ಬೆಂಗಳೂರಿನ ಲಾಲ್‌ಬಾಗ್‌ನಲ್ಲಿ ಗಣರಾಜ್ಯೋತ್ಸವ ಅಂಗವಾಗಿ ಆಯೋಜಿಸಲಾಗಿರುವ ವಾಲ್ಮೀಕಿ ವಿಷಯಾಧಾರಿತ ಫಲಪುಷ್ಪ ಪ್ರದರ್ಶನಕ್ಕೆ ಭಾರೀ ಜನಸ್ತೋಮ. ಲಕ್ಷಾಂತರ ಹೂವುಗಳಿಂದ ನಿರ್ಮಿಸಲಾದ ಹೂವಿನ ಮನೆ ಮತ್ತು ರಾಮಾಯಣದ ದೃಶ್ಯಗಳನ್ನು ಕಟ್ಟಿಕೊಡುವ ಕಲಾಕೃತಿಗಳು ವೀಕ್ಷಕರನ್ನು ಆಕರ್ಷಿಸುತ್ತಿವೆ.
ಗಣರಾಜ್ಯೋತ್ಸವ ಅಂಗವಾಗಿ ಬೆಂಗಳೂರಿನ ಸಸ್ಯಕಾಶಿ ಲಾಲ್‌ಬಾಗ್ ಉದ್ಯಾನದಲ್ಲಿ ಏರ್ಪಡಿಸಲಾಗಿರುವ ಫಲಪುಷ್ಪ ಪ್ರದರ್ಶನ ಮೇಳಕ್ಕೆ ಭಾರೀ ಸ್ಪಂದನೆ ಸಿಕ್ಕಿದೆ. ವಾರದ ದಿನಗಳು ಸೇರಿದಂತೆ ವಾರಾಂತ್ಯದ ದಿನಗಳಲ್ಲಿ ಲಕ್ಷಾಂತರ ಜನರು ಬಂದು ಭೇಟಿ ನೀಡುತ್ತಿದ್ದು, ತೋಟಗಾರಿಕೆ ಇಲಾಖೆಗೆ ಉತ್ತಮ ಆದಾಯವೂ ಲಭಿಸಿದೆ.
28
ಲಾಲ್‌ಬಾಗ್ ಉದ್ಯಾನದ ಆವರಣದಲ್ಲಿರುವ ಗಾಜಿನ ಮನೆಯಲ್ಲಿ ಆದಿಕವಿ ಮಹರ್ಷಿ ವಾಲ್ಮೀಕಿ ವಿಷಯಾಧಾರಿತ ಫಲಪುಷ್ಪ ಪ್ರದರ್ಶನವನ್ನು ಆಯೋಜನೆ ಮಾಡಲಾಗಿದೆ. ಇದರಲ್ಲಿ ವಾಲ್ಮೀಕಿ ಅವರು ಬರೆದ ರಾಮಾಯಣ ಹಾಗೂ ರಾಮಾಯಣದ ದೃಶ್ಯಗಳನ್ನು ಕಟ್ಟಿಕೊಡಲಾಗಿದೆ. ಸಾವಿರಾರು ಜಾತಿಯ, ದೇಶ ವಿದೇಶಗಳ ಹೂವುಗಳನ್ನು ಬಳಸಿ ಫಲಪುಷ್ಪ ಪ್ರದರ್ಶನವನ್ನು ಆಯೋಜನೆ ಮಾಡಲಾಗಿದೆ.
38
ಫಲಪುಷ್ಪ ಪ್ರದರ್ಶನ ಮೇಳದಲ್ಲಿ ಪ್ರತಿವರ್ಷದ ಆಕರ್ಷಣೆಯಂತೆ ಈ ವರ್ಷವೂ ಹೂವುಗಳಿಂದಲೇ ಒಂದು ಮಂಟಪವೊಂದನ್ನು ನಿರ್ಮಿಸಲಾಗಿದೆ. ಇದಕ್ಕೆ ಪ್ರತ್ಯೇಕವಾಗಿ ಯಾವುದೇ ಹೆಸರನ್ನು ನೀಡಲಾಗಿಲ್ಲ. ಈ ಒಂದು ಹೂವಿನ ಮನೆ ನಿರ್ಮಾಣಕ್ಕೆ ಲಕ್ಷಾಂತರ ಹೂವುಗಳನ್ನು ಬಳಕೆ ಮಾಡಲಾಗಿದೆ. ಸುಮಾರು 12 ರಿಂದ 15 ಅಡಿ ಎತ್ತರದ ಈ ಮಂಟಪಕ್ಕೆ ವೀಕ್ಷಕರು ಫಿದಾ ಆಗಿದ್ದಾರೆ.
