ಕೊಡಗು(ಫೆ. 21) ಇಬ್ಬರನ್ನು ಕೊಂದ ವ್ಯಾಘ್ರ ಕೊನೆಗೂ ಸೆರೆಯಾಗಿದ್ದು ಆತಂಕ ದೂರವಾಗಿದೆ. ಪೊನ್ನಂಪೇಟೆ ತಾಲೂಕಿನ ಮಂಚಳ್ಳಿ ಗ್ರಾಮದಲ್ಲಿ ಹುಲಿ ಸೆರೆ ಸಿಕ್ಕಿದೆ.ಮಧ್ಯಾಹ್ನ ಬಳಿಕ ಕಾರ್ಯಾಚರಣೆ ಕೈಗೊಂಡಿದ್ದ ಅರಣ್ಯ ಇಲಾಖೆಗೆ ಯಶಸ್ಸು ಸಿಕ್ಕಿದೆ. ಅರಿವಳಿಕೆ ಮದ್ದು ಪ್ರಯೋಗಿಸಿ ಹುಲಿಯನ್ನು ಸೆರೆ ಹಿಡಿಯಲಾಗಿದೆ. ಕೊಡಗು ಜಿಲ್ಲೆ ಪೊನ್ನಂಪೇಟೆ ತಾಲೂಕಿನ ಮಂಚಳ್ಳಿ ಗ್ರಾಮದಲ್ಲಿ ಸಸೆರೆ ಸಿಕ್ಕಿದೆ. 10 ವರ್ಷ ಪ್ರಾಯದ ಹೆಣ್ಣು ಹುಲಿಯನ್ನು ಮೈಸೂರಿನ ಕೂರ್ಗಳ್ಳಿಗೆ ಹುಲಿ ರವಾನೆ ಮಾಡಲಾಗಿದೆ. ಸಾಕಾನೆಗಳ ಮೂಲಕ ಹುಲಿ ಸೆರೆಗೆ ಅರಣ್ಯ ಇಲಾಖೆ ಕಾರ್ಯಾಚರಣೆ ನಡೆಸಿತ್ತು. ಶನಿವಾರ ಸಂಜೆ ಬಾಲಕನನ್ನ ಕೊಂದಿದ್ದ ಹುಲಿ ಭಾನುವಾರ ಬೆಳಗ್ಗೆ ಮಹಿಳೆಯನ್ನು ಬಲಿ ಪಡೆದಿತ್ತು. ಮತ್ತಿಗೋಡು ಶಿಬಿರದಿಂದ ಆನೆಗಳ ಆಗಮನವಾಗಿದ್ದು ಹಿರಿಯ ಅಧಿಕಾರಿಗಳು ಸ್ಥಳದಲ್ಲೇ ಇದ್ದರು. ನರಭಕ್ಷಕ ಹುಲಿ ಕೊನೆಗೂ ಸೆರೆ ಸಿಕ್ಕಿದ್ದು ಸದ್ಯದ ಮಟ್ಟಿಗೆ ಆತಂಕ ದೂರವಾಗಿದೆ. Forest Officers Catch Man-Eating Tiger In Karnataka Kodagu madikeri ಕೊನೆಗೂ ಸೆರೆಸಿಕ್ಕ ನರಭಕ್ಷಕ.. ಆತಂಕ ದೂರ