ಪ್ರವಾಹದಲ್ಲಿ ಸಿಕ್ಕಿದ್ದ ಪ್ರಾಣಿಯನ್ನು. ಹಸುವನ್ನು ರಕ್ಷಣೆ ಮಾಡಿದರು ಎಂಬ ಸುದ್ದಿಗಳನ್ನು ಕೇಳುತ್ತ ಇರುತ್ತವೆ. ಇಲ್ಲೊಂದಿಷ್ಟು ಜನರು 35 ಅಡಿ ಪಾಳು ಬಾವಿಗೆ ಬಿದ್ದು ದಿಕ್ಕು ಕಾಣದಾಗಿದ್ದ ಹಸುವನ್ನು ರಕ್ಷಣೆ ಮಾಡಿದ್ದಾರೆ. ಚಿತ್ರದುರ್ಗ ಜಿಲ್ಲೆಯ ಹನುಮಂತನಹಳ್ಳಿಯಲ್ಲಿ 35 ಅಡಿ ಆಳದ ಪಾಳುಬಾವಿಗೆ ಬಿದ್ದಿದ್ದ ಹಸು ರಕ್ಷಣೆ ಮಾಡಲಾಗಿದೆ. ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕಿನ ಹನುಮಂತನಹಳ್ಳಿಯಲ್ಲಿ ಹಸು ರಕ್ಷಣೆ ಮಾಡಲಾಗಿದೆ. ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ನಡೆಸುತ್ತಿದ್ದ ಕ್ರೇನ್ ಮೂಲಕ ಯುವಕರೆಲ್ಲಾ ಸೇರಿ ಹಸುವನ್ನು ಮೇಲೆ ಎತ್ತಿದ್ದಾರೆ. ಹನುಮಂತನಹಳ್ಳಿ ಗ್ರಾಮದ ರಾಮರೆಡ್ಡಿ ಅವರಿಗೆ ಸೇರಿದ ಹಸು ರಕ್ಷಣೆ ಮಾಡಲಾಗಿದೆ. ಚಿತ್ರದುರ್ಗ: 35 ಅಡಿ ಬಾವಿಗೆ ಬಿದ್ದ ಹಸು ರಕ್ಷಿಸಿದ ಯುವಕರಿಗೊಂದು ಸಲಾಂ! Chitradurga Youths Rescue Cow From 35ft Well