ಕಳೆದೊಂದು ವಾರದಿಂದ ರಾಜ್ಯದ ಹಲವು ಭಾಗಗಳಲ್ಲಿ ಗುಡುಗು, ಮಿಂಚು ಸಹಿತ ಭಾರೀ ಮಳೆಯಾಗಿದೆ.
ಒಂದೆಡೆ ಕೃಷಿ ಉತ್ಪನ್ನಗಳನ್ನು ಮಾರಲಾಗದೆ ರೈತರು ಕಷ್ಟಪಡುತ್ತಿದ್ದರೆ ಇನ್ನೊಂದೆಡೆ ಮಳೆಯಿಂದ ಬೆಳೆ ಹಾನಿಯಾಗುತ್ತಿದೆ.
ಚಿತ್ರದುರ್ಗ ಜಿಲ್ಲೆಯ ತಿಪ್ಪೇಸ್ವಾಮಿ. ಎಂಎಂಬುವರ ಬಾಳೆ ಕೃಷಿ ಮೊನ್ನೆ ಬೀಸಿದ ಗಾಳಿ ಸಹಿತ ಮಳೆಗೆ ಸಂಪೂರ್ಣ ಹಾನಿಯಾಗಿದೆ
ಹೊಸದುರ್ಗ ತಾಲೂಕಿನ ಕೆಂಕೆರೆ ಗ್ರಾಮದಮಾಡದಕೆರೆ ಹೋಬಳಿಯಲ್ಲಿ ಮಳೆಯಿಂದ ಬಾಳೆ ತೋಟ ಅಪಾರ ಹಾನಿಯಾಗಿದೆ.
ಕೊಯ್ಲಿಗೆ ಬಂದಿದ್ದ ಸುಮಾರು 800 ರಿಂದ 1000 ಬಾಳೆ ಗಿಡಗಳು ನೆಲಕ್ಕುರುಳಿವೆ.
ನೆಲಕಚ್ಚಿರುವ ಬಾಳೆತೋಟದಲ್ಲಿ ಮಾಲೀಕ
ಕೊರೊನ ಸಂಬಂಧಿಸಿ ರೈತರು ಈಗಾಗಲೇ ನಷ್ಟ ಅನುಭವಿಸುತ್ತಿರುವ ಸಂದರ್ಭದಲ್ಲಿ ಬೆಳೆ ಹಾನಿಯಂತ ಘಟನೆಗಳು ನಿಜಕ್ಕೂ ರೈತರನ್ನು ಚಿಂತೆಗೀಡುಮಾಡುತ್ತಿವೆ
ಬಾಳೆ ಎಲೆಯನ್ನೂ ಮಾರಾಟ ಮಾಡುವಂತಿಲ್ಲ. ಬಾಳೆ ಎಲೆ, ಗೊನೆಗಳು ಸೇರಿ ಸಂಪೂರ್ಣ ಬೆಳೆ ನಾಶವಾಗಿದೆ
1000ಕ್ಕೂ ಹೆಚ್ಚು ಬಾಳೆ ನಾಶವಾಗಿದ್ದು, ರೈತನಿಗೆ ದೊಡ್ಡ ಹೊಡೆತ ಬಿದ್ದಿದೆ.
ಈಗಾಗಲೇ ಬೆಳೆ ಮಾರಲಾಗದೆ ಸಂಕಷ್ಟದಲ್ಲಿರುವ ರೈತರಿಗೆ ಮಳೆಯಿಂದ ಬೆಳೆ ನಾಶವಾಗಿರುವುದು ಇನ್ನಷ್ಟು ನಷ್ಟ ತರಲಿದೆ.
ಮಳೆಯ ಹೊಡೆತದಿಂದ ಆರ್ಥಿಕವಾಗಿತತ್ತರಿಸಿದ ಕೃಷಿಕರಿಗೆ ಚೇತರಿಸಿಕೊಳ್ಳಲು ನೆರವಾಗಬೇಕಿದೆ.