ಚಿಕ್ಕಮಗಳೂರಿನಲ್ಲಿ, ಅಂಡರ್ ವರ್ಲ್ಡ್ ಡಾನ್ ದಾವುದ್ ಇಬ್ರಾಹಿಂನನ್ನು ವೈಭವೀಕರಿಸುವ ಚಿತ್ರ ಮತ್ತು ಬರಹಗಳಿದ್ದ ತಮಿಳುನಾಡು ಮೂಲದ ಖಾಸಗಿ ಬಸ್ಸನ್ನು ಹಿಂದೂ ಸಂಘಟನೆಗಳು ತಡೆಹಿಡಿದಿವೆ. ಈ ಘಟನೆಯ ನಂತರ, ಪೊಲೀಸರು ಸ್ಥಳಕ್ಕೆ ಆಗಮಿಸಿ ಬಸ್ಸನ್ನು ವಶಕ್ಕೆ ಪಡೆದು ತನಿಖೆ ಆರಂಭಿಸಿದ್ದಾರೆ.
ಚಿಕ್ಕಮಗಳೂರಿನಲ್ಲಿ ಅಂಡರ್ ವರ್ಲ್ಡ್ ಡಾನ್ ದಾವುದ್ ಇಬ್ರಾಹಿಂ ಚಿತ್ರವಿರುವ ತಮಿಳುನಾಡು ಮೂಲದ ಖಾಸಗಿ ಬಸ್ಸನ್ನು ಹಿಂದೂ ಸಂಘಟನೆಗಳು ತಡೆಹಿಡಿದ ಘಟನೆ ನಡೆದಿದೆ.
26
ದಾವುದ್ ಚಿತ್ರಣವಿದ್ದ ಬಸ್ ಲಾಕ್
ಅಂಡರ್ ವರ್ಲ್ಡ್ ಡಾನ್ ದಾವುದ್ ಇಬ್ರಾಹಿಂನನ್ನು ಹೀರೊ ರೀತಿ ಬಿಂಬಿಸುವ ಚಿತ್ರ ಹಾಗೂ ಬರಹಗಳಿದ್ದ ತಮಿಳುನಾಡು ಮೂಲದ ಖಾಸಗಿ ಬಸ್ಸನ್ನು ಚಿಕ್ಕಮಗಳೂರಿನ ಎನ್.ಎಂ.ಸಿ. (NMC) ಸರ್ಕಲ್‌ನಲ್ಲಿ ಹಿಂದೂ ಸಂಘಟನೆಗಳ ಕಾರ್ಯಕರ್ತರು ತಡೆದು ಆಕ್ರೋಶ ಹೊರಹಾಕಿದ್ದಾರೆ.
36
ಪ್ರಚೋದನಾಕಾರಿ ಸ್ಟಿಕರ್ ಮತ್ತು ಬರಹ
ಬಸ್ಸಿನ ಮೇಲೆ ‘ಲೈವ್ ಬೈ ಎ ಗನ್, ಡೈ ಬೈ ಎ ಗನ್’ (Live by a gun, Die by a gun) ಎಂಬ ಪ್ರಚೋದನಾಕಾರಿ ಸ್ಟಿಕರ್ ಅಂಟಿಸಲಾಗಿತ್ತು. ಅಲ್ಲದೆ ‘ಕ್ರೈಮ್ ಲಾರ್ಡ್ ಕ್ರಾನಿಕಲ್ಸ್’ ಹಾಗೂ ‘ದಾವುದ್ ದಿ ರಿಯಲ್ ಡಾನ್’ ಎಂಬ ಬರಹಗಳು ಕಂಡುಬಂದಿವೆ.
ಬಸ್ಸಿನ ಹಿಂಭಾಗದಲ್ಲಿ ‘ಡಿ ಗ್ಯಾಂಗ್ ಆಫ್ ಮುಂಬೈ’ (D-Gang of Mumbai) ಎಂದು ಬರೆಯಲಾಗಿದ್ದು, ‘ಬಾಂಬೆ ಅಂಡರ್ ವರ್ಲ್ಡ್ ದಾವುದ್ ರಿಯಲ್ ಡಾನ್’ ಎಂದು ಪೇಂಟ್ ಮಾಡಿಸುವ ಮೂಲಕ ದೇಶದ್ರೋಹಿ ಚಟುವಟಿಕೆಯ ಡಾನ್‌ನನ್ನು ವೈಭವೀಕರಿಸಲಾಗಿತ್ತು.
56
ಪೊಲೀಸ್ ವಶಕ್ಕೆ ವಾಹನ
ಬಸ್ಸಿನ ಮೇಲೆ ದಾವುದ್‌ನನ್ನು ಹೀರೋನಂತೆ ಬಿಂಬಿಸಿರುವುದನ್ನು ಕಂಡ ಸಾರ್ವಜನಿಕರು ಮತ್ತು ಸಂಘಟನೆಗಳು ಪ್ರತಿಭಟಿಸಿದ ಬೆನ್ನಲ್ಲೇ, ಪೊಲೀಸರು ಸ್ಥಳಕ್ಕೆ ಧಾವಿಸಿ ಬಸ್ಸನ್ನು ವಶಕ್ಕೆ ಪಡೆದು ಠಾಣೆಯತ್ತ ಕೊಂಡೊಯ್ದಿದ್ದಾರೆ.
66
ಬಸವನಹಳ್ಳಿ ಠಾಣೆಯಲ್ಲಿ ತನಿಖೆ
ಪ್ರಸ್ತುತ ಈ ವಿವಾದಿತ ಬಸ್ಸನ್ನು ಚಿಕ್ಕಮಗಳೂರು ನಗರದ ಬಸವನಹಳ್ಳಿ ಪೊಲೀಸ್ ಠಾಣೆಯ ಆವರಣದಲ್ಲಿ ನಿಲ್ಲಿಸಲಾಗಿದ್ದು, ಬಸ್ ಮಾಲೀಕರು ಮತ್ತು ಚಾಲಕನ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ.