ಎಲ್ಲರ ಗಮನ ಸೆಳೆದಿದ್ದು ಸನ್ರೈಸರ್ಸ್ ಹೈದರಾಬಾದ್ ಫ್ರಾಂಚೈಸಿಯಲ್ಲಿ ಹರಾಜು ಟೇಬಲ್ ಬಳಿ ಕುಳಿತಿದ್ದ ಚೆಲುವೆ.
ಬ್ಯಾಟಿಂಗ್ ದಿಗ್ಗಜ ವಿವಿಎಸ್ ಲಕ್ಷ್ಮಣ್, ಸ್ಪಿನ್ ಮಾಂತ್ರಿಕ ಮುತ್ತಯ್ಯ ಮುರಳೀಧರನ್ ಜೊತೆ ಕೂತಿದ್ದ ಇವರು ಸನ್ರೈಸರ್ಸ್ ಹೈದರಾಬಾದ್ ತಂಡದ ಮಾಲೀಕ ಕಲಾನಿಧಿ ಮಾರನ್ ಅವರ ಮಗಳು ಕವಿಯಾ ಮಾರನ್.
27 ವರ್ಷದ ಕವಿಯಾ ಅವರು ಸನ್ರೈಸರ್ಸ್ ತಂಡದ ಸಹ ಮಾಲೀಕೆ .
ಚೆನ್ನೈನಲ್ಲಿ ಎಂಬಿಎ ಓದಿ ಮುಗಿಸಿರುವ ಇವರಿಗೆ ಕ್ರಿಕೆಟ್ ಎಂದರೆ ಪ್ರೀತಿ.
ಆಗಸ್ಟ್ 6, 1992ರಲ್ಲಿ ಚೆನ್ನೈನಲ್ಲಿ ಜನಿಸಿದರು.
ಸನ್ ಮ್ಯೂಸಿಕ್ ಮತ್ತು ಸನ್ ಟಿವಿ ರೇಡಿಯೋ ಚಾನೆಲ್ನ ಪಾಲುದಾರಿಕೆಯನ್ನು ಮಾರನ್ ಹೊಂದಿದ್ದಾರೆ.
ಕೇಂದ್ರದ ಮಾಜಿ ಸಚಿವ ಮುರಸೋಳಿ ಮಾರನ್ ಅವರ ಮೊಮ್ಮಗಳು ಈ ಚೆಲುವೆ.
5.4 ಅಡಿ ಎತ್ತರದ ಚೆಲುವೆ 50 ಕೆಜಿ ಇದ್ದಾರೆ, 2018ರಲ್ಲಿ ಇವರ ಕುಟುಂಬ ಸನ್ ರೈಸರ್ಸ್ ತಂಡ ಖರೀದಿ ಮಾಡಿತು.
ಪ್ರವಾಸ ಮತ್ತು ಸಂಗೀತದಲ್ಲಿಯೂ ಮಾರನ್ ಆಸಕ್ತಿ ಹೊಂದಿದ್ದಾರೆ. ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಈ ಚೆಲುವೆ ಪೋಟೋಗಳು ಸಖತ್ ವೖರಲ್ ಆಗುತ್ತಿವೆ.