ಬೆಂಗಳೂರಿನ ಜಕ್ಕೂರು ವಿಲ್ಲಾ ಪಾರ್ಟಿ ಪ್ರಕರಣದಲ್ಲಿ, ನಿಖಿಲ್ ಮತ್ತು ಡಿಕ್ಸನ್ ಗ್ಯಾಂಗ್ ಕಾಲೇಜು ಯುವತಿಯರನ್ನು ಟಾರ್ಗೆಟ್ ಮಾಡುತ್ತಿದ್ದರು. ಪಾರ್ಟಿಗೆ ಕರೆದು, ಡ್ರಿಂಕ್ಸ್‌ನಲ್ಲಿ ನಶೆ ಮಾತ್ರೆ ಬೆರೆಸಿ ಅತ್ಯಾ*-ಚಾರ ನಡೆಸಿ, ವಿಡಿಯೋ ಮಾಡಿ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದರು.
ಬೆಂಗಳೂರಿನ ಜಕ್ಕೂರು ವಿಲ್ಲಾ ಪಾರ್ಟಿ ಪ್ರಕರಣದ ತನಿಖೆ ಚುರುಕುಗೊಂಡಿದೆ. ತನಿಖೆಯಲ್ಲಿ ಸ್ಪೋಟಕ ಮಾಹಿತಿಯೊಂದು ಬೆಳಕಿಗೆ ಬಂದಿದ್ದು, ಡಿಕ್ಸನ್ ಮತ್ತು ನಿಖಿಲ್ ಗ್ಯಾಂಗ್ ಬೆಂಗಳೂರು ಕಾಲೇಜಿನ ಯುವತಿಯರನ್ನೇ ಟಾರ್ಗೆಟ್ ಮಾಡುತ್ತಿದ್ದರು. ಪಾರ್ಟಿಗೆ ಯಾರನ್ನು ಕರೆಯಬೇಕೆಂದು ಮೊದಲೇ ಪ್ಲಾನ್ ಮಾಡಿಕೊಳ್ಳುತ್ತಿದ್ದರು ಎಂದು ತಿಳಿದು ಬಂದಿದೆ.
25
ನಶೆ ಮಾತ್ರೆ
ಈ ಕೃತ್ಯಕ್ಕಾಗಿ ಗೋವಾದಿಂದ ನಶೆ ಮಾತ್ರೆಗಳನ್ನು (ಎಕ್ಸ್‌ಟೆಸಿ-ecstasy Pill ) ತರಿಸಿಕೊಳ್ಳುತ್ತಿದ್ದರು. ಈ ಡ್ರಗ್ಸ್ ಮಾತ್ರೆಗಳನ್ನು ಪಾರ್ಟಿಗೆ ಆಗಮಿಸುವ ಯುವತಿಯರ ಡ್ರಿಂಕ್ ಅಥವಾ ಆಹಾರದಲ್ಲಿ ಸೇರಿಸಿ ಕೊಡುತ್ತಿದ್ದರು. ಯುವತಿಯರು ಅರೆಪ್ರಜ್ಞಾವಸ್ಥೆಗೊಳಗಾಗುತ್ತಿದ್ದಂತೆ ಅತ್ಯಾ*ಚಾರ ನಡೆಸುತ್ತಿದ್ದರು ಎಂಬುವುದು ಪೊಲೀಸ್ ತನಿಖೆಯಲ್ಲಿ ತಿಳಿದು ಬಂದಿದೆ. ಯುವತಿಯರ ಖಾಸಗಿ ವಿಡಿಯೋಗಳನ್ನಿಟ್ಟುಕೊಂಡು ಬ್ಲ್ಯಾಕ್‌ಮೇಲ್ ಮಾಡುತ್ತಿದ್ದರು.
