ಎಣ್ಣೆ ಹೊಡೆಯೋ ಚಟ ಬಿಡಿಸಲು ಆಂಜನೇಯನಿಗೆ ಪತ್ರ ಬರೆದ ಕುಡುಕ ಭಕ್ತ..!

First Published Feb 18, 2021, 10:47 AM IST

ವಿಜಯಪುರ(ಫೆ.18): ಜಿಲ್ಲೆಯ ನಿಡಗುಂದಿ ತಾಲೂಕಿನ ಸುಪ್ರಸಿದ್ಧ ಯಲಗೂರು ಆಂಜನೇಯ ದೇಗುಲದಲ್ಲಿ ಹುಂಡಿ ಹಣ ಎಣಿಕೆ ಕಾರ್ಯ ಮುಗಿದಿದೆ. ಭಕ್ತರು ತಮ್ಮ ಇಷ್ಟಾರ್ಥಗಳನ್ನ ಈಡೇರಿಸಿಕೊಳ್ಳಲು ಆಂಜನೇಯ ಸ್ವಾಮಿಗೆ ಬರೆದ ಪತ್ರಗಳು ಹುಂಡಿಯಲ್ಲಿ ಪತ್ತೆಯಾಗಿವೆ. ಹುಂಡಿಯಲ್ಲಿ ಸಿಕ್ಕ ಎಲ್ಲ ಪತ್ರಗಳು ಸ್ವಾರಸ್ಯಕರವಾಗಿವೆ. 

"ಸಾರಾಯಿ ಕುಡಿಯುತ್ತೇನೆ, ಇಸ್ಪೀಟು, ಜೂಜು ಆಡುತ್ತೇನೆ" ಈ ದುಶ್ಚಟ ಬಿಡಿಸು ಎಂದು ಹನುಮನಿಗೆ ಪತ್ರ ಬರೆದ ಬರೆದಿದ್ದಾನೆ. ಬರೆದ ಬಾಳೇಶ ಅನ್ನೋ ಭಕ್ತ ನನ್ನನ್ನ IASIPS ಮಾಡು, ನನ್ನ ಶರ್ಟ್ ಮೇಲೆ 'ಒಂದು ಸಿಂಹ' 'ಒಂದು ಸ್ಟಾರ್' ಬರೋ ಹಾಗೇ (IPS) ಮಾಡಪ್ಪ, ನನ್ನ ಮೇಲೆ ನಮ್ಮ ಮಾವ ಬಹಳ ನಂಬಿಕೆ ಇಟ್ಟಿದ್ದಾರೆ ಉಳಿಸು ಎಂದು ಬೇಡಿಕೊಂಡಿದ್ದಾನೆ ಭಕ್ತ.
undefined
ಒಂದು ವರ್ಷದಲ್ಲಿ ಸರ್ಕಾರಿ ನೌಕರಿ ಸಿಕ್ಕರೆ ಎರಡನೇ ಸಂಬಳ‌ ನಿನಗೆ ಮೀಸಲು, ನಡೆದುಕೊಂಡು ಬಂದು ಹರಕೆ ತೀರುಸುತ್ತೇನೆ. ಮೊದಲ‌ ಸಂಬಳ ಮನೆಯ ಲಕ್ಷ್ಮೀದೇವಿಗೆ ಎಂದು ಆಂಜನೇಯ ಸ್ವಾಮಿಗೆ ಪತ್ರ ಬರೆದ ಭಕ್ತ.
undefined
ಪಿಎಸ್ಐ ನೌಕರಿ, ಬಯಸಿದ ಕಾಲೇಜಿನಲ್ಲಿ ಸೀಟ್, ಕಾಲು ನೋವು ನಿವಾರಣೆ ಮಾಡು, ಮಗಳಿಗೆ ಎಸ್.ಎಸ್.ಎಲ್.ಸಿ ಪಾಸ್ ಮಾಡು ಹೀಗೆ ಹತ್ತಾರು ಪತ್ರಗಳನ್ನ ಭಕ್ತರು ಬರೆದಿದ್ದಾರೆ.
undefined
ಹುಂಡಿಯಲ್ಲಿ ಹಾಕಿದ ಹಣ ಎಣಿಕೆ ನಡೆಸಿದ ಅಧಿಕಾರಿಗಳು, ಕಾಣಿಕೆ ಹುಂಡಿಯಲ್ಲಿ ಈ ವರ್ಷ 25 ಲಕ್ಷ ರೂಪಾಯಿ ಸಂಗ್ರಹವಾಗಿದೆ. ಮಹಾಮಾರಿ ಕೊರೋನಾ, ಲಾಕ್‌ಡೌನ್ ಮಧ್ಯೆಯು ಒಳ್ಳೆಯ ದೇಣಿಗೆ ಸಂಗ್ರಹವಾಗಿದೆ. ಉಪವಿಭಾಗಾಧಿಕಾರಿ ಬಲರಾಮ್ ರಾಠೋಡ, ನಿಡಗುಂದಿ ತಹಶಿಲ್ದಾರ್ ಶಿವಲಿಂಗಪ್ರಭು ವಾಲಿ ಸಮ್ಮುಖದಲ್ಲಿ ಹುಂಡಿ ಹಣ ಎಣಿಕೆ ಕಾರ್ಯ ನಡೆದಿದೆ.
undefined
click me!