ಗದಗ ಜಿಲ್ಲೆಯ ಲಕ್ಕುಂಡಿ ಉತ್ಖನನ ಸ್ಥಳಕ್ಕೆ ಭೇಟಿ ನೀಡಿದ ಮಾಜಿ ಕಳ್ಳ ಶಿಗ್ಲಿ ಬಸ್ಯಾ, ತನಗೆ ಬಂಗಾರದ ವಾಸನೆ ಬರುತ್ತಿದೆ ಎಂದು ಹೇಳಿಕೆ ನೀಡಿ ಕುತೂಹಲ ಮೂಡಿಸಿದ್ದಾನೆ. ರಿತ್ತಿ ಕುಟುಂಬಕ್ಕೆ ಸರ್ಕಾರ ಶೇ.30ರಷ್ಟು ಮೌಲ್ಯವನ್ನು ನೀಡಬೇಕೆಂದು ಆತ ಆಗ್ರಹಿಸಿದ್ದಾನೆ.
ಗದಗ ಜಿಲ್ಲೆಯ ಲಕ್ಕುಂಡಿಯಲ್ಲಿ ಉತ್ಖನನ ಕಾರ್ಯ 5ನೇ ದಿನಕ್ಕೆ ಕಾಲಿಟ್ಟಿದೆ. ಇಂದು ಉತ್ಖನನ ಕಾರ್ಯ ನಡೆಯುತ್ತಿರುವ ಕೋಟೆ ವೀರಭದ್ರೇಶ್ವರ ದೇವಸ್ಥಾನಕ್ಕೆ ತನ್ನ ಕಳ್ಳತನ ಪ್ರಕರಣಗಳಿಂದಲೇ ರಾಜ್ಯದಲ್ಲಿ ಸದ್ದು ಮಾಡಿದ್ದ ಶಿಗ್ಲಿ ಬಸ್ಯಾ ಆಗಮಿಸಿದ್ದು, ನನಗೆ ಬಂಗಾರದ ವಾಸನೆ ಬರ್ತಿದೆ ಎಂದು ಹೇಳಿದ್ದಾನೆ.
26
ಚಿನ್ನ, ಬೆಳ್ಳಿ ಮತ್ತು ವಜ್ರಗಳನ್ನು ಹೊಂದಿರುವ ಭೂಮಿ
ಏಷ್ಯಾನೆಟ್ ಸುವರ್ಣ ನ್ಯೂಸ್ ಜೊತೆ ಮಾತನಾಡಿರುವ ಶಿಗ್ಲಿ ಬಸ್ಯಾ, ಲಕ್ಕುಂಡಿ ಐತಿಹಾಸಿಕ ಸ್ಥಳವಾಗಿದ್ದು, ಇದು ನೂರು ಬಾವಿ ಮತ್ತು ನೂರು ದೇವಸ್ಥಾನಗಳನ್ನು ಹೊಂದಿರುವ ಪ್ರದೇಶವಾಗಿದೆ. ಈ ಪ್ರದೇಶ ಹಂಪಿಯಂತೆ ಇತಿಹಾಸ ಹೊಂದಿರುವ ಕಾರಣ ಭೂಮಿಯ ಒಡಲಾಳದಲ್ಲಿ ಅಪಾರ ಚಿನ್ನ, ಬೆಳ್ಳಿ ಮತ್ತು ವಜ್ರಗಳನ್ನು ಹೊಂದಿರುವ ಸಾಧ್ಯತೆಗಳಿವೆ. ವಿಷಯ ಕೇಳಿ ಮಂತ್ರಾಲಯದಿಂದ ಇಲ್ಲಿಗೆ ಬಂದಿದ್ದೇನೆ ಎಂದರು.
