ಮುಂದುವರೆದ ನಮ್ಮ ಬೆಂಗಳೂರು ಪ್ರತಿಷ್ಠಾನದ ಕೊರೋನಾ ಜಾಗೃತಿ

First Published Oct 28, 2020, 7:46 AM IST

ಬೆಂಗಳೂರು(ಅ.28):  ಕೊರೋನಾ ನಿಯಂತ್ರಣಕ್ಕಾಗಿ ಮಾಸ್ಕ್‌ ಧರಿಸುವಂತೆ ನಿರಂತರವಾಗಿ ಜನ ಜಾಗೃತಿ ಮೂಡಿಸುತ್ತಿರುವ ನಮ್ಮ ಬೆಂಗಳೂರು ಪ್ರತಿಷ್ಠಾನ, ಮಂಗಳವಾರವೂ ಅಭಿಯಾನ ಮುಂದುವರಿಸಿತು. ಮಾಸ್ಕ್‌ಗಳಿರುವ ವಿಶೇಷವಾಗಿ ವಿನ್ಯಾಸ ಮಾಡಿರುವ ವಸ್ತ್ರ ಧರಿಸಿರುವ ‘ಮಾಸ್ಕಾಟ್‌’ (ಮಾಸ್ಕ್‌ ಧರಿಸುವಂತೆ ಜಾಗೃತಿ ಮೂಡಿಸುವ ರಾಯಭಾರಿ) ಮಾಸ್ಕ್‌ ವಿತರಿಸಿ ಜಾಗೃತಿ ಮೂಡಿಸಿದ್ದಾರೆ. 

ಮಂಗಳವಾರ ಬೆಳಗ್ಗೆಯಿಂದ ಸಂಜೆಯವರೆಗೂ ಕೋರಮಂಗಲದ ಸೋನಿ ಜಂಕ್ಷನ್‌ ಸುತ್ತಲಿನ ಪ್ರದೇಶದಲ್ಲಿ ಮಕ್ಕಳು, ಮಹಿಳೆಯರು, ಹಿರಿಯ ನಾಗರಿಕರು, ಪೊಲೀಸರು, ಆಟೋ ಚಾಲಕರು, ಬೈಕ್‌ ಸವಾರರು, ಪಾದಚಾರಿಗಳು ಸೇರಿದಂತೆ ಸುಮಾರು 200ಕ್ಕೂ ಹೆಚ್ಚು ಜನರಿಗೆ ಮಾಸ್ಕ್‌ ವಿತರಣೆ
undefined
ಜನನಿಬಿಡ ಪ್ರದೇಶಗಳಲ್ಲಿ ನಿಲ್ಲುವ ‘ಮಾಸ್ಕಾಟ್‌’ ಮಾಸ್ಕ್‌ ಧರಿಸದವರ ಬಳಿ ಹೋಗಿ ಉಚಿತವಾಗಿ ಮಾಸ್ಕ್‌ ವಿತರಿಸುತ್ತಾರೆ. ಬಳಿಕ, ಯಾವ ಕಾರಣಕ್ಕೆ ಮಾಸ್ಕ್‌ ಧರಿಸಬೇಕು, ಇದರಿಂದಾಗುವ ಉಪಯೋಗಗಳೇನು? ಎಂಬ ಅಂಶಗಳನ್ನು ಮನವರಿಕೆ ಮಾಡಿಕೊಡುತ್ತಾರೆ. ಮನೆಯಿಂದ ಹೊರಡುತ್ತಿದ್ದಂತೆ ಮಾಸ್ಕ್‌ ಧರಿಸುವಂತೆಯೂ ತಿಳಿಸುವ ಕಾರ್ಯ ಮಾಡಲಾಗುತ್ತದೆ ಎಂದು ತಿಳಿಸಿದ ಪ್ರತಿಷ್ಠಾನ
undefined
ಈಗಾಗಲೇ ಬಿಬಿಎಂಪಿ ಸಹಯೋಗದಲ್ಲಿ ಬೆಂಗಳೂರಿನ ವಿವಿಧಡೆ ಮಾಸ್ಕ್‌ ವಿತರಿಸಿದ ನಮ್ಮ ಬೆಂಗಳೂರು ಪ್ರತಿಷ್ಠಾನ
undefined
ಪೌರ ಕಾರ್ಮಿಕರು, ಆರೋಗ್ಯ ಕಾರ್ಯಕರ್ತರು, ನಾಗರಿಕರಿಗೆ ಮಾಸ್ಕ್‌ ವಿತರಣೆ, ಟ್ವಿಟರ್‌, ಫೇಸ್‌ಬುಕ್‌, ಇನ್‌ಸ್ಟಾಗ್ರಾಂ ಸೇರಿದಂತೆ ಸಾಮಾಜಿಕ ತಾಣಗಳಲ್ಲಿ ‘ಟ್ವೀಟಥಾನ್‌’ ಮೂಲಕವೂ ಜಾಗೃತಿ ಮೂಡಿಸುತ್ತಿರುವ ನಮ್ಮ ಬೆಂಗಳೂರು ಪ್ರತಿಷ್ಠಾನ
undefined
ಇದೀಗ ನೂತನವಾಗಿ ಮಾಸ್ಕಾಟ್‌ ಅಭಿಯಾನ ಆರಂಭಿಸಲಾಗಿದೆ. ಮಾಸ್ಕ್‌ ಧರಿಸುವುದು ಮತ್ತು ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಜನರಿಗೆ ತಿಳಿಸುವ ಕಾರ್ಯ ನಿರಂತರವಾಗಿ ಮುಂದುವರಿಯಲಿದೆ ಎಂದು ನಮ್ಮ ಬೆಂಗಳೂರು ಪ್ರತಿಷ್ಠಾನ ತಿಳಿಸಿದೆ.
undefined
click me!