ಬೆಂಗಳೂರಿಗೂ ಬಂತು ಫಸ್ಟ್ ಕೊರೋನಾ ಸೋಂಕು ನಿವಾರಕ ಸುರಂಗ..!

First Published Apr 9, 2020, 9:24 PM IST

ಕೊರೋನಾ ವೈರಸ್ ಸೋಂಕು ನಿಯಂತ್ರಣಕ್ಕೆ ಭಾರತದ ಹಲವೆಡೆ ಹಲವು ರೀತಿಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಈ ಪೈಕಿ ಕೆಲ ರಾಜ್ಯ ಸರ್ಕಾರ ಕೈಗೊಂಡಿರುವ ಒಂದು ಕ್ರಮ, ಎಲ್ಲರ ಗಮನ ಸೆಳೆದಿದೆ. ಸೋಂಕು ನಿವಾರಿಸುವ ಸಾಮರ್ಥ್ಯ ಹೊಂದಿರುವ ಸುರಂಗಗಳನ್ನು ರಸ್ತೆ ಮಧ್ಯದಲ್ಲಿ ಅಳವಡಿಸಲಾಗಿದೆ. ಈ ಸುರಂಗ ಮಾರ್ಗದ ಒಳಗೆ ಜನರು ಹಾಗೂ ದ್ವಿಚಕ್ರ ವಾಹನ ಓಡಾಡಬಹುದಾಗಿದೆ. ಇಂತಹದದೇ ಸುರಂಗ ಮಾರ್ಗ ಸಿಲಿಕಾನ್ ಸಿಟಿ ಬೆಂಗಳೂರಿಗೂ ಬಂದಿದೆ.

ಕೊರೋನಾ ನಿಯಂತ್ರಣ ಕ್ರಮದ ಒಂದು ಭಾಗವಾಗಿರುವ ಸೋಂಕು ನಿವಾರಕ ಸುರಂಗ ಮಾರ್ಗ ಸಿಲಿಕಾನ್‌ ಸಿಟಿ ಬೆಂಗಳೂರಿಗೆ ಬಂದಿದೆ.
undefined
ಸದಾಸ್ಮಿತ ಪ್ರತಿಷ್ಠಾನ ಸುರಂಗ ಮಾರ್ಗವನ್ನು ಪ್ರಾರಂಭಿಸಿದ್ದು, ಸಚಿವ ಕೆ.ಗೋಪಾಲಯ್ಯ ಉದ್ಘಾಟಿಸಿರು.
undefined
ಬೆಂಗಳೂರಿನ ಯಶವಂತಪುರ ಎಪಿಎಂಸಿ ಮಾರುಕಟ್ಟೆಯಲ್ಲಿ ಸೋಂಕು ನಿವಾರಕ ಸುರಂಗ ಮಾರ್ಗವನ್ನು ಕಾರ್ಯಾರಂಭ ಮಾಡಲಾಗಿದೆ.
undefined
ಸದಾ ವರ್ತಕರು, ರೈತರು, ಗ್ರಾಹಕರು ಹಾಗೂ ವಾಹನ ಚಾಲಕರಿಂದ ಗಿಜುಗುಡುವ ಎಪಿಎಂಸಿ ಮಾರುಕಟ್ಟೆಯಲ್ಲಿ ಕೊರೊನಾ ಸೋಂಕು ಹರಡುವ ಸಾಧ್ಯತೆ ಹೆಚ್ಚಿದ್ದು, ಸೋಂಕು ನಿಯಂತ್ರಣದ ಉದ್ದೇಶದಿಂದ ಇಲ್ಲಿ ಸುರಂಗ ಮಾರ್ಗವನ್ನು ಪ್ರಾರಂಭಿಸಲಾಗಿದೆ.
undefined
ಬೆಂಗಳೂರು ಮೂಲದ ಸರ್ಕಾರಿಯೇತರ ಸಂಸ್ಥೆ ಸದಾಸ್ಮಿತ ಪ್ರತಿಷ್ಠಾನ ಈ ಸೋಂಕುನಿವಾರಕ ಸುರಂಗಮಾರ್ಗವನ್ನು ನಿರ್ಮಿಸಿದೆ.
undefined
ಕೊರೊನಾ ಸೋಂಕು ಹರಡುವುದನ್ನು ತಡೆಯುವಲ್ಲಿ ಇದು ಉತ್ತಮ ವ್ಯವಸ್ಥೆಯಾಗಿದೆ.
undefined
ಸುರಂಗ ಸೆನ್ಸಾರ್ ಮೂಲಕ ಕಾರ್ಯ ನಿರ್ವಹಣೆ ಮಾಡುತ್ತದೆ. 4 ಅಡಿ ಅಂತರದಲ್ಲಿ ವ್ಯಕ್ತಿಗಳು ಬಂದಾಗ ಸೆನ್ಸಾರ್ ಮೂಲಕ ಕಾರ್ಯ ಆರಂಭವಾಗುತ್ತದೆ.
undefined
ಈಗಾಗಲೇ ಕರ್ನಾಕದಲ್ಲಿ ಮೊದಲ ಬಾರಿಗೆ ಹುಬ್ಬಳ್ಳಿಯಲ್ಲಿ ಸೋಂಕು ಕಳೆಯುವ ಸುರಂಗ ನಿರ್ಮಿಸಲಾಗಿದೆ.
undefined
ಧಾರವಾಡ ಜಿಲ್ಲಾಡಳಿತ, ಹುಬ್ಬಳ್ಳಿ ಧಾರವಾಡ ಮಹಾನಗರಪಾಲಿಕೆ, ಯಂಗ್ ಇಂಡಿಯಾ ಹಾಗೂ ಕಾನ್ಫಿಡರೇಷನ್ ಆಫ್ ಇಂಡಿಯನ್ ಇಂಡಸ್ಟ್ರಿ ಸಹಯೋಗದಲ್ಲಿ ಸೋಂಕು ಕಳೆಯುವ ಸುರಂಗ ಮಾರ್ಗ ನಿರ್ಮಾಣ ಮಾಡಲಾಗಿದೆ.
undefined
click me!