ಫಲಪುಷ್ಮ ಮೇಳದಲ್ಲಿ ಬಳಕೆ ಮಾಡಲಾದ ತರಹೇವಾರಿ ಹೂವು, ಬಾಳೆ ಎಲೆ, ತೆಂಗಿನ ಗರಿ, ತರಕಾರಿಗಳಲ್ಲಿ ಬಗೆಬಗೆಯ ವಿನ್ಯಾಸದ ಕಲಾಕೃತಿಗಳು ಎಂಥವರನ್ನೂ ಸಹ ಆಕರ್ಷಿಸುತ್ತವೆ. ಇನ್ನು ಎಲ್ಲ ಮೂಲೆಗಳಲ್ಲಿ ಸುಮಾರು 8 ಅಡಿ ಎತ್ತರಕ್ಕೆ ಜೋಡಿಸಲಾದ ಹೂವುಗಳು ಮಾತ್ರ ಮನಮೋಹಕವಾಗಿವೆ.
68
ಗಣರಾಜ್ಯೋತ್ಸವ ನಡೆಯುವ ಜ.26ರಂದು ಒಂದೇ ದಿನದಲ್ಲಿ ಲಕ್ಷಾಂತರ ಜನರು ವೀಕ್ಷಣೆಗೆ ಆಗಮಿಸುವ ನಿರೀಕ್ಷೆಯಿದೆ. ಲಾಲ್‌ಬಾಗ್ ಉದ್ಯಾನದ ವಿವಿಧಡೆ ಹೂವಿನಿಂದ ಅಲಂಕಾಡ ಮಾಡಿದ ಆಕೃತಿಗಳು ಮಕ್ಕಳು, ಮಹಿಳೆಯರು ಸೇರಿದಂತೆ ಎಲ್ಲ ವರ್ಗದವರನ್ನೂ ಆಕರ್ಷಿಸುತ್ತವೆ.
78
ಫಲಪುಷ್ಪ ಪ್ರದರ್ಶನ ಮೇಳ ಈಗಾಗಲೇ ಕಳೆದ ನಾಲ್ಕು ದಿನಗಳ ಹಿಂದೆಯೇ ಆರಂಭವಾಗಿದ್ದು, ಸತತ 5ನೇ ದಿನವೂ ಜನರಿಂದ ಉತ್ತಮ ಸ್ಪಂದನೆ ಸಿಗುತ್ತಿದೆ. ವಾರದ ದಿನಗಳಲ್ಲಿ 20ರಿಂದ 30 ಸಾವಿರ ಜನರು ಭೇಟಿ ನಿಡುತ್ತಿದ್ದಾರೆ. ಉಳಿದಂತೆ ವಾರಾಂತ್ಯದ ದಿನಗಳಲ್ಲಿ 50 ಸಾವಿರಕ್ಕಿಂತ ಹೆಚ್ಚಿನ ಜನರು ಭೇಟಿ ನೀಡುತ್ತಿದ್ದಾರೆ.
88
ಲಾಲ್‌ಬಾಗ್ ಉದ್ಯಾನಕ್ಕೆ ಸಾಮಾನ್ಯ ದಿನಗಳಲ್ಲಿ ಪ್ರವೇಶಕ್ಕೆ ಸಾರ್ವಜನಿಕರಿಗೆ 50 ರೂ. ಹಾಗೂ ಮಕ್ಕಳಿಗೆ 30 ರೂ. ಟಿಕೆಟ್ ಇರುತ್ತದೆ. ಆದರೆ, ಈ ಫಲಪುಷ್ಪ ಪ್ರದರ್ಶನದ ವೇಳೆ ಈ ಟಿಕೆಟ್ ದರವನ್ನು ವಾರದ ದಿನಗಳಲ್ಲಿ 80 ರೂ. ಹಾಗೂ ವಾರಾಂತ್ಯದ ಶನಿವಾರ ಮತ್ತು ಭಾನುವಾರ ದಿನ 100 ರೂ. ಟಿಕೆಟ್ ದರ ನಿಗದಿಪಡಿಸಲಾಗಿದೆ.