IPL 2020: ಕೆಕೆಆರ್ ಗೆಲುವಿನ ಬಳಿಕ ಪ್ಲೇ ಆಫ್‌ ಲೆಕ್ಕಾಚಾರ ಹೇಗಿದೆ..?

First Published Nov 2, 2020, 6:38 PM IST

ಬೆಂಗಳೂರು: 13ನೇ ಆವೃತ್ತಿಯ ಐಪಿಎಲ್‌ ಟೂರ್ನಿಯ ಲೀಗ್ ಹಂತ ಮುಕ್ತಾಯಕ್ಕೆ ಇನ್ನೆರಡೇ ಪಂದ್ಯಗಳು ಬಾಕಿ ಉಳಿದಿವೆ. ಹೀಗಿದ್ದೂ ಮುಂಬೈ ಇಂಡಿಯನ್ಸ್ ಹೊರತುಪಡಿಸಿ ಉಳಿದ್ಯಾವ ತಂಡಗಳು ಪ್ಲೇ ಆಫ್‌ ಸ್ಥಾನವನ್ನು ಖಚಿತಪಡಿಸಿಕೊಂಡಿಲ್ಲ.
ಭಾನುವಾರ ನಡೆದ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್‌ ವಿರುದ್ಧ ಕೋಲ್ಕತ ನೈಟ್‌ ರೈಡರ್ಸ್ ತಂಡ ಗೆಲುವನ್ನು ಸಾಧಿಸುತ್ತಿದ್ದಂತೆ ಪ್ಲೇ ಆಫ್ ಲೆಕ್ಕಾಚಾರ ಮತ್ತಷ್ಟು ಜೋರಾಗಿದೆ. ಕೆಕೆಆರ್ ಗೆಲುವು ಪ್ಲೇ ಆಫ್‌ ರೇಸ್ ಮತ್ತಷ್ಟು ರೋಚಕತೆ ಹುಟ್ಟುಹಾಕಿದೆ. ಯಾವೆಲ್ಲಾ ತಂಡಗಳು ಪ್ಲೇ ಆಫ್‌ಗೇರಲಿದೆ ಎನ್ನುವುದರ ಇಂಚಿಂಚು ಡೀಟೈಲ್ಸ್ ಇಲ್ಲಿದೆ ನೋಡಿ. 
 

ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡ ಈಗಾಗಲೇ 18 ಅಂಕಗಳೊಂದಿಗೆ ಮೊದಲ ಕ್ವಾಲಿಫೈಯರ್ ಪಂದ್ಯವನ್ನಾಡಲು ಅರ್ಹತೆಗಿಟ್ಟಿಸಿಕೊಂಡಿದೆ.
undefined
ಇನ್ನುಳಿದ ಮೂರು ಸ್ಥಾನಗಳಿಗಾಗಿ 4 ತಂಡಗಳಾದ ಆರ್‌ಸಿಬಿ, ಕೆಕೆಆರ್, ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಸನ್‌ರೈಸರ್ಸ್ ಹೈದರಾಬಾದ್ ನಡುವೆ ಜಿದ್ದಾಜಿದ್ದಿನ ಪೈಪೋಟಿ ಏರ್ಪಟ್ಟಿದೆ.
undefined
ಭಾನುವಾರದಂತ್ಯದ(ನ.01) ವೇಳೆಗೆ ಚೆನ್ನೈ ಸೂಪರ್ ಕಿಂಗ್ಸ್, ರಾಜಸ್ಥಾನ ರಾಯಲ್ಸ್ ಹಾಗೂ ಕಿಂಗ್ಸ್ ಇಲೆವನ್ ಪಂಜಾಬ್ ತಂಡ ಪ್ಲೇ ಆಫ್‌ ರೇಸಿನಿಂದ ಅಧಿಕೃತವಾಗಿ ಹೊರಬಿದ್ದಿವೆ.
undefined
ಕೆಕೆಆರ್ ತಂಡ ಅನಾಯಾಸವಾಗಿ ಪ್ಲೇ ಆಫ್‌ ಪ್ರವೇಶಿಸಬೇಕಿದ್ದರೆ, ನವೆಂಬರ್ 03ರಂದು ನಡೆಯಲಿರುವ ಮುಂಬೈ ವರ್ಸಸ್ ಹೈದರಾಬಾದ್ ನಡುವಿನ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡ ಸೋಲಬೇಕು.
undefined
ಕೋಲ್ಕತ ನೈಟ್‌ ರೈಡರ್ಸ್ ತಂಡ ಸದ್ಯ 14 ಪಂದ್ಯಗಳನ್ನಾಡಿ 7 ಗೆಲುವು ಹಾಗೂ 7 ಸೋಲುಗಳೊಂದಿಗೆ 14 ಅಂಕಗಳಿಸಿದ್ದು, ಡೆಲ್ಲಿ ಹಾಗೂ ಆರ್‌ಸಿಬಿಗಿಂತ ಕೆಕೆಆರ್ ತಂಡದ ನೆಟ್‌ ರನ್‌ರೇಟ್ ಕಡಿಮೆ ಇರುವುದರಿಂದ ಮಾರ್ಗನ್ ಪಡೆಯ ಪ್ಲೇ ಆಫ್‌ ಸ್ಥಾನ ಇನ್ನೂ ಖಚಿತಗೊಂಡಿಲ್ಲ.
undefined
ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವಿನ ಪಂದ್ಯದಲ್ಲಿ ವಿಜೇತವಾದ ತಂಡ ನೇರವಾಗಿ ಮೊದಲ ಕ್ವಾಲಿಫೈಯರ್ ಪಂದ್ಯವನ್ನಾಡಲು ಅರ್ಹತೆಗಿಟ್ಟಿಸಿಕೊಳ್ಳಲಿದೆ.
undefined
ಒಂದು ವೇಳೆ ಈ ಪಂದ್ಯದಲ್ಲಿ ಒಂದು ತಂಡ ಭಾರೀ ಅಂತರದಲ್ಲಿ ಸೋಲು ಕಂಡು, ನವೆಂಬರ್ 03ರಂದು ನಡೆಯಲಿರುವ ಪಂದ್ಯದಲ್ಲಿ ಹೈದರಾಬಾದ್ ತಂಡ ಗೆಲುವು ಸಾಧಿಸಿದರೆ, ಇಂದು ಹೀನಾಯ ಸೋಲು ಕಂಡ ತಂಡ ಟೂರ್ನಿಯಿಂದ ಲೀಗ್ ಹಂತದಲ್ಲೇ ಹೊರಬೀಳಲಿದೆ.
undefined
click me!