ದಿಢೀರನೆ ಕೊರೋನಾ ಸೋಂಕಿತರು ಹೆಚ್ಚಾಗುತ್ತಿದ್ದಾರೆ ಎಂಬ ನೆಪ ಮುಂದಿರಿಸಿ ಕರ್ನಾಟಕಕ್ಕೆ ನಿತ್ಯ ನೌಕರಿಗೆ ತೆರಳುವವರ ಪಾಸ್‌ಗೆ ಕೇರಳ ಸರ್ಕಾರ ಬ್ರೇಕ್ ಹಾಕಿದೆ. ಇದರಿಂದಾಗಿ ಗಡಿನಾಡು ಕಾಸರಗೋಡಿನಿಂದ ಮಂಗಳೂರಿಗೆ ಖಾಸಗಿ ವಾಹನದಲ್ಲಿ ನಿತ್ಯ ಪಾಸ್‌ನಲ್ಲಿ ಸಂಚರಿಸುವ ಸುಮಾರು ನಾಲ್ಕು ಸಾವಿರಕ್ಕೂ ಅಧಿಕ ಮಂದಿ ಕನ್ನಡಿಗರು ಅತಂತ್ರ ಸ್ಥಿತಿಗೆ ಸಿಲುಕಿದ್ದಾರೆ.