Channakeshava temple donation theft: ಹಾಸನದ ವಿಶ್ವ ವಿಖ್ಯಾತ ಬೇಲೂರು ಚನ್ನಕೇಶವ ದೇಗುಲದಲ್ಲೂ ಲಕ್ಷ ಲಕ್ಷ ಹುಂಡಿ ಹಣ ಕಳವು!

Published : Jul 09, 2026, 10:46 AM IST

Hassan world famous belur channakeshava temple donation theft:  ಹಾಸನ ಪಟ್ಟಣದ ಶ್ರೀ ಚನ್ನಕೇಶವ ದೇಗುಲದ ಹುಂಡಿ ಹಣ ಎಣಿಕೆ ಮಾಡುವ ವೇಳೆ ₹1.98 ಲಕ್ಷ ನಗದು ಕಳ್ಳತನ ಮಾಡಲು ಯತ್ನಿಸಿದ್ದ ಆರೋಪಿಯನ್ನು ಬಂಧಿಸಲಾಗಿದೆ. ವಿಡಿಯೋ ಗ್ರಾಫರ್ ನೀಲಕಂಠ ಸಿಕ್ಕಿಬಿದ್ದಿದ್ದು ಹೇಗೆ?

PREV
15
ವಿಶ್ವ ವಿಖ್ಯಾತ ಹಾಸನದ ಚನ್ನಕೇಶವ ದೇಗುಲದಲ್ಲಿ ದೇಣಿಗೆ ಕಳ್ಳತನ

ಅಯೋಧ್ಯೆ ರಾಮ ಮಂದಿರ, ಬದರಿನಾಥ ದೇಗುಲದಲ್ಲಿ ದೇಣಿಗೆ ಕಳವು ಪ್ರಕರಣದಲ್ಲಿ ದೇಶಾದ್ಯಂತ ಸಂಚಲನ ಸೃಷ್ಟಿಸಿರುವ ಬೆನ್ನಲ್ಲೇ ಇದೀಗ ಕರ್ನಾಟಕದ ಹಾಸನ ಜಿಲ್ಲೆಯ ವಿಶ್ವ ವಿಖ್ಯಾತ ಚನ್ನಕೇಶವ ದೇಗುಲ(Channakeshava Temple)ದಲ್ಲಿಯೂ ಹುಂಡಿ ಎಣಿಕೆ ವೇಳೆ ಲಕ್ಷ ಲಕ್ಷ ಹಣ ಎಗರಿಸಿದ ಘಟನೆ ನಡೆದಿದೆ.

25
ಬೇಲೂರು ಚನ್ನಕೇಶವ ದೇವಾಲಯದಲ್ಲಿ ಕಳ್ಳತನ ಆರೋಪಿ ವಶಕ್ಕೆ

ಗರ್ಭಗುಡಿಯ ಹುಂಡಿ ತೆಗೆದು ಹಣವನ್ನು ಎಣಿಸಲು ದೇಗುಲದ ಹಿಂಭಾಗದ ಕಲ್ಯಾಣ ಮಂಟಪಕ್ಕೆ ತಂದು ಸುರಿಯುತ್ತಿದ್ದ ಸಂದರ್ಭದಲ್ಲಿ ಅಲ್ಲಿ ವಿಡಿಯೋ ಚಿತ್ರೀಕರಣ ಮಾಡಲು ನಿಯೋಜಿಸಿದ್ದ ನೀಲಕಂಠ ಎಂಬಾತ ಹಣ ಕಳವು ಮಾಡಿದ್ದು, ಪೊಲೀಸರ ಸಮಯೋಚಿತ ಕಾರ್ಯಾಚರಣೆಯಿಂದ ಕಳ್ಳತನದ ಯತ್ನ ವಿಫಲವಾಗಿದೆ. ಆರೋಪಿ ಹುಂಡಿಯಿಂದ ತೆಗೆದ ಕಳವು ಮಾಡಲು ಯತ್ನಿಸಿದ್ದ ವೇಳೆ ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಧಾವಿಸಿ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.