36
ಸೂಕ್ತ ಪರಿಹಾರಕ್ಕೆ ಆಗ್ರಹ
ನಾನು ಕಳ್ಳತನ ಮಾಡೋದನ್ನು ಬಿಟ್ಟು ಒಳ್ಳೆಯ ಮನುಷ್ಯನಾಗಿದ್ದೇನೆ. ಈ ಹಿಂದೆಯೂ ನಾನು ಹಲವು ಬಾರಿ ಲಕ್ಕುಂಡಿಗೆ ಬಂದಿದ್ದೇನೆ. ಸರ್ಕಾರ ಲಕ್ಕುಂಡಿಯನ್ನು ಅಭಿವೃದ್ಧಿಪಡಿಸಿ ಇಲ್ಲಿಯ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಬೇಕು. ಲಕ್ಕುಂಡಿಯಲ್ಲಿರುವ ದೇವಸ್ಥಾನದ ವ್ಯಾಪ್ತಿಯಲ್ಲಿ ಜನರು ವಾಸವಾಗಿದ್ದಾರೆ. ಹಾಗಾಗಿ ಜನರಿಗೆ ಸೂಕ್ತ ಪರಿಹಾರ ನೀಡಬೇಕೆಂದು ಶಿಗ್ಲಿ ಬಸ್ಯಾ ಆಗ್ರಹಿಸಿದ್ದಾರೆ.
ಮುಂದುವರಿದು ಮಾತನಾಡಿದ ಶಿಗ್ಲಿ ಬಸ್ಯಾ, ರಿತ್ತಿ ಕುಟುಂಬದ ಪ್ರಾಮಾಣಿಕತೆಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಮನೆಗೆ ಅಡಿಪಾಯ ಹಾಕುವ ಸಂದರ್ಭದಲ್ಲಿ ಇಷ್ಟೊಂದು ಚಿನ್ನ ಸಿಕ್ಕಿದೆ ಅಂದ್ರೆ ಗ್ರಾಮದಲ್ಲಿ ಇನ್ನೆಷ್ಟು ಚಿನ್ನ ಇರಬಹುದು ಎಂದು ಊಹಿಸಿಕೊಳ್ಳಿ. ಸರ್ಕಾರ ರಿತ್ತಿ ಕುಟುಂಬಕ್ಕೆ ನಿಧಿಯ ಶೇ.30ರಷ್ಟು ಮೌಲ್ಯವನ್ನು ಪಾವತಿಸಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದೆ.
56
ಲಕ್ಕುಂಡಿಯ ಅಭಿವೃದ್ಧಿಗಾಗಿ ಹೋರಾಟ
ಈ ಹಿಂದೆ ನಿಧಿಗಳ್ಳರಿಂದ ಲಕ್ಕುಂಡಿಯಲ್ಲಿ ಚಿನ್ನದ ಖಜಾನೆವಿರೋ ಮಾಹಿತಿಯನ್ನು ಪಡೆದಿದ್ದೆ. ಗ್ರಾಮದಲ್ಲಿ ಆಗಾಗ್ಗೆ ಚಿನ್ನ ಸಿಗುತ್ತಿರುತ್ತದೆ ಎಂಬ ಮಾತುಗಳನ್ನು ಕೇಳಿದ್ದೇನೆ. ಮಳೆ ಬಂದಾಗ ಮಣ್ಣು ಕೊಚ್ಚಿಕೊಂಡು ಹೋಗುವ ಸಂದರ್ಭದಲ್ಲಿ ಚಿನ್ನ ಹೊರ ಬಂದಿರುವ ಸಾಧ್ಯತೆಗಳಿವೆ. ಮುಂದಿನ ದಿನಗಳಲ್ಲಿ ಲಕ್ಕುಂಡಿಯ ಅಭಿವೃದ್ಧಿಗಾಗಿ ಹೋರಾಟ ಮಾಡೋದಾಗಿ ತಿಳಿಸಿದ್ದಾರೆ.
66
ಯಾರು ಈ ಶಿಗ್ಲಿ ಬಸ್ಯಾ?
ಸುಮಾರು 250 ಕ್ಕೂ ಹೆಚ್ಚು ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿದ್ದ ಶಿಗ್ಲಿ ಬಸ್ಯಾ ಮನಃ ಪರಿವರ್ತನೆ ಬಳಿಕ ಕಳ್ಳತನ ಮಾಡಿದ ವಸ್ತು ಹಿಂದಿರುಗಿಸಿದ್ದರು. ನಂತರದಲ್ಲಿ ನಿರಾಶ್ರಿತರಿಗೆ ವಸತಿ ಸೇರಿದಂತೆ ವಿವಿಧ ಸಾಮಾಜಿಕ ಹೋರಾಟದಲ್ಲಿ ಶಿಗ್ಲಿ ಬಸ್ಯಾ ತೊಡಗಿಕೊಂಡಿದ್ರು. ಆಗಾಗ ಶಿಗ್ಲಿ ಬಸ್ಯಾ ಡೈಲಾಗ್‌ಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುತ್ತವೆ.