ಅಪಾರ್ಟ್ಮೆಂಟ್‌ ಹೊರಗೆ ಶೂ ರ್ಯಾಕ್‌ ಇಟ್ಟು ನಿಯಮ ಉಲ್ಲಂಘಿಸಿದ ಬೆಂಗಳೂರು ನಿವಾಸಿಗೆ ₹24,000 ದಂಡ!

Published : May 17, 2025, 06:34 PM IST

ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯ ಪ್ರೆಸ್ಟೀಜ್ ಸನ್‌ರೈಸ್ ಪಾರ್ಕ್ ಅಪಾರ್ಟ್‌ಮೆಂಟ್‌ನಲ್ಲಿ ಓರ್ವ ನಿವಾಸಿ ತಮ್ಮ ಫ್ಲಾಟ್ ಬಾಗಿಲು ಹೊರಗೆ ಶೂ ರ್ಯಾಕ್ ಇಟ್ಟಿದ್ದಕ್ಕಾಗಿ ₹24,000 ದಂಡ ಪಾವತಿಸಿದ್ದಾರೆ. ಕಾರಿಡಾರ್‌ಗಳಲ್ಲಿ ವಸ್ತುಗಳನ್ನು ಇಡುವುದು ಅಗ್ನಿಶಾಮಕ ಸುರಕ್ಷತಾ ನಿಯಮಗಳ ಉಲ್ಲಂಘನೆಯಾಗಿದೆ ಎಂದು ನಿವಾಸಿಗಳ ಸಂಘ ತಿಳಿಸಿದೆ.

PREV
15
ಅಪಾರ್ಟ್ಮೆಂಟ್‌ ಹೊರಗೆ ಶೂ ರ್ಯಾಕ್‌ ಇಟ್ಟು ನಿಯಮ ಉಲ್ಲಂಘಿಸಿದ ಬೆಂಗಳೂರು ನಿವಾಸಿಗೆ ₹24,000 ದಂಡ!

ಬೆಂಗಳೂರು ಎಲೆಕ್ಟ್ರಾನಿಕ್ ಸಿಟಿ ಹಂತ 1 ರಲ್ಲಿರುವ ಪ್ರೆಸ್ಟೀಜ್ ಸನ್‌ರೈಸ್ ಪಾರ್ಕ್ ಎಂಬ ಅಪಾರ್ಟ್‌ಮೆಂಟ್‌ನಲ್ಲಿ, ಓರ್ವ ನಿವಾಸಿಯು ತಮ್ಮ ಫ್ಲಾಟ್ ಬಾಗಿಲು ಹೊರಗೆ ಶೂ ರ್ಯಾಕ್ ಇಟ್ಟುಕೊಂಡಿದ್ದಕ್ಕಾಗಿ ಬರೋಬ್ಬರಿ  ₹24,000 ದಂಡ ಪಾವತಿಸಿದ್ದಾರೆ. ಈ ಅಪಾರ್ಟ್‌ಮೆಂಟ್‌ ಸಮುಚ್ಚಯದಲ್ಲಿ 1,046 ಫ್ಲಾಟ್‌ಗಳು ಇವೆ. ಕಾರಿಡಾರ್‌ಗಳಲ್ಲಿ ಶೂ ರ್ಯಾಕ್,  ಪಾಟ್‌ಗಳು ಹಾಗೂ ಕೆಲವು ಶೇಖರಣಾ ಬಾಕ್ಸ್‌ಗಳನ್ನು ಇಡುವುದು ಅಗ್ನಿಶಾಮಕ ಸುರಕ್ಷತಾ ನಿಯಮಕ್ಕೆ ವಿರುದ್ಧವಾಗಿದ್ದು, ಕಾರಿಡಾರ್‌ಗಳನ್ನು ಖಾಲಿ ಇರಿಸಲು ನಿವಾಸಿಗಳ ಸಂಘವು ಎಲ್ಲರಿಗೂ ಸೂಚನೆ ನೀಡಿತ್ತು.
 

25

ಅಪಾರ್ಟ್ಮೆಂಟ್‌ ನಲ್ಲಿರುವ 50% ಮನೆಗಳಲ್ಲಿ ಇಂತಹ ವಸ್ತುಗಳು ಇರುವುದನ್ನು ಗಮನಿಸಿದ ಸಂಘ, ಎಲ್ಲಾ ನಿವಾಸಿಗಳಿಗೆ ಅದನ್ನು ತೆಗೆಯುವಂತೆ ನೋಟಿಸ್ ನೀಡಿತು ಮತ್ತು ಮಾತುಕತೆ ನಡೆಸಿತು. ಎಲ್ಲರಿಗೂ ಎರಡು ತಿಂಗಳ ಸಮಯ ಕೊಟ್ಟು ವಸ್ತುಗಳನ್ನು ತೆಗೆದುಹಾಕಲು ಮನವಿ ಮಾಡಿತು. ಇದಕ್ಕೆ ಅಪಾರ್ಟ್ಮೆಂಟ್ ನಲ್ಲಿರುವ ಬಹುತೇಕ ಮಂದಿ ಒಪ್ಪಿಗೆ ಸೂಚಿಸಿದರು.

