1978ರ 9ನೇ ತರಗತಿಯ ಅಂಕಪಟ್ಟಿಯೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಮಲ್ಲಿಕಾರ್ಜುನ್ ಮೇಟಿ ಎಂಬುವವರು ತಮ್ಮ ಅಂಕಪಟ್ಟಿಯನ್ನು ಹಂಚಿಕೊಂಡು, ಅಂದಿನ ದಿನಗಳಲ್ಲಿ ಹೆಚ್ಚು ಅಂಕಗಳ ಒತ್ತಡವಿರಲಿಲ್ಲ ಮತ್ತು ಪಾಸ್ ಆಗುವುದೇ ದೊಡ್ಡ ಸಂಭ್ರಮವಾಗಿತ್ತು ಎಂದು ನೆನಪಿಸಿಕೊಂಡಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ 1978ರ ಅಂಕಪಟ್ಟಿಯ ಫೋಟೋವೊಂದು ಮುನ್ನೆಲೆಗೆ ಬಂದಿದೆ. ಈ ಮಾರ್ಕ್ಸ್ ಕಾರ್ಡ್ ತುಂಬಾ ವಿಭಿನ್ನ ಮತ್ತು ವಿಶೇಷವಾಗಿದೆ. ಮಲ್ಲಿಕಾರ್ಜುನ್ ಮೇಟಿ ಎಂಬವರು ತಮ್ಮ ಅಂಕಪಟ್ಟಿ ಜೊತೆ ಅಂದಿನ ಸುಂದರ ದಿನಗಳನ್ನು ನೆನಪು ಮಾಡಿಕೊಂಡಿದ್ದಾರೆ. ಇದೇ ಪೋಸ್ಟ್‌ನಲ್ಲಿ ಅಂದು ಹೆಚ್ಚು ಅಂಕ ತೆಗೆಯಬೇಕೆಂಬ ಒತ್ತಡ ಇರಲಿಲ್ಲ ಎಂಬ ವಿಷಯವನ್ನು ಒತ್ತಿ ಹೇಳಿದ್ದಾರೆ.
25
ಇಂದಿನ ಮಕ್ಕಳ ಮೇಲೆ ಪರೀಕ್ಷೆಯ ಒತ್ತಡ
ಇಂದಿನ ಮಕ್ಕಳಿಗೆ ಹೆಚ್ಚು ಅಂಕ ತೆಗೆಯಬೇಕೆಂಬ ಒತ್ತಡದಲ್ಲಿರುತ್ತಾರೆ. ಇದಕ್ಕೆ ತಕ್ಕಂತೆ ಪೋಷಕರು ಸಹ ಎಲ್ಲರಿಗಿಂತ ತಮ್ಮ ಮಕ್ಕಳು ಹೆಚ್ಚು ಅಂಕ ತೆಗೆಯಬೇಕೆಂದು ಬಯಸುತ್ತಾರೆ. ಇದಕ್ಕಾಗಿ ಎಷ್ಟೋ ಜನರು, ಶಾಲೆ ಜೊತೆ ಮಕ್ಕಳನ್ನು ಟ್ಯೂಷನ್‌ಗೆ ಹಾಕುತ್ತಾರೆ. ಶಾಲೆ-ಟ್ಯೂಷನ್ ಮುಗಿಸ್ಕೊಂಡು ಬಂದ್ರೂ ಓದುವಂತೆ ಒತ್ತಡ ಹಾಕುತ್ತಾರೆ.
