ಟ್ರಕ್‌ನಲ್ಲಿ ಊರೆಲ್ಲಾ ಸುತ್ತಿದ ನಿರುದ್ಯೋಗಿ: ಟಾಪ್ ಕಂಪನಿಯಿಂದ ಸಿಕ್ತು ಬಂಪರ್ ಜಾಬ್ ಆಫರ್

First Published | Nov 7, 2020, 10:44 AM IST

ಕೊರೋನಾದಿಂದ ಬಹಳಷ್ಟು ಜನ ಕೆಲಸ ಕಳೆದುಕೊಂಡಿದ್ದಾರೆ. ಇಲ್ಲೊಬ್ಬ ಕೆಲಸ ಹುಡುಕೋದನ್ನೇ ಫುಲ್ ಟೈಂ ಕೆಲಸ ಮಾಡಿಕೊಂಡಿದ್ದ. ಆದರೆ ಆತನ ಕ್ರಿಯೇಟಿವ್ ಐಡಿಯಾ ಆತನನ್ನು ಎಲ್ಲಿಗೆ ತಲುಪಿಸಿದೆ ನೋಡಿ..! ಕಂಪನಿಯೇ ಆತನ ಬಳಿ ಬಂದು ಕೆಲಸ ನೀಡುವಷ್ಟರಮಟ್ಟಿಗೆ ಆತ ಮಾಡಿದ್ದೇನು ನೋಡಿ

ಕೆಲಸ ಗಿಟ್ಟಿಸಿಕೊಳ್ಳಲು ನಿರುದ್ಯೋಗಿಯೊಬ್ಬನ ಪ್ಲ್ಯಾನ್ ಯಶಸ್ವಿಯಾಗಿದೆ
ಕೆಲಸ ಹುಡುಕಿಕೊಳ್ಳುವುದೇ ಫುಲ್ ಟೈಮ್ ಜಾಬ್ ಆಗಿದ್ದವನ ಲಕ್ ಬದಲಾಗಿದೆ
Tap to resize

ಟ್ರಕ್ ಹಿಂದೆ ರೆಸ್ಯೂಮ್ ತೆಗೆದುಕೊಂಡು ಹೋಗಿದ್ದ ವ್ಯಕ್ತಿಗೆ ಜಾಬ್ ಆಫರ್ ಬಂದಿದೆ
ಕೊರೋನಾ ಸೋಂಕಿನಿಂದ ಕೆಲಸ ಕಳೆದುಕೊಂಡು ಕಷ್ಟಪಡುತ್ತಿದ್ದ ವ್ಯಕ್ತಿ ಕೊನೆಗೂ ಕೆಲಸ ಗಿಟ್ಟಿಸಿಕೊಂಡಿದ್ದಾನೆ
ಇಂಗ್ಲೆಂಡ್‌ನ ಜೇಮ್ಸ್ ಪೆಂಬ್ಲಿಂಗ್ಟನ್ ಎಂಬ ವ್ಯಕ್ತಿ ಕೆಲಸ ಮಾಡುತ್ತಿದ್ದ ಕಂಪನಿಯೂ ಮುಚ್ಚಿ ಹೋಗಿತ್ತು. ಕಳೆದ ಮಾರ್ಚ್‌ನಿಂದ ನಿರುದ್ಯೋಗಿಯಾಗಿದ್ದ.
ಆಗಿಂದಲೂ ಕೆಲಸ ಹುಡುಕುವುದೇ ಇವನ ಫುಲ್ ಟೈಮ್ ಜಾಬ್ ಆಗಿತ್ತು.
ಸುಮಾರು 100 ಕೆಲಸಗಳಿಗೆ ಅರ್ಜಿ ಹಾಕಿದರೂ, ಸಂದರ್ಶನಕ್ಕೆ ಕರೆದಿದ್ದು ಮಾತ್ರ ಎರಡೇ ಕಡೆ. ಆದರೆ, ಧೃತಿಗೆಡಲಿಲ್ಲ.
ಕ್ರಿಯೇಟಿವ್ ಆಗಿ ಯೋಚಿಸಿದ್ದಾರೆ. ಟ್ರಕ್ ಹಿಂದೆ ತಮ್ಮ ದೊಡ್ಡ ರೆಸ್ಯೂಮ್ ಇಟ್ಟುಕೊಂಡು ಅಕ್ಷರಶಃ ಬೀದಿ ಬೀದಿ ಸುತ್ತಿದ್ದಾರೆ.
ಈ ಕೊರೋನಾ ವೈರಸ್ ತಂದಿಟ್ಟ ಸಮಸ್ಯೆ ಒಂದೆರಡಲ್ಲ. ಭಾರತದಲ್ಲಿ ಮಾತ್ರವಲ್ಲ ವಿಶ್ವದ ವಿವಿಧೆಡೆ ಹಲವರು ಕೆಲಸ ಕಳೆದು ಕೊಂಡಿದ್ದಾರೆ. ಹೊತ್ತಿನ ತುತ್ತಿಗೂ ಜನರು ಪರದಾಡುವಂತಾಗಿದೆ. ಕೆಲಸವಿಲ್ಲದೇ ಅನೇಕರು ಬೀದಿಗೆ ಬಂದಿದ್ದಾರೆ.
ಇದನ್ನು ಗಮನಿಸಿದ ಕಂಪನಿಯೊಂದು ಇವರಿಗೆ ಒಳ್ಳೆ ಉದ್ಯೋಗದ ಆಫರ್ ನೀಡಿದೆ. ಎಲ್ಲದಕ್ಕೂ ಕಾಲ ಕೂಡಿ ಬರಬೇಕು ಎಂದು ಹೇಳುವುದು ಇದಕ್ಕೆ ಅಲ್ಲವೇ?

Latest Videos

click me!