Published : Jun 15, 2019, 05:39 PM ISTUpdated : Jun 17, 2019, 09:39 AM IST
ಪ್ರಧಾನಿ ಕಚೇರಿಗೆ ವರ್ಗಾವಣೆಯಾದ ಬೆಳಗಾವಿ ಕ್ಯಾಂಟೋನ್ಮೆಂಟ್ ಸಿಇಒ ದಿವ್ಯಾ ಹೊಸೂರ್ ಅವರನ್ನುಸಿಬ್ಬಂದಿ ಸನ್ಮಾನಿಸಿ, ತೆರೆದ ವಾಹನದಲ್ಲಿ ಮೆರವಣಿಗೆ ಮಾಡಿ ಬೀಳ್ಕೊಡುಗೆ ನೀಡಿದೆ. ಜನಮೆಚ್ಚಿದ ಸಿಇಒಗೆ ನಾಗರಿಕರು ತೋರಿದ ಪ್ರೀತಿ ಕ್ಯಾಮರಾ ಕಣ್ಣಿನಲ್ಲಿ ಸೆರೆಯಾಗಿದ್ದು ಹೀಗೆ...
ನವದೆಹಲಿಗೆ ವರ್ಗಾವಣೆಗೊಂಡಿರುವ ಬೆಳಗಾವಿ ಕ್ಯಾಂಟೋನ್ಮೆಂಟ್ ಸಿಇಒ ದಿವ್ಯಾ ಹೊಸೂರ್ ಅವರನ್ನು ಕ್ಯಾಂಟೋನ್ಮೆಂಟ್ ಸಿಬ್ಬಂದಿ ಸನ್ಮಾನಿಸಿ, ಬೀಳ್ಕೊಟ್ಟರು. ಈ ಬಿಳ್ಕೊಡುಗೆ ವೇಳೆ ಪತಿ ಶ್ರೇಯಸ್ ಹೊಸೂರ್ ಕೂಡ ಇದ್ದರು.

220
ಅವರು ಇನ್ನು ಮುಂದೆ ದೆಹಲಿಯ ಪ್ರಧಾನ ಮಂತ್ರಿ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸಲಿದ್ದಾರೆ.

320
ಜನರ ಮೆಚ್ಚಿನ ಅಧಿಕಾರಿ ದಿವ್ಯಾ ಶಿವರಾಂ ಅವರಿಗೆ ತೆರದ ಅಲಂಕೃತ ವಾಹನದಲ್ಲಿ ಮೆರವಣಿಗೆ ಮಾಡಿ ವಿದಾಯ ಹೇಳಿದ್ದಾರೆ

420
ಅಧಿಕಾರಿಗಳೆಂದರೆ ಲಂಚಬಾಕರು, ಕೆಲಸ ಮಾಡುವುದಿಲ್ಲವೆಂದು ಮೂಗು ಮುರಿಯುವ ಜನರು ಅದ್ಧೂರಿ ಮೆರವಣಿಗೆ ಮಾಡಿ ಅಧಿಕಾರಿಯೊಬ್ಬರನ್ನು ಬೀಳ್ಕೊಡುವುದು ಬಲು ಅಪರೂಪ

520
ತಮ್ಮ ಸನ್ನಡತೆ, ಸ್ನೇಹ ಮಯ ಮಾತು ಹಾಗೂ ಭ್ರಷ್ಟಾಚಾರ ರಹಿತ ಕರ್ತವ್ಯದಿಂದ ದಿವ್ಯಾ ಮೇಡಂ ಬೆಳಗಾವಿ ಜಿಲ್ಲೆಯ ಅತ್ಯುತ್ತಮ ಅಧಿಕಾರಿಯಾಗಿ ಎಂದೇ ಖ್ಯಾತರಾಗಿದ್ದರು.

620
ಬೀಳ್ಕೊಡುಗೆಯ ವೇಳೆ ಭಾವುಕರಾದ ದಿವ್ಯಾ ಶಿವರಾಂ ತಮ್ಮ ಸಹೋದ್ಯೋಗಿಗಳಿಗೆ, ಉನ್ನತ ಅಧಿಕಾರಿಗಳಿಗೆ ಹಾಗೂ ಜನರಿಗೆ ಧನ್ಯವಾದ ತಿಳಿಸಿದರು.

720
ಕಳೆದ ಮೂರು ವರ್ಷಗಳಿಂದ ಬೆಳಗಾವಿಯ ದಂಡು ಪ್ರದೇಶದ ಸಿಇಒ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ದಿವ್ಯಾ ಶಿವರಾಂ ಇನ್ಮುಂದೆ ಪ್ರಧಾನಿ ಕಚೇರಿಯಲ್ಲಿ ಸೇವೆ ಮುಂದುವರೆಸಲಿದ್ದಾರೆ.

820
ದಂಡು ಮಂಡಳಿ ಸಿಇಒ ಆಗಿ ದಿವ್ಯಾ ಶಿವರಾಂ ಹಲವು ಅತ್ಯುತ್ತಮ ಕಾರ್ಯಗಳನ್ನು ಮಾಡಿದ್ದಾರೆ. ಮಹಿಳಾ ಸ್ವಾವಲಂಬನೆ, ಚುನಾವಣೆ ಸಮಯದಲ್ಲಿ ಮಾಡಿದ ಕಾರ್ಯವೂ ಮೆಚ್ಚುಗೆಗೆ ಕಾರಣವಾಗಿತ್ತು.

