕೈದು ತಿಂಗಳಿಂದ ದಂಪತಿಗಳ ನಡುವೆ ಬಿರುಕು ಮೂಡಿದ್ದು, ಇದು ಶಾಲಾ ಆವರಣದವರೆಗೂ ತಲುಪಿದೆ.

35

ನಿತ್ಯವೂ ಶಾಲೆಗೆ ಬಂದು ರಂಪಾಟ:

ಮುಖ್ಯ ಶಿಕ್ಷಕ ಸಿದ್ದೇಶ ಅವರ ಎರಡನೇ ಪತ್ನಿ ಚನ್ನಮ್ಮ ಕಳೆದ ಕೆಲವು ತಿಂಗಳಿಂದ ನಿಯಮಿತವಾಗಿ ಶಾಲೆಗೆ ಆಗಮಿಸಿ ಗಲಾಟೆ ಮಾಡುತ್ತಿದ್ದಾರೆ. ಇಂದು ಕೂಡ ಶಾಲೆಗೆ ನುಗ್ಗಿದ ಚನ್ನಮ್ಮ, ನೇರವಾಗಿ ಮುಖ್ಯ ಶಿಕ್ಷಕರ ಕೊಠಡಿಗೆ ತೆರಳಿ ಸಿದ್ದೇಶ ಅವರೊಂದಿಗೆ ವಾಗ್ವಾದಕ್ಕಿಳಿದಿದ್ದಾರೆ. ಜೋರಾಗಿ ಕಿರುಚಾಡುತ್ತಾ ಹೈಡ್ರಾಮಾ ಮಾಡಿರುವ ಆಕೆಯ ವರ್ತನೆಯಿಂದ ಶಾಲಾ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ದಂಗಾಗಿದ್ದಾರೆ.

45

ರೋಸಿಹೋದ ಗ್ರಾಮಸ್ಥರು ಮತ್ತು ವಿದ್ಯಾರ್ಥಿಗಳು:

ದಿನನಿತ್ಯ ನಡೆಯುತ್ತಿರುವ ಈ ನಾಟಕದಿಂದ ಕೋಮಲಾಪುರ ಗ್ರಾಮಸ್ಥರು ಅಕ್ಷರಶಃ ರೋಸಿಹೋಗಿದ್ದಾರೆ. 'ಶಿಕ್ಷಕರು ಮಕ್ಕಳಿಗೆ ಮಾದರಿಯಾಗಿರಬೇಕು. ಆದರೆ ಇಲ್ಲಿ ಮುಖ್ಯ ಶಿಕ್ಷಕರೇ ತಮ್ಮ ಕುಟುಂಬದ ಜಗಳವನ್ನು ಶಾಲೆಗೆ ಎಳೆತರುತ್ತಿದ್ದಾರೆ. ಇದರಿಂದ ಮಕ್ಕಳ ಮನಸ್ಸಿನ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದೆ. ಸರಿಯಾಗಿ ಪಾಠ ಕೇಳಲು ಸಾಧ್ಯವಾಗುತ್ತಿಲ್ಲ' ಎಂದು ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

55

ವಿದ್ಯಾರ್ಥಿಗಳ ಭವಿಷ್ಯದ ಜೊತೆ ಚೆಲ್ಲಾಟವಾಡುತ್ತಿರುವ ಈ ಪ್ರವೃತ್ತಿಯನ್ನು ನಿಲ್ಲಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ. ಶಾಲೆಯ ಶಿಸ್ತು ಕಾಪಾಡಬೇಕಾದ ಮುಖ್ಯ ಶಿಕ್ಷಕರೇ ಇಂತಹ ಸಂಕಷ್ಟಕ್ಕೆ ಸಿಲುಕಿರುವುದು ಇಲಾಖೆಗೂ ಮುಜುಗರ ತಂದೊಡ್ಡಿದೆ. ಕೂಡಲೇ ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಗಳು ಮಧ್ಯಪ್ರವೇಶಿಸಿ ಈ ಸಮಸ್ಯೆಯನ್ನು ಬಗೆಹರಿಸಬೇಕು ಅಥವಾ ಮುಖ್ಯ ಶಿಕ್ಷಕರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂಬ ಆಗ್ರಹ ಕೇಳಿಬಂದಿದೆ.

ಸದ್ಯ ಶಾಲೆಯಲ್ಲಿ ನಡೆಯುತ್ತಿರುವ ಈ 'ಪತ್ನಿ ಪುರಾಣ' ಕುಕನೂರು ತಾಲೂಕಿನಾದ್ಯಂತ ಭಾರಿ ಚರ್ಚೆಗೆ ಗ್ರಾಸವಾಗಿದೆ.

Read more Photos on
click me!

Recommended Stories