ಶುಕ್ರವಾರ ಕೋರಮಂಗಲ ಸೋನಿ ವಲ್ಡ್‌ರ್ ಜಂಕ್ಷನ್‌ನ ಬಳಿ ಮೇಲ್ಸೇತುವೆ ಕಾಮಗಾರಿ ಪ್ರಗತಿ ಪರಿಶೀಲನೆ ನಡೆಸಿದ ಮಂಜುನಾಥ ಪ್ರಸಾದ್
203 ಕೋಟಿ ರು. ವೆಚ್ಚದಲ್ಲಿ 2.5 ಕಿ.ಮೀ. ಉದ್ದದ ಮೇಲ್ಸೇತುವೆ ನಿರ್ಮಾಣ ಮಾಡಲಾಗುತ್ತಿದೆ. ಈಗಾಗಲೇ ಶೇ.45ರಷ್ಟುಕಾಮಗಾರಿ ಪೂರ್ಣಗೊಂಡಿದ್ದು, ಶೇ.32 ರಷ್ಟು ಹಣವನ್ನು ಗುತ್ತಿಗೆದಾರರಿಗೆ ಬಿಡುಗಡೆಗೊಳಿಸಲಾಗಿದೆ. ಉಳಿದ ಮೊತ್ತವನ್ನು ಬಿಡುಗಡೆಗೊಳಿಸಲು ಕ್ರಮ ವಹಿಸಲಾಗುವುದು ಎಂದು ತಿಳಿಸಿದ ಆಯುಕ್ತರು
ಸೇಂಟ್ ಜಾನ್ಸ್ ಸಂಶೋಧನಾ ಸಂಸ್ಥೆ ಕಾಲೇಜಿನ ಬಳಿ ಒಂದು ರಾರಯಂಪ್ ಬರಲಿದ್ದು, ಜಾಗ ನೀಡುವಂತೆ ಸೇಂಟ್ ಜಾನ್ಸ್ ಕಾಲೇಜಿಗೆ ಕೋರಲಾಗಿತ್ತು. ಆದರೆ, ಇದುವರೆಗೆ ಜಾಗವನ್ನು ಹಸ್ತಾಂತರ ಮಾಡಿಲ್ಲ. ಈ ಸಂಬಂಧ ಸೇಂಟ್ ಜಾನ್ಸ್ ಮುಖ್ಯಸ್ಥರ ಜೊತೆ ಸಭೆ ನಡೆಸಿ ಜಾಗ ಪಡೆದು ಕಾಮಗಾರಿಗೆ ವೇಗ ನೀಡಲಾಗುವುದು ಎಂದರು.
ಮೇಲ್ಸೇತುವೆಗೆ ಒಟ್ಟು 81 ಕಂಬಗಳು ಬರಲಿದ್ದು, ಈಗಾಗಲೇ 67 ಕಂಬಗಳನ್ನು ನಿರ್ಮಿಸಲಾಗಿದೆ. ಮೇಲ್ಸೇತುವೆ ಮಾರ್ಗದಲ್ಲಿ 7 ಜಂಕ್ಷನ್‌ಗಳು ಬರಲಿದ್ದು, 4 ರಾರಯಂಪ್ ನಿರ್ಮಿಸಲಾಗುವುದು. ರಸ್ತೆಯ ಎರಡು ಬದಿಯಲ್ಲಿ ತಲಾ ಎರಡು ಪಥಗಳು ಬರಲಿವೆ. ಮೇಲ್ಸೇತುವೆ ಮಾರ್ಗದಲ್ಲಿ 25 ಮರಗಳನ್ನು ಸ್ಥಳಾಂತರಿಸಲಾಗುವುದು. ಜೊತೆಗೆ ರಸ್ತೆ ಮಾರ್ಗದಲ್ಲಿ ಬರುವ 83 ಮರಗಳಲ್ಲಿ ರೆಂಬೆ-ಕೊಂಬೆಗಳನ್ನು ಕಟಾವು ಮಾಡಲಾಗುವುದು ಎಂದು ತಿಳಿಸಿದರು.