920
ಸಹೋದ್ಯೋಗಿಗಳೊಂದಿಗೂ ಆತ್ಮೀಯ ಸಂಬಂಧ ದಿವ್ಯಾ ಶಿವರಾಂ ದಿಟ್ಟುಕೊಂಡಿದ್ದರು. ಮೆಚ್ಚಿನ ದಿವ್ಯಾ ಮೇಡಂ ವರ್ಗಾವಣೆ ಕಾರ್ಯಕ್ರಮದಲ್ಲಿ ಜೊತೆಗಾರ ಸಿಬ್ಬಂದಿಗಳೂ ಭಾವುಕರಾಗಿದ್ದಾರೆ

1020
ಸಿವಿಲ್ ಸರ್ವಿಸ್‌ನಲ್ಲಿ 7 ವರ್ಷ ಸೇವೆ ಸಲ್ಲಿಸಿರುವ ದಿವ್ಯಾ ಶಿವರಾಂ ತಮ್ಮ ನೇರನುಡಿ ಹಾಗೂ ಭ್ರಷ್ಟಾಚಾರರಹಿತ ಆಡಳಿತದಿಂದಲೇ ಜನರ ಮನ ಗೆದ್ದವರು.

1120
ಅತ್ಯಂತ ಮೇಧಾವಿಯಾಗಿರುವ ದಿವ್ಯಾರವರು ಮೊದಲ ಯತ್ನದಲ್ಲೇ UPSC ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ್ದರು.

1220
ದಿವ್ಯಾ ಶಿವರಾಂ ಪತಿ ಶ್ರೇಯಸ್ ಹೊಸೂರ್ ಕೂಡಾ ಓರ್ವ ಸಿವಿಲ್ ಸರ್ವಿಸ್ ಆಫೀಸರ್.

1320
ತಮ್ಮ ಜವಾಬ್ದಾರಿ ಅರಿತುಕೊಂಡು ಕರ್ತವ್ಯ ನಿಭಾಯಿಸುವ ಈ ಆಫೀಸರ್, ಸಹೋದ್ಯೋಗಿಗಳಿಗೂ ಅಚ್ಚುಮೆಚ್ಚು.

1420
ಕೋಟೆನಾಡು ಚಿತ್ರದುರ್ಗದವರಾದ ದಿವ್ಯಾ ಶಿವರಾಂ ಕೊಯಂಬತ್ತೂರು ಹಾಗೂ ಬೆಂಗಳೂರಿನಲ್ಲಿ ಇಂಜಿನಿಯರಿಂಗ್ ಶಿಕ್ಷಣ ಪಡೆದಿದ್ದಾರೆ

1520
ಕೊಯಂಬತ್ತೂರಿನಲ್ಲಿ ಮೊದಲ ವರ್ಷದ ಇಂಜಿನಿಯರಿಂಗ್ ವ್ಯಾಸಂಗ ನಡೆಸುತ್ತಿದ್ದಾಗ ಸದ್ಗುರು ಜಗ್ಗಿ ವಾಸುದೇವರವರ ಇಶಾ ಫೌಂಡೇಷನ್ ಸೇರಿಕೊಂಡ ದಿವ್ಯಾ ಶಿವರಾಂ ಈಗಲೂ ಧ್ಯಾನ ಮತ್ತು ಆಧ್ಯಾತ್ಮಿಕತೆಗೆ ಸಮಯ ಮೀಸಲಿಡುತ್ತಾರೆ

1620
ದೆಹಲಿಯಲ್ಲಿ UPSC ತರಬೇತಿ ಪಡೆಯುತ್ತಿದ್ದ ವೇಳೆ ಶ್ರೇಯಸ್ ಹೊಸೂರ್ ಪರಿಚಯವಾಗಿತ್ತು.

1720
ಖಡಕ್ ಅಧಿಕಾರಿಯಾಗಿರುವ ದಿವ್ಯಾರಿಗೆ ಕ್ರೀಡೆ,ಟ್ರೆಕ್ಕಿಂಗ್ ಎಂದರೆ ಬಹಳ ಅಚ್ಚುಮೆಚ್ಚು. ಇದಕ್ಕೆ ಅವರು ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಿಕೊಂಡಿರುವ ಫೋಟೋಗಳೇ ಸಾಕ್ಷಿ.

1820
ಕ್ರೀಡೆಯಲ್ಲಿ ಅತಿ ಹೆಚ್ಚು ಆಸಕ್ತಿ ಹೊಂದಿರುವ ದಿವ್ಯಾ ಶಿವರಾಂ UPSC ತರಬೇತಿ ವೇಳೆ ಬರೋಬ್ಬರಿ 9 ಪದಕಗಳನ್ನು ತಮ್ಮದಾಗಿಸಿಕೊಂಡಿದ್ದರು.

1920
ಗಿಡ, ಮರ, ಪ್ರಕೃತಿ ಮೇಲೆ ದಿವ್ಯಾ ಶಿವರಾಂ ಅತೀವ ಕಾಳಜಿ ಹೊಂದಿದ್ದಾರೆ.

2020
ಅದೇನಿದ್ದರೂ ಮುಂದೆ ದೆಹಲಿಯ ಪ್ರಧಾನ ಮಂತ್ರಿ ಕಚೇರಿಯಲ್ಲಿ ಕಾರ್ಯ ನಿರ್ವಹಿಸಲಿರುವ ಕನ್ನಡತಿ, ಕೋಟೆನಾಡಿನ ಮಗಳು ದಿವ್ಯಾ ಶಿವರಾಂಗೆ ಆಲ್ ದ ಬೆಸ್ಟ್