ಬಸ್‌ಗಳಲ್ಲಿ ಪ್ರಯಾಣಿಕರ ಸುರಕ್ಷತೆಗಾಗಿ ಸ್ಯಾನಿಟೈಸರ್ ಇಡುವುದು ಕಡ್ಡಾಯವಾಗಿದ್ದರೂ, ಉಡುಪಿಯ ಬಹುತೇಕ ಬಸ್ಸುಗಳಲ್ಲಿ ಸ್ಯಾನಿಟೈಸರೂ ಇಲ್ಲ, ಸುರಕ್ಷತೆಯೂ ಇಲ್ಲ. ಆದರೆ ಇಲ್ಲೊಂದು ಆಟೋ ಮಾತ್ರ ಸೇಫ್
undefined
ಕೆಲವು ಆಟೋ ಚಾಲಕರು ತಮ್ಮ ರಿಕ್ಷಾದಲ್ಲಿ ಸ್ಯಾನಿಟೈಸರ್ ಬಾಟಲಿಗಳನ್ನಿಟ್ಟುಕೊಂಡು ಪ್ರಯಾಣಿಕರ ಕೈಗೆ ಹಾಕಿ ತಮ್ಮ ಜವಾಬ್ದಾರಿಯನ್ನು ನಿಭಾಯಿಸುತ್ತಿದ್ದಾರೆ.
undefined
ಉಡುಪಿ ತಾಲೂಕಿನ ಬಡಗುಬೆಟ್ಟು ಗ್ರಾಮದ ರಾಜೀವನಗರದ ಆಟೋ ಚಾಲಕ ಬಶೀರ್ ಅಹ್ಮದ್ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿದ್ದಾರೆ.
undefined
ಬಶೀರ್ ತಮ್ಮ ಆಟೋದಲ್ಲಿ ಸ್ಯಾನಿಟೈಸರ್ ಮಾತ್ರವಲ್ಲದೆ ಕೈ ತೊಳೆಯುವುದಕ್ಕೆ ಹ್ಯಾಂಡ್ ವಾಶ್ ಮತ್ತು ನೀರಿನ ವ್ಯವಸ್ಥೆಯನ್ನೂ ಮಾಡಿದ್ದಾರೆ.
undefined
ಅದಕ್ಕಾಗಿ ಆಟೋದ ಬಲಭಾಗದಲ್ಲಿ 6 ಲೀಟರ್ ನೀರು ತುಂಬುವ ಪೈಪ್ ಟ್ಯಾಂಕನ್ನು ಅಳವಡಿಸಿದ್ದಾರೆ.
undefined
ಅದಕ್ಕೆ ಚಾಲಕನ ಸೀಟಿನ ಅಡಿಭಾಗದಲ್ಲಿ ಪೈಪನ್ನು ಅಳವಡಿಸಿ ಎಡಭಾಗದಲ್ಲಿ ನಳ್ಳಿಯ ವ್ಯವಸ್ಥೆಯನ್ನು ಮಾಡಿದ್ದಾರೆ. ಆಟೋ ಹತ್ತುವವರು ಮೊದಲು ಈ ನಳ್ಳಿಯಲ್ಲಿ ನೀರಿನಲ್ಲಿ ಹ್ಯಾಂಡ್ ವಾಶ್ ಹಾಕಿ ಕೈತೊಳೆದುಕೊಳ್ಳಬೇಕು, ನಂತರ ಸ್ಯಾನಿಟೈಸರನ್ನೂ ಬಳಸಬಹುದು.
undefined
ಇವರು ಮನೆ ಸಮೀಪದ ರಾಜೀವನಗರ ಆಟೋ ನಿಲ್ದಾಣದಲ್ಲಿ ಆಟೋ ಇಡುತ್ತಾರೆ.
undefined
ಟ್ಯಾಂಕಿನಲ್ಲಿ 6 ಲೀಟರ್ ನೀರು ಖಾಲಿಯಾದ ತಕ್ಷಣ ಹತ್ತಿರದಲ್ಲಿರುವ ಮನೆಗೆ ಹೋಗಿ ನೀರು ತುಂಬಿಸಿ ಬರುತ್ತಾರೆ.ಅಲ್ಲದೇ ತಾನು ಕುಳಿತುಕೊಳ್ಳುವ ಸೀಟಿನ ಹಿಂದೆ ಪರದೆಯೊಂದನ್ನು ಕಟ್ಟಿದ್ದಾರೆ.ಇದರಿಂದ ತನಗೆ ಮತ್ತು ಪ್ರಯಾಣಿಕರ ನಡುವೆ ಕೊರೋನಾ ಹರಡದಂತೆ ತಡೆದಿದ್ದಾರೆ.
undefined
ಸುಮಾರು 25 ವರ್ಷ ಗಲ್‌್ಫನಲ್ಲಿ ಉದ್ಯೋಗದಲ್ಲಿದ್ದ ಬಶೀರ್, ಒಂದು ವರ್ಷದ ಹಿಂದೆ ಊರಿಗೆ ಬಂದಿದ್ದಾರೆ. ಪ್ರಸ್ತುತ ಅವರು 2 ಆಟೋಗಳನ್ನು ಹೊಂದಿದ್ದಾರೆ. ಒಂದು ಆಟೋಕ್ಕೆ ಈ ಎಲ್ಲಾ ಸುರಕ್ಷಿತಾ ಕ್ರಮಗಳನ್ನು ಅಳವಡಿಸಿದ್ದು, ಸದ್ಯದಲ್ಲಿಯೇ ಇನ್ನೊಂದು ಆಟೋದಲ್ಲಿಯೂ ಅಳವಡಿಸುವುದಾಗಿ ಹೇಳಿದ್ದಾರೆ.
undefined