35
ಗೋವಾದಲ್ಲಿಯೂ ತನಿಖೆ
ಗೋವಾಗೂ ರಾಜ್ಯದ ಪೊಲೀಸರು ತೆರಳಿ ತನಿಖೆ ನಡೆಸಿದ್ದಾರೆ. ನಿಖಿಲ್ ಈ ಪ್ರಕರಣದ ಕಿಂಗ್‌ಪಿನ್ ಆಗಿದ್ದು, ಡಿಕ್ಸಿನ್ ಸೋಶಿಯಲ್ ಮೀಡಿಯಾದ ಮೂಲಕ ಯುವತಿಯರನ್ನು ಪರಿಚಯ ಮಾಡಿಕೊಳ್ಳುತ್ತಿದ್ದನು. ನಂತರ ಪರಿಚಯವಾದ ಯುವತಿಯಿಂದ ಆಕೆಯ ಸ್ನೇಹಿತೆಯರನ್ನು ಪರಿಚಯ ಮಾಡಿಕೊಳ್ಳುತ್ತಿದ್ದನು. ಈ ರೀತಿಯಾಗಿ ಡಿಕ್ಸಿನ್ ತನ್ನ ಕೃತ್ಯದ ಜಾಲವನ್ನು ವಿಸ್ತರಿಸುತ್ತಿದ್ದನು.
ಜಕ್ಕೂರು ವಿಲ್ಲಾದಲ್ಲಿ ಆಫ್ಟರ್ ಪಾರ್ಟಿ ಅಂತ ಹೇಳಿ ಯುವತಿಯರನ್ನು ಕರೆಸಿಕೊಂಡು ನಶೆ ಪದಾರ್ಥ ನೀಡುತ್ತಿದ್ದರು. ಇನ್ನು ಈ ಪಾರ್ಟಿಗೆ 45 ವರ್ಷ ಮೇಲ್ಪಟ್ಟ ಪುರುಷರು ಆಗಮಿಸುತ್ತಿದ್ದರು. ಇವರನ್ನು ಶುಗರ್ ಡ್ಯಾಡಿ ಅಂತ ಕರೆದ್ರೆ, 25 ವರ್ಷದೊಳಗಿನ ಯುವತಿಯರನ್ನು ಶುಗರ್‌ಬೇಬಿ ಅಂತ ಕರೆಯುತ್ತಿದ್ದರು. ಇವರಿಂದ ಮೋಸಕ್ಕೊಳಗಾದ ಯುವತಿ, ಅಮೃತಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಗ ಪ್ರಕರಣ ಬೆಳಕಿಗೆ ಬಂದಿದೆ.
ಜಕ್ಕೂರು ವಿಲ್ಲಾ ಸೇರಿದಂತೆ ನಗರದ ಪ್ರತಿಷ್ಠಿತ ಹೋಟೆಲ್‌ಗಳಲ್ಲಿ ಈ ನಿಖಿಲ್ ಪಾರ್ಟಿ ಆಯೋಜನೆ ಮಾಡುತ್ತಿದ್ದನು. ಇದೀಗ ಪೊಲೀಸರು ಕೃತ ನಡೆದಿರುವ ಎಲ್ಲಾ ಸ್ಥಳಗಳ ಮಹಜರು ನಡೆಸಿದ್ದಾರೆ. ಹೋಟೆಲ್‌ಗಳಲ್ಲಿ ಸಿಸಿಟಿವಿ ಕ್ಯಾಮೆರಾ ದೃಶ್ಯಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ. ಈ ಪಾರ್ಟಿಗಳಲ್ಲಿ ಸರ್ಕಾರಿ ಅಧಿಕಾರಿಗಳು, ಉದ್ಯಮಿಗಳು ಸೇರಿದಂತೆ ಗಣ್ಯರು ಭಾಗಿಯಾಗ್ತಿರೋ ಅನುಮಾನಗಳು ವ್ಯಕ್ತವಾಗಿವೆ. ಈ ಸಂಬಂಧ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.