35

ಸರಿಸುಮಾರು ನಾಲ್ಕು ವಾರಗಳ ನಂತರ, ಇಬ್ಬರು ನಿವಾಸಿಗಳನ್ನು ಹೊರತುಪಡಿಸಿ ಉಳಿದವರೆಲ್ಲರೂ ಕಾರಿಡಾರ್‌ಗಳಿಂದ ತಮ್ಮ ವಸ್ತುಗಳನ್ನು ತೆರವುಗೊಳಿಸಿದರು. ಆದರೆ ಅದರಲ್ಲಿ  ಓರ್ವ ವ್ಯಕ್ತಿ ಮಾತ್ರ ಶೂ ರ್ಯಾಕ್ ತೆಗೆಯಲು ನಿರಾಕರಿಸಿದರು. ಅವರು ₹15,000 ಮುಂಗಡವಾಗಿ ಪಾವತಿಸಿ, ಮುಂದಿನ ದಿನಗಳ ದಂಡಕ್ಕೆ ಹಾಕಿಕೊಳ್ಳಿ ಎಂದು ಹೇಳಿದರು. ಇದೀಗ ದಂಡದ ಮೊತ್ತವು ₹24,000 ತಲುಪಿದೆ. ಸದ್ಯದವರೆಗೆ ದಿನಕ್ಕೆ ₹100 ದಂಡ ವಿಧಿಸಲಾಗುತ್ತಿತ್ತು. ಆದರೆ, ಇದೇ ರೀತಿಯ ಉಲ್ಲಂಘನೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು, ಈ ದಂಡವನ್ನು ದಿನಕ್ಕೆ ₹200ಕ್ಕೆ ಹೆಚ್ಚಿಸುವ ಬಗ್ಗೆ ಸಂಘ ಯೋಚನೆ ಮಾಡುತ್ತಿದೆ.
 

45

"ಸಾಮಾನ್ಯ ಸ್ಥಳಗಳು ಖಾಸಗಿ ವಸ್ತುಗಳನ್ನು ಇಡುವ ಜಾಗವಲ್ಲ. ಕಾರಿಡಾರ್‌ಗಳಲ್ಲಿ ಖಾಸಗಿ ವಸ್ತುಗಳು ಬೆಂಕಿ ಅಥವಾ ತುರ್ತು ಪರಿಸ್ಥಿತಿಗಳಲ್ಲಿ ಅಪಾಯ ಉಂಟುಮಾಡಬಹುದು," ಎಂದು ನಿವಾಸಿ ಸಂಘದ ಅಧ್ಯಕ್ಷ ಅರುಣ್ ಪ್ರಸಾದ್ ಹೇಳಿದ್ದಾರೆ.  ತುರ್ತು ಸಂದರ್ಭಗಳಲ್ಲಿ ಸುರಕ್ಷಿತ ಸ್ಥಳಾಂತರಿಸುವಿಕೆಯನ್ನು ಸುಗಮಗೊಳಿಸಲು ಬಹುಮಹಡಿ ಕಟ್ಟಡಗಳಲ್ಲಿನ ಕಾರಿಡಾರ್‌ಗಳು ಅಡೆತಡೆಗಳಿಂದ ಮುಕ್ತವಾಗಿರಬೇಕು ಎಂದು ಅಗ್ನಿಶಾಮಕ ಸುರಕ್ಷತಾ ನಿಯಮಗಳು ಸೂಚಿಸುತ್ತವೆ.

55

ಪ್ರತಿಯೊಂದು ಅಪಾರ್ಟ್ಮೆಂಟ್‌ನಲ್ಲಿ ರೀತಿ ನೀತಿ ನಿಯಮಗಳು ಇರುತ್ತವೆ. ಸ್ಥಳೀಯ ಆಡಳಿತ ಕೂಡ ಕೆಲವೊಂದು ನಿಯಮಗಳನ್ನು ಹಾಕಿರುತ್ತದೆ. ಜೊತೆಗೆ ಅಪಾರ್ಟ್ಮೆಂಟ್‌ ಅಸೋಸಿಯೇಶನ್‌ ಕೂಡ ಕೆಲವೊಂದು ನಿಯಮಗಳನ್ನು ಹಾಕುತ್ತವೆ. ಹೀಗಾಗಿ ಸರಿಯಾಗಿ ತಿಳಿದುಕೊಂಡು ಅದಕ್ಕೆ ತಕ್ಕುನಾಗಿ ನಡೆದುಕೊಳ್ಳುವುದು ಬಹಳ ಮುಖ್ಯ ಇಲ್ಲವಾದರೆ ದಂಡ ಕಟ್ಟಿಟ್ಟ ಬುತ್ತಿ.

Read more Photos on
click me!

Recommended Stories