35
9ನೇ ಕ್ಲಾಸ್‌ನ ಅಂಕಪಟ್ಟಿ
ಮಲ್ಲಿಕಾರ್ಜುನ್ ಮೇಟಿಯವರು ತಮ್ಮ 9ನೇ ಕ್ಲಾಸ್‌ನ ಅಂಕಪಟ್ಟಿ ಹಂಚಿಕೊಂಡಿದ್ದಾರೆ. ಈ ಅಂಕಪಟ್ಟಿಯ ಪ್ರಕಾರ, ಮಲ್ಲಿಕಾರ್ಜುನ್ ಮೇಟಿಯವರು ಕೊಪ್ಪಳದ SGMP ಪ್ರೌಢ ಶಾಲೆಯ ವಿದ್ಯಾರ್ಥಿಯಾಗಿದ್ದಾರೆ. 600ಕ್ಕೆ 271 ಅಂಕಗಳನ್ನು ತೆಗೆದುಕೊಂಡು ತೇರ್ಗಡೆಯಾಗಿದ್ದಾರೆ. ವಿಷಯವಾರು ಅಂಕಗಳನ್ನು ಸಹ ನೀವು ಅಂಕಪಟ್ಟಿಯಲ್ಲಿ ಕಾಣಬಹುದಾಗಿದೆ.
ಇತ್ತೀಚೆಗೆ ರಾಜ್ಯದಲ್ಲಿ ಮೂರನೇ ಭಾಷೆ ಆಯ್ಕೆ ಬಗ್ಗೆ ಹೆಚ್ಚು ಚರ್ಚೆಯಲ್ಲಿದೆ. ಈ ಹಿಂದೆ ವಿದ್ಯಾರ್ಥಿಗಳು ಮೂರನೇ ಭಾಷೆಯಾಗಿ ಹಿಂದಿಯನ್ನು ಓದುತ್ತಿದ್ದರು. ಆದ್ರೆ ಹಿಂದಿ ಪರೀಕ್ಷೆ ಕೇವಲ 50 ಅಂಕಗಳಿಗೆ ಮಾತ್ರ ಸೀಮಿತವಾಗಿತ್ತು. 50 ಅಂಕಗಳಿಗೆ ಕನಿಷ್ಠ 15 ಮಾರ್ಕ್ ತೆಗೆದುಕೊಂಡ್ರೆ ವಿದ್ಯಾರ್ಥಿಗಳು ಉತ್ತೀರ್ಣರಾಗುತ್ತಿದ್ದರು. ಮಲ್ಲಿಕಾರ್ಜುನ್ ಮೇಟಿಯವರು ಹಿಂದಿ ವಿಷಯದಲ್ಲಿ 50ಕ್ಕೆ 26 ಅಂಕ ತೆಗೆದುಕೊಂಡಿರೋದನ್ನು ಗಮನಿಸಬಹುದು.
55
ಪರೀಕ್ಷೆ ಬಗ್ಗೆ ಮಲ್ಲಿಕಾರ್ಜುನ್ ಮೇಟಿ ಅವರ ಅಭಿಪ್ರಾಯ
ಒಟ್ಟು ಪರೀಕ್ಷದಾಗ ಪಾಸ್ ಆಗಬೇಕು ಅಂತಿದ್ರು. ನಾವು ಅಷ್ಟು ಗುರಿ ಇಟ್ಕೊಂಡಿರ್ತಿದ್ವಿ. ಪಾಸೂ ಆಗ್ತಿದ್ವಿ. ಆಗ ನಮಗೆಲ್ಲಾ Rank, ಡಿಸ್ಟಿಂಕ್ಷನ್, ಎ+ ಅದೂ ಇದೂ ಇರ್ತಿದ್ದಿಲ್ಲ. ಪಾಸ್ ಆದರೆ ಮನೆಯವರೆಲ್ಲರಿಗೂ ಖುಷಿಯೋ ಖುಷಿ. ನಮಗ ದೊಡ್ಡ ಮರ್ಯಾದಿ ಸಿಗುತಿತ್ತು. ಹಿಂದಿ ವಿಷಯ ಹ್ಯಾಂಗ್ ಓದಿದವೋ, ಬರಿತಿದ್ವೋ ಗೊತ್ತೇ ಇಲ್ಲ. ಆದ್ರೂ ಸೂಪರ್. ಹಿಂದಿ ಓದಿ ಕಲಿತಿಲ್ಲ. ಹಿಂದಿ ಸಿನಿಮಾ ನೋಡಿ ಹಿಂದಿ ಭಾಷೆ ಒಂದಿಷ್ಟು ಮಾತಾಡೋದು ಕಲಿತಿದ್ದೇವೆ ಎಂದು ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದಾರೆ.