ಕರ್ವಾಚೌತ್‌ ಆಚರಿಸಿದ ರೈನಾ, ಪಾಂಡ್ಯ ಕ್ರಿಕೆಟಿಗರ ಪತ್ನಿಯರು!

Suvarna News   | Asianet News
Published : Nov 05, 2020, 05:38 PM IST

ತನ್ನ ಗಂಡನ ಸುದೀರ್ಘ ಆಯಸ್ಸಿಗಾಗಿ ಉಪವಾಸ ಮಾಡಿ, ಕರ್ವಾ ಚೌತ್‌ ವ್ರತ ಆಚರಿಸಲಾಗುತ್ತದೆ. ಈ ಹಬ್ಬವನ್ನು ದೇಶಾದ್ಯಂತ ಸಂಭ್ರಮ, ಸಡಗರಿಂದ ನವೆಂಬರ್ 4ರಂದು ಆಚರಿಸಲಾಯಿತು.  ಭಾರತೀಯ ಕ್ರಿಕೆಟಿಗರ ಪತ್ನಿಯರೂ ತಮ್ಮ ಪತಿಯ ದೀರ್ಘಾಯುಷ್ಯಕ್ಕಾಗಿ ಉಪವಾಸ ಮಾಡಿದರು. ಪ್ರಸ್ತುತ, ಐಪಿಎಲ್‌ ಕಾರಣದಿಂದ ಹಲವು ಕ್ರಿಕೆಟಿಗರು ದುಬೈನಲ್ಲಿ ಇದ್ದಾರೆ. ಕ್ರಿಕೆಟಿಗರ ಪತ್ನಿಯರು ತಮ್ಮ ಗಂಡಂದಿರು ಇಲ್ಲದೇ ಹಬ್ಬವನ್ನು ಆಚರಿಸಬೇಕಾಯಿತು. ಇಲ್ಲಿದೆ ಫೋಟೋಗಳು. 

PREV
19
ಕರ್ವಾಚೌತ್‌ ಆಚರಿಸಿದ ರೈನಾ, ಪಾಂಡ್ಯ ಕ್ರಿಕೆಟಿಗರ ಪತ್ನಿಯರು!

 ಭಾರತೀಯ ಕ್ರಿಕೆಟಿಗರ ಪತ್ನಿಯರೂ ತಮ್ಮ ಪತಿಯ ದೀರ್ಘಾಯುಷ್ಯಕ್ಕಾಗಿ ಕಾರ್ವಾ ಚೌತ್‌ ಉಪವಾಸ ಮಾಡಿದರು.

29

ಈ ಬಾರಿ ಐಪಿಎಲ್‌ನ ಭಾಗವಹಿಸದ ಸುರೇಶ್ ರೈನಾ ತಮ್ಮ ಪತ್ನಿ ಪ್ರಿಯಾಂಕಾ ಜೊತೆ ದೆಹಲಿಯಲ್ಲಿ ಕಾರ್ವಾ ಚೌತ್ ಆಚರಿಸಿದರು. ಈ ಶುಭ ಸಂದರ್ಭದಲ್ಲಿ ತಮ್ಮ ಪತ್ನಿಯೊಂದಿಗೆ ಕ್ಲಿಕ್ಕಿಸಿದ ಫೋಟೋವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ.

39

ಕಿಂಗ್ಸ್ ಇಲೆವೆನ್ ಪಂಜಾಬ್‌ನ ಸ್ಟಾರ್ ಪ್ಲೇಯರ್ ಮಯಾಂಕ್ ಅಗರ್ವಾಲ್ ಈ ಪವಿತ್ರ ಹಬ್ಬವನ್ನು ಪತ್ನಿ ಆಶಿತಾ ಅವರೊಂದಿಗೆ ಆಚರಿಸಿದರು. 

49

ಫೋಟೋದೊಂದಿಗೆ ಅಗರ್ವಾಲ್ ನೀಡಿದ ಕ್ಯಾಪ್ಷನ್‌ ಕೂಡ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. 'ಕಾರ್ವಾಚೌತ್ ಆಚರಿಸುವವರಿಗೆ ಪ್ರೀತಿ, ನಗೆ ಮತ್ತು ಶುಭವಾಗಲಿ. ಈ ಕಾರ್ವಾಚೌತ್‌ ನಿಮಗಾಗಿ ಮತ್ತು ನಿಮ್ಮ ಸಂಗಾತಿಗೆ ಸ್ಪೆಷಲ್. ಎಲ್ಲಾ ಗಂಡಂದಿರು ತಮ್ಮ ಜೀವ ವಿಮಾ ರಿನೀವಲ್‌ಗಾಗಿ ಸೂಪರ್ ಸ್ಪೆಷಲ್ ಆಗಿದೆ. ಎಲ್ಲಾ ಗಂಡಂದಿಗೆ ತಮ್ಮ ಜೀವ ವಿಮಾ ರಿನಿವೂ ಆಗಿದ್ದಕ್ಕೆ ಅಭಿನಂದನೆಗಳು' ಎಂದು ಬರೆದಿದ್ದಾರೆ.