ಮೇಲ್ಸೇತುವೆ ಕೇಂದ್ರಿಯ ಸದನ ಜಂಕ್ಷನ್ ಮತ್ತು ಸೋನಿ ವಲ್ಡ್‌ರ್ ಜಂಕ್ಷನ್‌ಗಳ ಮೂಲಕ ಹಾದು ಹೋಗಲಿದೆ. ಕೇಂದ್ರೀಯ ಸದನ ಜಂಕ್ಷನ್ ಮೂಲಕ ತಾವರೆಕರೆ, ಎಂ.ಜಿ.ರಸ್ತೆ, ಹೊಸೂರು ರಸ್ತೆ, ಅಗರ, ಬಿಟಿಎಂ ಲೇಔಟ್, ಕೋರಮಂಗಲ, ಬಿಡಿಎ ಕಾಂಪ್ಲೆಕ್ಸ್, ಸರ್ಜಾಪುರ ಮುಖ್ಯರಸ್ತೆ ಹಾಗೂ ವಿವೇಕನಗರಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗಳು ಹಾದು ಹೋಗಲಿವೆ.
ಮೇಲ್ಸೇತುವೆ ನಿರ್ಮಾಣದಿಂದಾಗಿ ಈ ಭಾಗದಲ್ಲಿ ಶೇ.39.69 ರಷ್ಟು ವಾಹನ ದಟ್ಟಣೆ ಕಡಿಮೆಯಾಗಲಿದ್ದು, ಕನಿಷ್ಠ 30 ನಿಮಿಷಗಳಷ್ಟು ಸಮಯ ಉಳಿತಾಯವಾಗಲಿದೆ ಎಂದು ತಿಳಿಸಿದರು.
ಮೇಲ್ಸೇತುವೆ ಕಾಮಗಾರಿ ನಡೆಯುತ್ತಿರುವ ರಸ್ತೆಯನ್ನು ದುರಸ್ತಿ ಮಾಡಬೇಕು. ಜೊತೆಗೆ ಪಾದಚಾರಿ ಮಾರ್ಗ, ರಸ್ತೆ ಇಕ್ಕೆಲಗಳಲ್ಲಿರುವ ಮೋರಿಯಲ್ಲಿ ಹೂಳು ತೆಗೆದು ಹಾಗೂ ವಿದ್ಯುತ್ ದೀಪಗಳನ್ನು ಅಳವಡಿಸಬೇಕು ಎಂದು ಮನವಿ ಮಾಡಿದ ಮಾಜಿ ಸಚಿವ ರಾಮಲಿಂಗಾರೆಡ್ಡಿ
ಕಾಮಗಾರಿ ಪರಿಶೀಲನೆ ಯೋಜನಾ ವಿಭಾಗದ ಮುಖ್ಯ ಅಭಿಯಂತರ ಎನ್.ರಮೇಶ್, ಅಧೀಕ್ಷಕ ಅಭಿಯಂತರರು ಎಂ.ಲೋಕೇಶ್ ಉಪಸ್ಥಿತರಿದ್ದರು.
ಎಲಿವೇಟೆಡ್ ಕಾರಿಡಾರ್‌ನಲ್ಲಿ ಬರುವ 7 ಜಂಕ್ಷನ್‌ಗಳು: 1. ಈಜೀಪುರ ಮುಖ್ಯರಸ್ತೆ- ಒಳವರ್ತುಲ ರಿಂಗ್ ರಸ್ತೆ ಜಂಕ್ಷನ್, 2. ಸೋನಿ ವಲ್ಡ್‌ರ್ ಜಂಕ್ಷನ್, 3. ಕೇಂದ್ರೀಯ ಸದನ ಜಂಕ್ಷನ್, 4. ಕೋರಮಂಗಲ 8ನೇ ಮುಖ್ಯರಸ್ತೆ ಜಂಕ್ಷನ್,5. ಕೋರಮಂಗಲ 60 ಅಡಿ ರಸ್ತೆ ಜಂಕ್ಷನ್, 6. ಕೋರಮಂಗಲ ಐದನೇ ಬ್ಲಾಕ್ 1ಎ ಕ್ರಾಸ್ ರಸ್ತೆ ಜಂಕ್ಷನ್, 7. ಕೋರಮಂಗಲ ಬಿಡಿಎ ಜಂಕ್ಷನ್.