ಗಂಗಾವತಿಯ ಅಂಜನಾದ್ರಿ ಬೆಟ್ಟಕ್ಕೆ ಯುರೋಪ್ ಪ್ರವಾಸಿಗರು ಯಾಕೆ ಬಂದರು? ಇಲ್ಲಿದೆ ಕಾರಣ!

Published : Jul 02, 2026, 07:04 PM IST

ಸಚಿವಾಲಯದಿಂದ ಆಗಮಿಸಿದ್ದ ಈ ಪ್ರವಾಸಿಗರ ತಂಡವನ್ನು ಪುರಾತತ್ವ ಸಂಗ್ರಹಾಲಯಗಳ ಮತ್ತು ಪರಂಪರೆ ಇಲಾಖೆಯ ಉಪ ನಿರ್ದೇಶಕರಾದ ಡಾ. ಶೇಜಸ್ವರ ಅವರು ವಿವಿಧ ಐತಿಹಾಸಿಕ ಸ್ಥಳಗಳಿಗೆ ಭೇಟಿ ನೀಡಿ ಮಾಹಿತಿ ನೀಡಿದ್ದಾರೆ.

PREV
13
16 ಸದಸ್ಯರ ಪ್ರವಾಸಿಗರ ತಂಡ

ಗಂಗಾವತಿ (ಜು.02): ತಾಲೂಕಿನ ಐತಿಹಾಸಿಕ ಪ್ರಸಿದ್ಧ ಅಂಜನಾದ್ರಿ, ಹುಚ್ಚಪ್ಪಯ್ಯನ ಮಠ ಮತ್ತು ಆನೆಗೊಂದಿಯ ಗಗನ್ ಮಹಲ್ ಸ್ಥಳಗಳಿಗೆ ಯುರೋಪ್ ರಾಷ್ಟ್ರದ 16 ಸದಸ್ಯರ ಪ್ರವಾಸಿಗರ ತಂಡ ಗುರುವಾರ ಭೇಟಿ ನೀಡಿ ವಿಕ್ಷಣೆ ಮಾಡಿದರು.

23
ಐತಿಹಾಸಿಕ ಸ್ಥಳಗಳಿಗೆ ಭೇಟಿ

ಯುರೋಪ್ ರಾಷ್ಟ್ರದ ವಿದೇಶಾಂಗ ಸಚಿವಾಲಯದಿಂದ ಆಗಮಿಸಿದ್ದ ಈ ಪ್ರವಾಸಿಗರ ತಂಡವನ್ನು ಪುರಾತತ್ವ ಸಂಗ್ರಹಾಲಯಗಳ ಮತ್ತು ಪರಂಪರೆ ಇಲಾಖೆಯ ಉಪ ನಿರ್ದೇಶಕರಾದ ಡಾ. ಶೇಜಸ್ವರ ಅವರು ವಿವಿಧ ಐತಿಹಾಸಿಕ ಸ್ಥಳಗಳಿಗೆ ಭೇಟಿ ನೀಡಿ ಮಾಹಿತಿ ನೀಡಿದ್ದಾರೆ.

33
ಪ್ರಶಂಸೆ

ಅಂಜನಾದ್ರಿ ಬೆಟ್ಟ ಏರಿದ ಪ್ರವಾಸಿಗರು ಅಲ್ಲಿಂದಲೆ ನೈಸರ್ಗಿಕವಾಗಿರುವ ಪರಿಸರವನ್ನು ವೀಕ್ಷಿಸಿದ್ದಲ್ಲದೆ ತುಂಗಭದ್ರಾ ನದಿ ತೀರವನ್ನು ಪ್ರಶಂಸಿಸಿದ್ದಾರೆ. ನಂತರ ಗಗನ್ ಮಹಲ್‌ಗೆ ಆಗಮಿಸಿ ವಿಜಯನಗರ ಸಾಮ್ರಾಜ್ಯದ ಚಿತ್ರಗಳನ್ನು ವೀಕ್ಷಿಸಿದ್ದಾರೆ. ಇದಕ್ಕಿಂತ ಪೂರ್ವದಲ್ಲಿ ಹಂಪಿ, ಕಮಲಾಪುರ, ವಿಜಯ ವಿಠಲ ದೇವಸ್ಥಾನ ಸೇರಿದಂತೆ ವಿವಿಧ ಐತಿಹಾಸಿಕ ಪ್ರಸಿದ್ಧ ಸ್ಥಳಗಳನ್ನು ವೀಕ್ಷಿಸಿದ್ದಾರೆ.

Read more Photos on
click me!

Recommended Stories