ನಾಗನ ಕ್ಷೇತ್ರವೆಂದೇ ಪ್ರಖ್ಯಾತಿ ಹೊಂದಿರುವ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದ ಆಸುಪಾಸಿನಲ್ಲಿ ಸರ್ಪಗಳ ಸಂಚಾರ ಹೆಚ್ಚಾಗಿದ್ದು, ಭಕ್ತರು ಬಾರಿ ಸಂಖ್ಯೆಯಲ್ಲಿ ಇರುವ ಕಾರಣ ಈ ಸರ್ಪಗಳು ದೇವಸ್ಥಾನದ ಒಳಗೆ ಕಡಿಮೆ ಕಂಡು ಬರುತ್ತಿತ್ತು.
undefined
ಈ ಬಾರಿ ಲಾಕ್ ಡೌನ್ ಹಿನ್ನಲೆಯಲ್ಲಿ ಭಕ್ತರ ಸಂಖ್ಯೆ ಕಡಿಮೆಯಿರುವ ಕಾರಣ ಸರ್ಪಗಳು ದೇವಸ್ಥಾನದ ಒಳಗೆ ಬರುತ್ತಿದೆ.
undefined
ನಾಗರಪಂಚಮಿಯ ದಿನದಲ್ಲಿ ಕ್ಷೇತ್ರದೊಳಗೆ ಬಂದ ದೇವಸ್ಥಾನದ ಒಳಾಂಗಣದಲ್ಲೆಲ್ಲಾ ಓಡಾಡಿದೆ.
undefined
ದಕ್ಷಿಣ ಭಾರತದ ಹೆಸರಾಂತ ನಾಗಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ ದಲ್ಲೂ ನಾಗರಪಂಚಮಿಯ ಹಿನ್ನಲೆಯಲ್ಲಿ ನಾಗನ ವಿಗ್ರಹಕ್ಕೆ ವಿಶೇಷ ಪೂಜೆಯನ್ನು ನಡೆಸಲಾಗಿದೆ
undefined
ಗರ್ಭಗುಡಿಯ ಒಳಗೆ ಹೋಗಿ ಬಂದಿರುವ ಸರ್ಪ ಹೊರಾಂಗಣದಲ್ಲಿ ಪೂಜಿಸಲ್ಪಡುವ ನಾಗನ ಕಟ್ಟೆಯ ಬಳಿ ಬಂದು ಸುತ್ತಾಡಿ ಹೋಗಿದೆ. ನಾಗರ ಪಂಚಮಿಯಂದೇ ನಾಗಕ್ಷೇತ್ರಕ್ಕೆ ಸರ್ಪದ ಈ ಭೇಟಿ ಆಸ್ತಿಕರನ್ನು ಮಂತ್ರಮುಗ್ದಗೊಳಿಸಿದೆ.
undefined
ತನಗೆ ಯಾವ ರೀತಿ ಪೂಜೆಗಳು ನಡೆಯುತ್ತಿದೆ ಎನ್ನುವುದನ್ನು ನೋಡಲು ಸ್ವತಹ ನಾಗನೇ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಈ ಬಾರಿ ಭೇಟಿ ನೀಡಿದೆ.
undefined