Bengaluru: ಬೆತ್ತಲೆ ಸ್ಥಿತಿಯಲ್ಲಿ ಜಾರ್ಖಂಡ್ ಮೂಲದ ಯುವತಿಯ ಅರೆಕೊಳೆತ ಶವ ಪತ್ತೆ

Published : Apr 28, 2026, 08:04 AM IST

ಜಾರ್ಖಂಡ್ ಮೂಲದ ಪೂಜಾ ದತ್ತಾ ಎಂಬ ಯುವತಿಯ ಮೃತದೇಹವು ಆಕೆ ವಾಸವಿದ್ದ ಬಾಡಿಗೆ ಮನೆಯಲ್ಲಿ ಬೆತ್ತಲೆ ಸ್ಥಿತಿಯಲ್ಲಿ ಪತ್ತೆಯಾಗಿದೆ. ಮನೆಯಿಂದ ದುರ್ವಾಸನೆ ಬಂದಾಗ ಪ್ರಕರಣ ಬೆಳಕಿಗೆ ಬಂದಿದ್ದು, ಇದು ಕೊ*ಲೆಯೋ ಅಥವಾ ಆತ್ಮ*ಹತ್ಯೆಯೋ ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

PREV
15
ಯುವತಿ ಮೃತದೇಹ ಪತ್ತೆ

ಸಿಲಿಕಾನ್ ಸಿಟಿಯಲ್ಲಿ ಜಾರ್ಖಂಡ್ ಮೂಲದ ಯುವತಿ ಮೃತದೇಹ ಅನುಮಾನಾಸ್ಪದ ರೀತಿಯಲ್ಲಿ ಪತ್ತೆಯಾಗಿದ್ದು, ಹಲವು ಅನುಮಾನಗಳಿಗೆ ಕಾರಣವಾಗಿದೆ. ಬೆಂಗಳೂರಿನ ಆಡುಗೋಡಿ‌‌ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಯುವತಿಯನ್ನು ಪೂಜಾ ದತ್ತಾ (34) ಎಂದು ಗುರುತಿಸಲಾಗಿದೆ.

25
ಬೆತ್ತಲೆ ಸ್ಥಿತಿಯಲ್ಲಿ ಶವ ಪತ್ತೆ

ವಾಸವಿದ್ದ ಬಾಡಿಗೆ ಮನೆಯಲ್ಲಿಯೇ ಪೂಜಾ ದತ್ತಾ ಮೃತದೇಹ ಬೆತ್ತಲೆ ಸ್ಥಿತಿಯಲ್ಲಿ ಪತ್ತೆಯಾಗಿದೆ. ಮನೆಯಿಂದ ವಾಸನೆ ಬಂದ ಹಿನ್ನೆಲೆ ಬಾಗಿಲು ತೆಗೆದು ನೋಡಿದಾಗ ಶವ ಪತ್ತೆಯಾಗಿದೆ. ಕೂಡಲೇ ಮನೆಯ ಮಾಲೀಕರು ಆಡುಗೋಡಿ ಠಾಣೆಯ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕಾಗಮಿಸಿದ ಪೊಲೀಸರು ಮೃತದೇಹವನ್ನು ಮರಣೋತ್ತರ ಶವ ಪರೀಕ್ಷಗೆಗಾಗಿ ರವಾನಿಸಿದ್ದಾರೆ.