59

ಮುಂಬೈ ಇಂಡಿಯನ್ಸ್‌ ಆಲ್‌ರೌಂಡರ್ ಕ್ರುನಾಲ್ ಪಾಂಡ್ಯ ಪತ್ನಿ ಪಂಖುರಿ ಕೂಡ ತಮ್ಮ ಗಂಡನ ದೀರ್ಘಾಯುಷ್ಯಕ್ಕಾಗಿ ಉಪವಾಸ ಮಾಡಿದರು ಮತ್ತು ಇಬ್ಬರೂ ದುಬೈನಲ್ಲಿ ಹಬ್ಬವನ್ನು ಆಚರಿಸಿದರು. ಪಂಖುರಿ ತಮ್ಮ ಫೋಟೋವನ್ನು ಪತಿಯೊಂದಿಗೆ ಇನ್‌ಸ್ಟಾಗ್ರಾಂನಲ್ಲಿ ಫೋಸ್ಟ್‌ ಮಾಡಿದ್ದಾರೆ

69

ಅದೇ ಸಮಯದಲ್ಲಿ, ಕ್ರುನಾಲ್ ಸಹೋದರ  ಹಾರ್ದಿಕ್  ಪಾಂಡ್ಯ ಹೆಂಡತಿಯಿಂದ ದೂರವಿದ್ದಾರೆ. ಆದ್ದರಿಂದ ನತಾಶಾ ಅವರನ್ನು ಮಿಸ್ ಮಾಡಿ ಕೊಂಡಿದ್ದಾರೆ. ಪಾಂಡ್ಯ ಪ್ರಸ್ತುತ ದುಬೈನಲ್ಲಿದ್ದರೆ  ತಮ್ಮ 3 ತಿಂಗಳ ಮಗನೊಂದಿಗೆ ನತಾಶಾ ಇಂಡಿಯಾದಲ್ಲಿದ್ದಾರೆ. ಮದುವೆಯಾದ ನಂತರ ಇದು ಅವರ ಮೊದಲ ಕರ್ವಾಚೌತ್.

79

ಭಾರತೀಯ ಕ್ರಿಕೆಟ್ ತಂಡದ ಮಾಜಿ ಆರಂಭಿಕ ಆಟಗಾರ ಸೆಹ್ವಾಗ್ ತಮ್ಮ ಹೆಂಡತಿಯೊಂದಿಗೆ ಈ ಹಬ್ಬ ಆಚರಿಸಿ, ಅವರ ಮತ್ತು ಪತ್ನಿ ಆರತಿ ಅಹ್ಲಾವತ್ ಅವರ ಫೋಟೋವನ್ನು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದಾರೆ.

89

ಸನ್‌ರೈಸರ್ಸ್ ಹೈದರಾಬಾದ್ ಸ್ಟಾರ್ ಬೌಲರ್ ಭುವನೇಶ್ವರ್ ಕುಮಾರ್ ಅವರು ಆರಂಭದಲ್ಲಿ ಗಾಯದಿಂದಾಗಿ ಹೊರಗುಳಿದಿದ್ದರು. ಅವರು ತಮ್ಮ ಹೆಂಡತಿಯ ಜೊತೆ ವ್ರತದ ನಂತರ ಪೋಟೋವನ್ನು ಶೇರ್‌ ಮಾಡಿಕೊಂಡಿದ್ದಾರೆ.
 
99

ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮತ್ತು  ಪತ್ನಿ ಅನುಷ್ಕಾ ಶರ್ಮಾ ಕಳೆದ ಎರಡು ವರ್ಷಗಳಿಂದ ಕಾರ್ವಾ ಚೌತ್ ದಿನ ಉಪವಾಸ ಮಾಡುತ್ತಿದ್ದಾರೆ. ಕಳೆದ ವರ್ಷ ಇವರಿಬ್ಬರ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಅನುಷ್ಕಾ ಜೊತೆಗೆ ವಿರಾಟ್ ಕೂಡ  ಉಪವಾಸ ಮಾಡಿದರು. ಈ ಬಾರಿ ಗರ್ಭಿಣಿಯಾಗಿರುವ ಕಾರಣ ಅನುಷ್ಕಾ ಉಪವಾಸ ಕೈಗೊಂಡಿಲ್ಲ.   

click me!

Recommended Stories