ಗದಗ ತೋಂಟದಾರ್ಯ ಮಠದ ಜಾತ್ರೆಯಲ್ಲಿ ಅವಘಡ; ತುಂಡಾದ 'ಡ್ಯಾನ್ಸಿಂಗ್ ಫ್ಲೈ' ತೊಟ್ಟಿಲು

Published : May 03, 2026, 10:16 PM IST

ಗದಗ ನಗರದ ತೋಂಟದಾರ್ಯ ಮಠದ ಜಾತ್ರೆಯಲ್ಲಿ 'ಡ್ಯಾನ್ಸಿಂಗ್ ಫ್ಲೈ' ತೊಟ್ಟಿಲು ಮುರಿದುಬಿದ್ದ ಪರಿಣಾಮ ಎಂಟು ಜನರು ಗಾಯಗೊಂಡಿದ್ದಾರೆ. ತಾಂತ್ರಿಕ ದೋಷದಿಂದ ಈ ಅವಘಡ ಸಂಭವಿಸಿದ್ದು, ಈ ಘಟನೆಯು ಜಾತ್ರೆಯಲ್ಲಿ ಆತಂಕ ಸೃಷ್ಟಿಸಿ, ಅಸುರಕ್ಷಿತ ಆಟಿಕೆಗಳ ಬಳಕೆಯ ವಿರುದ್ಧ ಪ್ರತಿಭಟನೆಗೆ ಕಾರಣವಾಗಿದೆ.

PREV
14
ಜಾತ್ರೆಯಲ್ಲಿ ಅವಘಡ

ಗದಗ ನಗರ ತೋಂಟದಾರ್ಯ ಮಠದ ಅಂಗಳದಲ್ಲಿ ಅವಘಡ ಸಂಭವಿಸಿದೆ. ಜಾತ್ರೆಯಲ್ಲಿನ ಡ್ಯಾನ್ಸಿಂಗ್ ಫ್ಲೈ ತೊಟ್ಟಿಲು ಕಟ್ ಆಗಿದ್ದು, ಎಂಟು ಜನರು ಗಾಯಗೊಂಡಿದ್ದಾರೆ. ಈ ಘಟನೆಯಿಂದ ಜಾತ್ರೆಗೆ ಆಗಮಿಸಿದ ಜನರಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು.

24
ಡ್ಯಾನ್ಸಿಂಗ್ ಫ್ಲೈ ಹೆಸರಿನ ತೊಟ್ಟಿಲು

ಗದಗ ನಗರದ ತೋಂಟದಾರ್ಯ ಮಠದ ಅಂಗಳದಲ್ಲಿ ಜಾತ್ರಾಮಹೋತ್ಸವ ಅಂಗವಾಗಿ ಮಕ್ಕಳಿಗಾಗಿ ಆಟದ ವ್ಯವಸ್ಥೆ ಮಾಡಲಾಗಿತ್ತು. ಡ್ಯಾನ್ಸಿಂಗ್ ಫ್ಲೈ ಹೆಸರಿನ ತೊಟ್ಟಿಲಿನಲ್ಲಿ ಏಕಾಏಕಿ ದೊಡ್ಡ ಪ್ರಮಾಣದಲ್ಲಿ ಸದ್ದು ಕೇಳಿದೆ. ಈ ತೊಟ್ಟಿಲು ಯಂತ್ರದ ಮೂಲಕ ಚಾಲನೆಯಾಗುತ್ತಿತ್ತು. ತಾಂತ್ರಿಕ ದೋಷದಿಂದ ತೊಟ್ಟಿಲು ಕಟ್ ಆಗಿದೆ ಎಂದು ತಿಳಿದು ಬಂದಿದೆ.

34
ಜಾತ್ರೆಯಲ್ಲಿ ಪ್ರತಿಭಟನೆ

ಈ ಅವಘಡದಲ್ಲಿ ಗಾಯಗೊಂಡಿರುವ ಗಾಯಾಳುಗಳನ್ನು ಜಿಮ್ಸ್ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಈ ಘಟನೆ ಬೆನ್ನಲ್ಲೇ ಹಿಂದು ವೀರಶೈವ ಲಿಂಗಾಯತ ಯುವ ವೇದಿಕೆಯ ಸದಸ್ಯರು ಪ್ರತಿಭಟನೆ ನಡೆಸಿ,ಜಾತ್ರೆಯಲ್ಲಿ ಅಸುರಕ್ಷಿತ ಆಟಿಕೆ ಬಳಕೆ ಮಾಡಲಾಗಿದೆ ಎಂದು ಆರೋಪಿಸಿದರು. ಹಾಗೆಯೇ ಕೂಡಲೇ ಜಾತ್ರೆ ಬಂದ್ ಮಾಡುವಂತೆ ಆಗ್ರಹಿಸಿದರು.

44
ಮಠದ ವಿರುದ್ಧ ಘೋಷಣೆ

ಬಲವಂತವಾಗಿ ಜಾತ್ರೆಯಲ್ಲಿನ ಅಂಗಡಿಗಳನ್ನು ಬಂದ್ ಮಾಡಿಸಲು ಹಿಂದು ವೀರಶೈವ ಲಿಂಗಾಯತ ಯುವ ವೇದಿಕೆಯ ಸದಸ್ಯರು ಮುಂದಾಗಿದ್ದಾರೆ. ಹಾಗೆಯೇ ತೋಂಟದಾರ್ಯ ಮಠದ ವಿರುದ್ಧ ಘೋಷಣೆಗಳನ್ನು ಕೂಗುತ್ತಿದ್ದಾರೆ. ಗದಗ ಶಹರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Read more Photos on
click me!

Recommended Stories