ಮಂತ್ರಾಲಯದಲ್ಲಿ ಶ್ರೀಗುರುರಾಯರ 349 ನೇ ಆರಾಧನೆ: ಸಪ್ತರಾತ್ರೋತ್ಸವಕ್ಕೆ ವಿಧ್ಯುಕ್ತ ಚಾಲನೆ

Kannadaprabha News   | Asianet News
Published : Aug 03, 2020, 02:37 PM IST

ರಾಮಕೃಷ್ಣ ದಾಸರಿ ರಾಯಚೂರು(ಆ.03): ದೇಶದಾದ್ಯಂತ ಕೊರೋನಾ ಕರಿನೆರಳು ಸಂಪೂರ್ಣವಾಗಿ ಆವರಿಸಿದ್ದರಿಂದ ಪ್ರಸಕ್ತ ಸಾಲಿನ ಶ್ರೀಗುರುರಾಯರ 349ನೇ ಆರಾಧನಾ ಮಹೋತ್ಸವವನ್ನು ಅತ್ಯಂತ ಸರಳವಾಗಿ ಆಚರಿಸಲಾಗುತ್ತಿದೆ. ಮಠದ ಇತಿಹಾಸದಲ್ಲಿಯೇ ರಾಯರ ಆರಾಧನೆಯು ಇಷ್ಟೊಂದು ಸರಳವಾಗಿ ಆಚರಿಸುತ್ತಿರುವುದು ಇದೇ ಮೊದಲ ಬಾರಿಯಾಗಿದೆ.  

PREV
110
ಮಂತ್ರಾಲಯದಲ್ಲಿ ಶ್ರೀಗುರುರಾಯರ 349 ನೇ ಆರಾಧನೆ: ಸಪ್ತರಾತ್ರೋತ್ಸವಕ್ಕೆ ವಿಧ್ಯುಕ್ತ ಚಾಲನೆ

ಮಂತ್ರಾಲಯದ ಶ್ರೀರಾಘವೇಂದ್ರ ಸ್ವಾಮಿಗಳ ಮಠದಿಂದ ರಾಯರ ಆರಾಧನಾ ಮಹೋತ್ಸವ ನಿಮಿತ್ತ ನಡೆಸುವ ಸಪ್ತರಾತ್ರೋತ್ಸವ ಸಮಾರಂಭಕ್ಕೆ ಭಾನುವಾರ ಸಂಜೆ ಚಾಲನೆ

210

ಕೊರೋನಾ ನೀತಿ-ನಿಮಯಗಳಡಿ ಆ.8 ವರೆಗೆ ವಿವಿಧ ಧಾರ್ಮಿಕ, ಸಾಂಸ್ಕೃತಿ ಕಾರ್ಯಕ್ರಮಗಳ ಆಯೋಜನೆ 

310

ದೇಶದಲ್ಲಿ ಮಹಾಮಾರಿ ಕೊರೋನಾ ವ್ಯಾಪಕವಾಗಿ ಹರಡಿದ ಹಿನ್ನೆಲೆಯಲ್ಲಿ ಸರ್ಕಾರದ ನಿಯಮಾನುಸಾರವೇ ಅತ್ಯಂತ ಕಡಿಮೆ ಜನಸಂಖ್ಯೆಯಲ್ಲಿ ಕಾರ್ಯಕ್ರಮಗಳನ್ನು ನಡೆಸಲು ಶ್ರೀ ಮಠ ತೀರ್ಮಾನ

410

ಮಹೋತ್ಸವದ ಸಪ್ತರಾತ್ರೋತ್ಸವಕ್ಕೆ ಭಾನುವಾರ ಸಂಜೆ ಚಾಲನೆ ನೀಡಲಾಗಿದ್ದು ಏಳು ದಿನಗಳ ಕಾಲ ಅನೇಕ ಕಾರ್ಯಕ್ರಮಗಳು ನಡೆಯಲಿವೆ. 

510

ಆ.4ರಂದು ರಾಯರ ಪೂರ್ವಾರಾಧನೆ ಜರುಗಲಿದ್ದು ಅಂದು ತಿರುಮಲ ತಿರುಪತಿ ದೇವಸ್ಥಾನದಿಂದ ಶೇಷವಸ್ತ್ರ ಸಮರ್ಪಣೆಯು ನಡೆಯಲಿದೆ. 