35
ಖಾಸಗಿ ಕಂಪನಿಯ ಮಾಜಿ ಉದ್ಯೋಗಿ

ಖಾಸಗಿ ಕಂಪನಿಯ ಉದ್ಯೋಗಿಯಾಗಿದ್ದ ಪೂಜಾ ಕೆಲಸ ಬಿಟ್ಟಿದ್ದರು. ಕೆಲ ದಿನಗಳಿಂದ ಯಾವ ಕೆಲಸಕ್ಕೂ ಹೋಗುತ್ತಿರಲಿಲ್ಲ. ಮನೆಯಲ್ಲಿ ಐಡಿ ಕಾರ್ಡ್ ಸಿಕ್ಕಿದ್ದು, ಬೆತ್ತಲೆ ಸ್ಥಿತಿಯಲ್ಲಿ ಶವ ಕಂಡು ಬಂದಿರೋದರಿಂದ ಇದು ಕೊಲೆಯೋ? ಆತ್ಮ*ಹತ್ಯೆಯೋ? ಎಂಬುದರ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಹಾಗೆಯೇ ಕೋಣೆಯ ತುಂಬೆಲ್ಲಾ ಪೇಪರ್‌ಗಳು ಬಿದ್ದಿರೋದು ಹಲವು ಅನುಮಾನಗಳಿಗೆ ಕಾರಣವಾಗಿದೆ.

45
ಮನೆಯ ತುಂಬೆಲ್ಲಾ ಪೇಪರ್

ಈ ಪೇಪರ್‌ಗಳ ಮೇಲೆ ಪ್ರೇಮಿಯ ಹೆಸರು ಬರೆದಿದೆ ಎನ್ನಲಾಗುತ್ತಿದ್ದು, ಈ ಬಗ್ಗೆ ಪೊಲೀಸರು ಯಾವುದೇ ಮಾಹಿತಿಯನ್ನು ಖಚಿತಪಡಿಸಿಲ್ಲ. ಶವ ಕೊಳೆತ ಸ್ಥಿತಿಗೆ ಬಂದ ನಂತ್ರ ಪ್ರಕರಣ ಬೆಳಕಿಗೆ ಬಂದಿದ್ದು, ಪೊಲೀಸರು ಮನೆಯನ್ನು ಜಾಲಾಡುತ್ತಿದ್ದಾರೆ. ಹಾಗೆಯೇ ಪೂಜಾ ದತ್ತಾ ಕುಟುಂಬಸ್ಥರನ್ನು ಸಂಪರ್ಕಿಸುವ ಪ್ರಯತ್ನದಲ್ಲಿದ್ದಾರೆ.

55
ಮೂರು ವರ್ಷದಿಂದ ಇದೇ ಮನೆಯಲ್ಲಿ ವಾಸ

ಪೂಜಾ ದತ್ತಾ ವಾಸವಾಗಿದ್ದ ಮನೆಯ ಒಡತಿ ಜಾನಕಮ್ಮಾ ಪ್ರತಿಕ್ರಿಯಿಸಿದ್ದು, ಮೂರು ವರ್ಷಗಳಿಂದ ಯುವತಿ ಇಲ್ಲಿ ವಾಸವಾಗಿದ್ದಳು. ಮೂರು ವರ್ಷದಿಂದ ನಮ್ಮ ಮನೆಯಲ್ಲಿ ಇದ್ಲು. ಸ್ವಲ್ಪ ಕೋಪಿಷ್ಟೆ, ಒಬ್ಬ ಹುಡುಗ ಬಂದು ಹೋಗ್ತಿದ್ದ. ಗುರುವಾರ ಯಾರೋ ಬಾಗಿಲು ತಟ್ಟುತ್ತಿದ್ದಾರೆ ಅಂತ ಹೇಳುತ್ತಿದ್ದಳು. ಇಂದು ಸಂಜೆ ಪಕ್ಕದ ಮನೆ ಹುಡುಗರು ವಾಸನೆ ಅಂತ ಹೇಳಿದ್ರು. ಆಗಬಾಗಿಲು ತೆಗೆದಾಗ ಘಟನೆ ಗೊತ್ತಾಗಿದೆ. ಆ ಬಳಿಕ ಪೊಲೀಸರಿಗೆ ಮಾಹಿತಿ ತಿಳಿಸಿದ್ದೇವೆ ಎಂದು ಹೇಳಿದ್ದಾರೆ.

Read more Photos on
click me!

Recommended Stories