ಗಂಗಾವತಿ: ಕೊರೋನಾ ನಿವಾರಣೆಗಾಗಿ ಅಂಜನಾದ್ರಿ ಪರ್ವತದಲ್ಲಿ ಭರತನಾಟ್ಯ ಸೇವೆ

First Published | Oct 4, 2020, 8:02 AM IST

ಗಂಗಾವತಿ(ಅ.04): ಕಳೆದ 8 ತಿಂಗಳಿನಿಂದ ದೇಶಾದ್ಯಂತ ಮಾರಕ ರೋಗವಾಗಿರುವ ಕೊರೋನಾ ನಿವಾರಣೆಯಾಗಲಿ ಎಂದು ಪ್ರಾರ್ಥಿಸಿ ಗಂಗಾವತಿ ತಾಲೂಕಿನ ಅಂಜನಾದ್ರಿ ಪರ್ವತದ ಮೇಲೆ ಹೊಸಪೇಟೆಯ ಅಂಜಲಿ ಭರತ ನಾಟ್ಯ ಕಲಾ ಕೇಂದ್ರ ತನ್ನ ತಂಡದೊಂದಿಗೆ ಕಲಾವಿದರು ಭರತ ನಾಟ್ಯ ಸೇವೆಗೈದಿದ್ದಾರೆ. 

ಕಳೆದ ಕೆಲ ತಿಂಗಳಿನಿಂದ ಈ ತಂಡದ ಕಲಾ​ವಿ​ದ​ರು ಹನುಮ ಜನಿಸಿದ ಪವಿತ್ರ ಸ್ಥಳವಾಗಿರುವ ಅಂಜನಾದ್ರಿ ಪರ್ವತದಲ್ಲಿ ಕೊರೋನಾ ನಿವಾರಣೆಯಾಗಲಿ ಮತ್ತು ದೇಶದಲ್ಲಿ ಶಾಂತಿ ನೆಲೆಸಲಿ ಎಂದು ಹರಕೆ ಹೊತ್ತಿದ್ದರು.
undefined
ಈ ಹಿನ್ನೆಲೆಯಲ್ಲಿ ಹೊಸಪೇಟೆಯಿಂದ ಆಗಮಿಸಿದ್ದ ತಂಡ ಅಂಜನಾದ್ರಿ ಪರ್ವತದ ಆವರಣದಲ್ಲಿ ಒಂದು ಗಂಟೆಗಳ ಕಾಲ ಹನುಮಾನ್‌ ನೃತ್ಯ ರೂಪಕ, ಹನುಮಾನ್‌ ಚಾಲೀಸ್‌, ಶ್ರೀರಾಮ, ಶ್ರೀ ಕೃಷ್ಣ ಪ್ರಸ್ತುತ ಪಡಿಸಿದರು. ಪ್ರಾರಂಭದಲ್ಲೆ ಗಣೇಶ ಪುಷ್ಪಾಂಜಲಿ ನೃತ್ಯದೊಂದಿಗೆ ಪ್ರಾರಂಭಗೊಂಡ ನೃತ್ಯ ರೂಪಕಗಳನ್ನು ಆಂಜನೇಯಸ್ವಾಮಿಗೆ ಹರಕೆ ಸಮರ್ಪಿಸಿದ್ದಾರೆ.
undefined

Latest Videos


ಅಂಜಲಿ ಭರತನಾಟ್ಯ ಕಲಾ ತಂಡದಿಂದ ಹನುಮಾನ್‌ ನೃತ್ಯ ರೂಪಕ
undefined
ಕಳೆದ 12 ವರ್ಷಗಳಿಂದ ಭರತ ನಾಟ್ಯ ಕಲಾ ಕೇಂದ್ರ ಸ್ಥಾಪಿಸಿರುವ ಸಂಸ್ಥಾಪಕಿ ಎಸ್‌. ಅಂಜಲಿ ಅವರು ಈ ಹಿಂದೆ ಅಂಜನಾದ್ರಿ ಪರ್ವತ ದೇವಸ್ಥಾನದ ಆಡಳಿತಾಧಿಕಾರಿಯಾಗಿದ್ದ ಚಂದ್ರಮೌಳಿ ಅವರ ನಿರ್ದೇಶನದ ಮೇರೆಗೆ ಪರ್ವತದಲ್ಲಿ ಕಾರ್ಯಕ್ರಮ ಆಯೋಜನೆಗೆ ಕಾರಣವಾಗಿದ್ದು, ದೆಹಲಿಯಿಂದ ಮ್ಯಾಜಿಕಲ್‌ ಬುಕ್‌ ಆಫ್‌ ವರ್ಲ್ಡ್‌ ರಿಕಾರ್ಡ್‌ ಅವಾರ್ಡ್‌ ಎನ್ನುವ ಸಂಸ್ಥೆ ಆಯೋಜಿಸಿದ್ದ ಆನ್‌ಲೈನ್‌ ಭರತ ನಾಟ್ಯ ಕಾರ್ಯಕ್ರಮದಲ್ಲಿ ಪ್ರಥಮ ಸ್ಥಾನ ಪಡೆದಿರುವುದಾಗಿ ಕಲಾ ತಂಡದ ಮುಖ್ಯಸ್ಥೆ ಎಸ್‌. ಅಂಜಲಿ ತಿಳಿಸಿದ್ದಾರೆ.
undefined
ಭರತನಾಟ್ಯ ಕಾರ್ಯಕ್ರಮದಲ್ಲಿ ಕಲಾವಿದರಾದ ಗೀತಾಪ್ರಿಯ, ಅಮತ, ವೈಷ್ಣವಿ ಎಚ್‌., ಅಪೂರ್ವ ಸೇರಿದಂತೆ ಕಲಾವಿದರು ಭಾಗವಹಿಸಿದ್ದರು. ಶನಿವಾರ ಆಂಜನೇಯ ವಾರವಾಗಿದ್ದರಿಂದ ವಿವಿಧ ಜಿಲ್ಲೆಗಳಿಂದ ಭಾಗವಹಿಸಿದ್ದ ಭಕ್ತರು ನೃತ್ಯ ರೂಪಕಗಳನ್ನು ವೀಕ್ಷಿಸಿದರು.
undefined
click me!