ಜನ-ಪ್ರಧಾನಿ ಮಧ್ಯದ ಸಂವಹನವೇ ಮನ್‌ ಕೀ ಬಾತ್‌: ಮುರಳೀಧರ್‌

First Published Jun 28, 2021, 2:25 PM IST

ಧಾರವಾಡ(ಜೂ.28): ಪ್ರಧಾನಿ ನರೇಂದ್ರ ಮೋದಿ ಅವರು ದೇಶದಲ್ಲಿ ಹೊಸ ಆಡಳಿತ ಪದ್ಧತಿ ಜಾರಿ ಮಾಡಿದ್ದು‘ ಸರ್ಕಾರ ಕಡಿಮೆ-ಆಡಳಿತ ಹೆಚ್ಚು’ ಎನ್ನುವ ಪರಿಕಲ್ಪನೆ ಹೊಂದಿದೆ. ದೇಶದ ಜನರ ಹಾಗೂ ಪ್ರಧಾನಿ ಮಧ್ಯೆ ನಡೆಯುವ ಸಂವಹನವೇ ಮನ್‌ ಕೀ ಬಾತ್‌. ಇದು ಆಡಳಿತದಲ್ಲಿ ಜನರ ಪಾಲ್ಗೊಳ್ಳುವಿಕೆಯನ್ನು ತೋರುತ್ತದೆ ಎಂದು ವಿದೇಶಾಂಗ ಸಚಿವ ವಿ. ಮುರಳೀಧರನ್‌ ಅಭಿಪ್ರಾಯಪಟ್ಟಿದ್ದಾರೆ. 

ಕರ್ನಾಟಕ ವಿವಿಯ ಕುಲಪತಿಗಳ ನಿವಾಸದಲ್ಲಿ ಭಾನುವಾರ ಕುಲಪತಿ ಡಾ.ಕೆ.ಬಿ.ಗುಡಸಿ ಸೇರಿದಂತೆ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಮತ್ತು ಶಿಕ್ಷಣ ತಜ್ಞರೊಂದಿಗೆ ಪ್ರಧಾನ ಮಂತ್ರಿಗಳ ಮನ್‌ ಕಿ ಬಾತ್‌ ಕಾರ್ಯಕ್ರಮವನ್ನು ವೀಕ್ಷಿಸಿದ ಮುರಳೀಧರನ್‌
undefined
ಆಡಳಿತವನ್ನು ಸರಾಗವಾಗಿ ನಡೆಸುವ ವಿಧಾನವಿದು. ಜನರು ತಮ್ಮ ಸಮಸ್ಯೆಗಳನ್ನು ನೇರವಾಗಿ ಪ್ರಧಾನಿಗೆ ಈ ಮೂಲಕ ಮುಟ್ಟಿಸಬಹುದು ಎಂದು ತಿಳಿಸಿದ ಕೇಂದ್ರ ಸಚಿವ
undefined
ಪ್ರಮುಖವಾದ ಸಮಸ್ಯೆಗಳನ್ನು ಪ್ರಧಾನಿಗಳು ಗಂಭೀರವಾಗಿ ತೆಗೆದುಕೊಂಡು ಪರಿಹರಿಸುತ್ತಾರೆ. ಜತೆಗೆ ಒಳ್ಳೆಯ ವಿಚಾರವನ್ನು ಮೋದಿ ಅವರು ಪ್ರಶಂಸಿರುವುದು, ವಿಶೇಷ ಎನಿಸಿರುವವನ್ನು ಸಂಪರ್ಕ ಮಾಡಿರುವುದು ಈಗಾಗಲೇ ತಮಗೆ ಗೊತ್ತಿದೆ ಎಂದರು.
undefined
ಮನ್‌ ಕೀ ಬಾತ್‌ ಆಡಳಿತದಲ್ಲಿ ಜನರ ಪಾಲ್ಗೊಳ್ಳುವಿಕೆಯನ್ನು ತೋರುತ್ತದೆ. ಸ್ವಾತಂತ್ರ್ಯಾನಂತರ ಇಂತಹ ಪ್ರಯತ್ನ ಮೋದಿ ಅವರಿಂದ ನಡೆಯುತ್ತಿದೆ. ಮೋದಿ ಸಾಮಾನ್ಯ ನಾಗರಿಕರನ್ನು ಸರ್ಕಾರದಲ್ಲಿ ಪಾಲ್ಗೊಳ್ಳುವಂತೆ ಮಾಡಿದ್ದಾರೆ ಎಂದು ಶ್ಲಾಘಿಸಿದರು.
undefined
click me!