ಆಟಗಾರರ ವರ್ಗಾವಣೆಗೆ ಐಪಿಎಲ್ ಫ್ರಾಂಚೈಸಿಗಳಿಂದ ನಿರಾಸಕ್ತಿ..!

First Published | Oct 14, 2020, 10:39 AM IST

ದುಬೈ: ಐಪಿಎಲ್ 13ನೇ ಆವೃತ್ತಿಯಲ್ಲಿ ಆಟಗಾರರ ಮಧ್ಯಂತರ ವರ್ಗಾವಣೆಗೆ ಬಿಸಿಸಿಐ ಅವಕಾಶ ನೀಡಿದ್ದು, ಸೋಮವಾರದಿಂದ 5 ದಿನಗಳವರೆಗೂ ಕಾಲಾವಕಾಶ ನೀಡಿದೆ. ಆದರೆ ಮೊದಲ ದಿನ ಯಾವ ತಂಡವೂ ಆಟಗಾರರನ್ನು ಬದಲಿಸಿಕೊಳ್ಳಲು ಆಸಕ್ತಿ ತೋರಲಿಲ್ಲ. 
ಹಲವು ತಂಡದಲ್ಲಿ ಪ್ರಮುಖ ಸ್ಟಾರ್ ಆಟಗಾರರು ಸುಮ್ಮನೆ ಬೆಂಚ್ ಕಾಯಿಸುತ್ತಿದ್ದಾರೆ. ಹೀಗಾಗಿ ಅಂತಹ ಉಪಯುಕ್ತ ಆಟಗಾರರನ್ನು ಖರೀದಿಸಲು ಅಗತ್ಯವಿರುವ ಫ್ರಾಂಚೈಸಿಗಳು ಮುಂದಾಗಬಹುದು ಎಂದು ನಿರೀಕ್ಷಿಸಲಾಗಿತ್ತು.
 

ಇದೇ ಮೊದಲ ಬಾರಿಗೆ ಐಪಿಎಲ್ ಟೂರ್ನಿ ಅರ್ಧದಲ್ಲಿಯೇ ಆಟಗಾರರನ್ನು ವರ್ಗಾವಣೆ ಮಾಡಲು ಬಿಸಿಸಿಐ ಅವಕಾಶ ನೀಡಿತ್ತು.
undefined
ಆದರೆ ಬಿಸಿಸಿಐನ ಕೆಲ ಕಠಿಣ ನಿಯಮಗಳಿಂದಾಗಿ ತಂಡಗಳು ನಿರಾಸಕ್ತಿ ತೋರಲು ಕಾರಣ ಎಂದು ವಿಶ್ಲೇಷಿಸಲಾಗಿದೆ.
undefined

Latest Videos


ಪ್ರಮುಖವಾಗಿ ಬೇರೆ ತಂಡದಿಂದ ಆಟಗಾರನನ್ನು ಸೇರಿಸಿಕೊಳ್ಳುವ ತಂಡ ಹೆಚ್ಚುವರಿ ಮೊತ್ತವನ್ನು ನೀಡಬೇಕಿದೆ
undefined
ಕೊರೋನಾದಿಂದಾಗಿ ತಂಡಗಳಿಗೆ ಆದಾಯ ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ಹೆಚ್ಚುವರಿ ಮೊತ್ತ ಖರ್ಚು ಮಾಡಲು ತಂಡಗಳು ಸಿದ್ಧವಿಲ್ಲ ಎಂದು ಮೂಲಗಳು ತಿಳಿಸಿವೆ.
undefined
ಇದರ ಜತೆಗೆ 2ಕ್ಕಿಂತ ಹೆಚ್ಚು ಪಂದ್ಯವನ್ನಾಡಿ ಆಟಗಾರರನ್ನು ಮತ್ತೊಂದು ತಂಡ ಖರೀದಿಸಲು ಸಾಧ್ಯವಿಲ್ಲ.
undefined
ಅಲ್ಲದೇ, ಯಾವ ತಂಡದಿಂದ ಆಟಗಾರನನ್ನು ಖರೀದಿಸಿರುತ್ತಾರೋ, ಆ ತಂಡದ ವಿರುದ್ಧ ಪಂದ್ಯವಿರುವಾಗ ಆ ಆಟಗಾರ ಆಡುವಂತಿಲ್ಲ.
undefined
ಉದಾಹರಣೆಗೆ, ಕಿಂಗ್ಸ್ ಇಲೆವೆನ್ ಪಂಜಾಬ್‌ನಿಂದ ಕ್ರಿಸ್ ಗೇಲ್ ಆರ್‌ಸಿಬಿ ತಂಡಕ್ಕೆ ವರ್ಗಾವಣೆಗೊಂಡರೆ ಪಂಜಾಬ್ ವಿರುದ್ಧದ ಪಂದ್ಯದಲ್ಲಿ ಗೇಲ್ ಆಡುವಂತಿಲ್ಲ.
undefined
click me!