ಕಳೆದ ಕೆಲವು ದಿನ ಜಿಟಿಜಿಟಿ ಮಳೆ ಬಿದ್ದ ಕರಾವಳಿಯಲ್ಲೀಗ ಗಾಳಿ ಹೆಚ್ಚಾಗಿದೆ.
ರಣ ಭಯಂಕರ ಬಿರುಗಾಳಿಗೆ ಬೆಳ್ತಂಗಡಿಯ ಜನತೆ ಬೆಚ್ಚಿ ಬಿದ್ದಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನಲ್ಲಿ ಭಾರೀ ರಭಸದಲ್ಲಿ ಗಾಳಿ ಬೀಸಿದೆ.
ಭಾರೀ ಗಾಳಿಯ ರಭಸಕ್ಕೆ ಹಲವು ಕಡೆ ಮನೆಯ ಹೆಂಚು ಹಾರಿ ಹೋದ ಘಟನೆಯೂ ನಡೆದಿದೆ
ಗಾಳಿಯಿಂದಾಗಿ ಕೃಷಿಗೂ ಭಾರೀ ಪ್ರಮಾಣದಲ್ಲಿ ಹಾನಿಯಾಗಿದೆ
ತೆಂಗಿನ ಮರ, ಅಡಿಕೆ ಮರಗಳು ಗಾಳಿಗೆ ಧರಾಶಾಹಿಯಾಗಿವೆ.
ಬೆಳ್ತಂಗಡಿ ತಾಲೂಕಿನ ಮಲವಂತಿಗೆ, ಮಕ್ಕಿ, ದೈಪಿತ್ತಿಲು, ಎಲ್ಯಾರುಕಂಡದಲ್ಲಿ ಬಿರುಗಾಳಿ ಆರ್ಭಟ ಜೋರಾಗಿದೆ
ನಿನ್ನೆ ಸಂಜೆ ಮತ್ತು ಇಂದು ಬೆಳಗ್ಗೆ ಗಾಳಿಯ ಆರ್ಭಟ ಮುಂದುವರಿದಿದೆ.
Suvarna News