ಮಂಗಳೂರಿನ ಹೃದಯ ಭಾಗದಲ್ಲಿ ಮಂಗಳವಾರ ಬೆಳಗ್ಗೆಕಾಡುಕೋಣ ಕಾಣಿಸಿದೆ.
undefined
ಕುಂಟಿಕಾನದ ಮುಖ್ಯರಸ್ತೆಯಲ್ಲಿ ಮಂಗಳವಾರ ನಸುಕಿನ ೪ ಗಂಟೆ ಸುಮಾರಿಗೆ ಒಂದು ಕಾಡುಕೋಣ ಕಾಣಿಸಿತ್ತು. ವಾಹನಗಳ ಹಾರ್ನ್‌ಗೆ ಬೆದರಿ ಅಲ್ಲಿಂದ ಓಟಕಿತ್ತಿತು.
undefined
ಬಳಿಕ 4.15ರ ವೇಳೆಗೆ ಬಿಜೈ ಕೆಎಸ್‌ಆರ್‌ಟಿಸಿ ಬಸ್ಟೇಂಡ್‌ನ ಎರಡನೇ ಫ್ಲ್ಯಾಟ್ ಫಾರಂನಲ್ಲಿ ಕಾಡುಕೋಣ ಕಂಡುಬಂದಿತ್ತು. ಬಳಿಕ ಅಲ್ಲಿಂದ ಕಾಡುಕೋಣವನ್ನು ಓಡಿಸಿದರು.
undefined
ಬಿಜೈನಿಂದ ಹೊರಟ ಕಾಡುಕೋಣ, ಹ್ಯಾಾಟ್‌ಹಿಲ್, ಲಾಲ್‌ಬಾಗ್, ಬಳ್ಳಾಾಲ್‌ಬಾಗ್‌ಗೆ ಬಂದು ಬಳಿಕ ಅಳಕೆ ಕಡೆಗೆ ಸಂಚರಿಸಿತ್ತು.
undefined
ವಿಷಯ ತಿಳಿದ ಅರಣ್ಯ ಇಲಾಖೆ ಅಧಿಕಾರಿಗಳು ಸಿಬ್ಬಂದಿ ಸಮೇತ ಧಾವಿಸಿ ಅರಿವಳಿಕೆ ನೀಡಿ ಸಾಹಸದಿಂದ ಕಾಡುಕೋಣವನ್ನು ಸೆರೆಹಿಡಿದರು. ಅರಣ್ಯ ಇಲಾಖೆ ಅಧಿಕಾರಿಗಳು ಅದನ್ನು ಚಾರ್ಮಾಡಿಯ ಅರಣ್ಯ ಪ್ರದೇಶಕ್ಕೆ ಬಿಡುವ ಪ್ರಯತ್ನ ಮಾಡಿದ್ದು, ಚಾರ್ಮಾಡಿಯಲ್ಲಿ ವಾಹನದಿಂದ ಇಳಿಸುವಾಗ ಹೃದಯಾಘಾತದಿಂದ ಕುಸಿದು ಬಿದ್ದು ಮೃತಪಟ್ಟಿದೆ ಎಂದು ಅರಣ್ಯ ಇಲಾಖೆ ಮೂಲಗಳು ತಿಳಿಸಿವೆ.
undefined
ಅರಿವಳಿಗೆ ಮದ್ದಿನ ಪ್ರಮಾಣ ಹೆಚ್ಚಾಾದಾಗಿದ್ದರೆ ಆ ಕಾರಣದಿಂದಲೂ ಸಾವು ಸಂಭವಿಸುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
undefined
ಎಂಆರ್‌ಪಿಎಲ್ ಪರಿಸರದಲ್ಲಿ ಕಳೆದ ಕೆಲವು ದಿನಗಳಿಂದ ಜನರಲ್ಲಿ ಭೀತಿ ಹುಟ್ಟಿಸಿದ ಚಿರತೆಯು ಹಂದಿಗೆ ಇಟ್ಟ ಉರುಳಿಗೆ ಬಿದ್ದಿದೆ.
undefined