ಮಂಗಳೂರಿನಲ್ಲಿ ಸುರಿಯುತ್ತಿರೋ ಭಾರೀ ಮಳೆಗೆ ಅರಬ್ಬೀ ಸಮುದ್ರ ಪ್ರಕ್ಷುಬ್ಧವಾಗಿದೆ. ದಡಕ್ಕೆ ಅಪ್ಪಳಿಸುತ್ತಿರುವ ಭಾರೀ ಗಾತ್ರದ ಅಲೆಗಳಿಂದ ಉಳ್ಳಾಲದ ಬಟ್ಟಪಾಡಿ, ಸೋಮೇಶ್ವರ, ಉಚ್ಚಿಲ ಕಡಲ ಕಿನಾರೆಯಲ್ಲಿ ಆತಂಕ ಹೆಚ್ಚಾಗಿದೆ. ಅಲೆಗಳ ಅಬ್ಬರ ಕಂಡು ಉಚ್ಚಿಲದ ಸಮುದ್ರ ಬದಿ ರೆಸಾರ್ಟ್ ನಲ್ಲಿರೋ ಪ್ರವಾಸಿಗರಲ್ಲಿಯೂ ಆತಂಕ ಮನೆ ಮಾಡಿದೆ