610

ಆ.5ರಂದು ಮದ್ಯಾರಾಧನೆ ಮತ್ತು ಆ.6ರಂದು ಉತ್ತರಾಧನೆ ನಿಮಿತ್ತ ರಥೋತ್ಸವ ನಡೆಯಲಿದೆ

710

ಸಪ್ತರಾತ್ರೋತ್ಸವದಲ್ಲಿ ನಿತ್ಯ ಬೆಳಗ್ಗೆ ನೈರ್ಮಲ್ಯ ವಿಸರ್ಜನ, ಶ್ರೀಉತ್ಸವರಾಯರ ಪಾದಪೂಜೆ, ಪಂಚಾಮೃತಾ, ಶ್ರೀಮೂಲರಘುಪತಿ ವೇದವ್ಯಾಸದೇವರ ಪೂಜೆ, ಅಲಂಕಾರ ಸೇವೆ, ಮಹಾಮಂಗಳಾರತಿ, ತೀರ್ಥ ಪ್ರಸಾದ ಸಮರ್ಪಣೆ, ಪಂಡಿತರಿಂದ ದಾಸವಾಣಿ, ಪ್ರವಚನಗಳು ನಡೆಯಲಿವೆ. ವಿವಿಧ ಪ್ರದೇಶಗಳ ಪಂಡಿತರು, ಕಲಾವಿದರು ಆಗಮಿಸಿ ಪ್ರದರ್ಶನವನ್ನು ನೀಡಲಿದ್ದಾರೆ.

810

ಕೊರೋನಾ ಇರುವುದರಿಂದ ಬೇರೆ ರಾಜ್ಯಗಳಿಂದ ಸಾರ್ವಜನಿಕರ ಓಡಾಟಕ್ಕೆ ನಿಷೇಧಿಸಲಾಗಿದೆ. ಹೆಚ್ಚು ಜನ ಸೇರುವ ಸಂದರ್ಭವಲ್ಲದ ಕಾರಣ ವೈಭವದ ಆಚರಣೆಕ್ಕೆ ಶ್ರೀಮಠವು ತಿಲಾಂಜಲಿ ಹಾಡಿದೆ. ಸೀಮಿತ ಜನರಿಂದ ಮಠದ ಪ್ರಾಂಗಣದಲ್ಲಿಯೇ ಸಕಲ ಸಂಪ್ರದಾಯದಂತೆ ರಾಯರ ಆರಾಧನೆ ಮಹೋತ್ಸವ ನೆರವೇರಿಸಲಾಗುತ್ತಿದೆ. ಭಕ್ತರಿಗೆ ರಾಯರ ಪೂಜಾ ಕೈಂಕರ್ಯಗಳನ್ನು ಕಣ್ತುಂಬಿಕೊಳ್ಳುವ ಉದ್ದೇಶದಿಂದ ಮಠದ ಯುಟ್ಯೂಬ್‌ ಚಾನಲ್‌ ಮಂತ್ರಾಲಯ ವಾಹಿನಿಯಲ್ಲಿ ನೇರ ಪ್ರಸಾರದ ಸವಲತ್ತನ್ನು ಒದಿಸಿದೆ.

910

ಸದ್ಯ ಕೊರೋನಾ ಕಾಟ ವಿಪರೀತವಾಗಿರುವುದರಿಂದ ಆರಾಯರ ಆರಾಧನಾ ಮಹೋತ್ಸವದಲ್ಲಿ ಭಾರಿ ಸಂಖ್ಯೆಯಲ್ಲಿ ಜನ ಭಾಗವಹಿಸುವುದು ಸರಿಯಲ್ಲದ ಕಾರಣಕ್ಕೆ ಮುಂದಿನ ದಿನಗಳಲ್ಲಿ ಆರಾಧನಾ ಸಂಸ್ಮರಣೋತ್ಸವ ನಡೆಸಿ ಮಠದ ಶಿಷ್ಯ ವರ್ಗಕ್ಕೆ, ರಾಯರ ಭಕ್ತರಿಗೆ ಅನುಕೂಲಮಾಡಿಕೊಡಲು ಮಠವು ತೀರ್ಮಾನಿಸಿದೆ.ಭಕ್ತರು ಕೊರೋನಾ ಕಂಟಕ ಸಂಪೂರ್ಣ ತೊಲಗಿದ ಬಳಿಕ ರಾಯರ ಆರಾಧನಾ ಸಂಸ್ಮರಣೋತ್ಸವದಲ್ಲಿ ಭಾಗವಹಿಸಬಹುದಾಗಿದೆ.

1010

ಮಠದ ಪರಮ ಆಪ್ತರು, ಗಣ್ಯರು,ಶಿಷ್ಯರು, ರಾಯರ ಅಂತರಂಗದ ಭಕ್ತರು ಮಹೋತ್ಸವದಲ್ಲಿ ಭಾಗವಹಿಸಿದರು ಕಡ್ಡಾಯವಾಗಿ ಮಾಸ್ಕ್‌ ಧರಿಸುವುದು, ಸ್ಯಾನಿಟೈಸರ್‌ ಬಳಕೆ, ಭೌತಿಕ ಅಂತರ ಕಾಯ್ದುಕೊಳ್ಳುವುದು, ಥರ್ಮಲ್‌ ಸ್ಕ್ರೀನಿಂಗ್‌ ನಡೆಸುವುದು, ಮಹಾಮಾರಿಯ ಲಕ್ಷಣಗಳು ಸೇರಿ ಇತರೆ ಕಾಯಿಲೆಗಳಿದ್ದವರು, ವೃದ್ಧರು, ಭಕ್ತರು ಆಗಮಿಸುವುದನ್ನು ಶ್ರೀಮಠವು ನಿರ್ಬಂಧಿಸಿದೆ.

click me!

Recommended Stories