35
ವಿಡಿಯೋ ಗ್ರಾಫರ್ ನೀಲಕಂಠನಿಂದ ನಿಂದ ಕೃತ್ಯ

ದೇಣಿಗೆ ಹಣ ಕಳ್ಳತನವಾಗಬಾರದು ಎಲ್ಲವೂ ಪಾರದರ್ಶಕವಾಗಿಡಲು ವಿಡಿಯೋ ರೆಕಾರ್ಡ್ ಮಾಡಲು ನೀಲಕಂಠನನ್ನು ಕರೆಸಲಾಗಿತ್ತು. ಆದರೆ ಘಟನೆ ಬಳಿಕ ವಿಡಿಯೋ ಮಾಡಲು ಕರೆಸಿದರೋ, ವಿಡಿಯೋ ಮಾಡುವ ನೆಪದಲ್ಲಿ ದೇಗುಲದ ಹಣ ಎಗರಿಸಲು ಕರೆಸಿದರೋ ಎಂದು ಸ್ಥಳೀಯರು, ಭಕ್ತರು ಅನುಮಾನ ವ್ಯಕ್ತಪಡಿಸಿದ್ದಾರೆ. 

ವಿಡಿಯೋ ಗ್ರಾಫರ್ ನೀಲಕಂಠ ಸಾವಿರೋ ಎರಡು ಸಾವಿರೋ ಕದ್ದಿದ್ದಲ್ಲ. ಈ ಭೂಪ ಬರೋಬ್ಬರಿ 1.98 ಲಕ್ಷ ಹಣ ಎಗರಿಸಿದ್ದಾನೆ ಊಹಿಸಿಕೊಳ್ಳಿ. ಇಷ್ಟೊಂದು ಹಣ ಸಿಬ್ಬಂದಿ ನಡುವೆ ಕದಿಯಲು ಹೇಗೆ ಸಾಧ್ಯ?

45
ಚನ್ನಕೇಶವ ದೇವಾಲಯ ಹುಂಡಿ ಹಣ ಕಳವು: ಆಡಳಿತ ಮಂಡಳಿ ಕೈವಾಡ?

ಕಾರ್ಯಾಚರಣೆಯ ವೇಳೆ ಒಟ್ಟು 1,98,000 ನಗದು ಹಣವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಯನ್ನು ವಿಚಾರಣೆಗೆ ಒಳಪಡಿಸಿದ್ದು, ಕಳ್ಳತನದ ಯತ್ನದ ಹಿಂದಿನ ಉದ್ದೇಶ ಹಾಗೂ ಇತರರ ಕೈವಾಡವಿದೆಯೇ ಎಂಬ ಬಗ್ಗೆ ತನಿಖೆ ಮುಂದುವರಿಸಿದ್ದಾರೆ. ಈ ಘಟನೆ ಸ್ಥಳೀಯರಲ್ಲಿ ಆತಂಕ ಉಂಟುಮಾಡಿದರೂ, ತ್ವರಿತವಾಗಿ ಕಾರ್ಯನಿರ್ವಹಿಸಿದ ಪೊಲೀಸ್ ಸಿಬ್ಬಂದಿಯ ಕ್ರಮಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.

55
ಚನ್ನಕೇಶವ ದೇಗುಲ ಹುಂಡಿ ಎಣಿಕೆ ಕಳ್ಳತನ ಪ್ರಕರಣ ತನಿಖೆ

ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ತಹಸೀಲ್ದಾರ್ ಶ್ರೀಧರ್ ಕಂಕಣವಾಡಿ ಅಲ್ಲೇ ಇದ್ದ ಆರೋಪಿಯನ್ನು ಪೊಲೀಸರಿಗೆ ಒಪ್ಪಿಸಿ ಸೂಕ್ತ ತನಿಖೆ ನಡೆಸಬೇಕು ಎಂದು ತಿಳಿಸಿದರು.

ತನಿಖೆಗೆ ಸ್ಥಳೀಯರ ಆಗ್ರಹ 

ದೇವಾಲಯ ಆಡಳಿತ ಮಂಡಳಿ, ಸಿಬ್ಬಂದಿ, ಅಧಿಕಾರಿಗಳ ಕೈವಾಡವಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಅಧಿಕಾರಿಗಳ ಶಾಮೀಲಿನಿಂದ ಹಲವು ಬಾರಿ ಕಳ್ಳತನ ಮಾಡಿರುವ ಆರೋಪ ಕೇಳಿಬಂದಿದೆ ಎಂದರು. ಈ ಬಗ್ಗೆ ಸಹ ತನಿಖೆಯಾಗಬೇಕು, ಅಧಿಕಾರಿಗಳ ಪಾತ್ರವನ್ನ ಪತ್ತೆಹಚ್ಚಬೇಕು ಎಂಬುದು ಸ್ಥಳೀಯರು ಆಗ್ರಹಿಸಿದರು.

Read more Photos on
click me!

Recommended Stories