ಕ್ರಿಕೆಟ್ ಜಂಟಲ್ಮೆನ್ಸ್ ಗೇಮ್ ಎಂದು ಕರೆಯಲಾಗುತ್ತದೆ. ಪರಿಣಾಮವಾಗಿ, ಕ್ರೀಡೆಯನ್ನು ಆಡುವ ಕ್ರಿಕೆಟಿಗರನ್ನು ಹೆಚ್ಚಾಗಿ ಸಜ್ಜನರು ಎಂದು ಕರೆಯಲಾಗುತ್ತದೆ. ಆದರೆ ಪ್ರತಿಯೊಬ್ಬ ಸಂಭಾವಿತ ವ್ಯಕ್ತಿ ತನ್ನ ಡಾರ್ಕ್ ಸೈಡ್ ಹೊಂದಿದ್ದಾನೆ ಅದಕ್ಕೆ ಕ್ರಿಕೆಟರ್ಸ್ ಹೊರತಾಗಿಲ್ಲ.
ಕೆಲವರು ಕ್ರಿಕೆಟರ್ಸ್ ಮೋಜಿನ ಜೀವನಶೈಲಿಯನ್ನು ನಡೆಸುತ್ತಾರೆ. ಆಲ್ಕೊಹಾಲ್ ಸೇವಿಸುವುದರಿಂದ ಹಿಡಿದು ಧೂಮಪಾನ ವನ್ನೂಮಾಡುತ್ತಾರೆ. ಧೂಮಪಾನ ಮಾಡುವಾಗ ಸಿಕ್ಕಿಬಿದ್ದ ಕೆಲವು ಪ್ರಮುಖ ಕ್ರಿಕೆಟಿಗರನ್ನು ಇಲ್ಲಿದ್ದಾರೆ.
ಕ್ರಿಸ್ ಗೇಲ್:'ಯೂನಿವರ್ಸ್ ಬಾಸ್' ತಮ್ಮ ಆಫ್‌ಬೀಟ್ ಮತ್ತು ಫನ್ ಲವಿಂಗ್‌ಸ್ವಭಾವಕ್ಕೆ ಪ್ರಸಿದ್ಧ. ಕೆಲವು ಸಂದರ್ಭಗಳಲ್ಲಿ, ವಿಶೇಷವಾಗಿ ಪಾರ್ಟಿಗಳಲ್ಲಿ ಸ್ಮೋಕ್ ಮಾಡುವುದು ಕಂಡು ಬಂದಿದೆ.
ಶೇನ್ ವಾರ್ನ್:ಆಸ್ಟ್ರೇಲಿಯಾದ ಲೆಜೆಂಡ್ ಸ್ಪಿನ್ನರ್ ಹಲವಾರು ಆಫೇರ್‌ಗಳನ್ನು ಹೊಂದಿದ್ದರಿಂದ ಹಿಡಿದು ಆಲ್ಕೊಹಾಲ್ ಕುಡಿಯುವವರೆಗೆ, ಸ್ಮೋಕ್ ಮಾಡುವರೆಗೆ ವಾರ್ನ್ ಸುತ್ತ ವಿವಾದಗಳಿವೆ. ಇದು ಹಲವಾರು ಸಂದರ್ಭಗಳಲ್ಲಿ ಕಂಡುಬಂದಿದೆ. ಸಾರ್ವಜನಿಕವಾಗಿರಲಿ ಅಥವಾ ಡ್ರೆಸ್ಸಿಂಗ್ ರೂಮ್ ಇರಲಿ, ಅವರು ಧೂಮಪಾನ ಮಾಡಲು ಇಷ್ಟಪಡುತ್ತಾರೆ.
ಸರ್ ಇಯಾನ್ ಬೋಥಮ್:ಇಂಗ್ಲಿಷರು ಕೂಡ ಇದರಲ್ಲಿ ಹೆಚ್ಚು ಹಿಂದುಳಿದಿಲ್ಲ, ಮತ್ತು ಹಾರ್ಡ್‌ಕೋರ್ ಸ್ಮೋಕರ್‌ಗಳಲ್ಲಿಒಬ್ಬರು, ಪ್ರಸಿದ್ಧ ಆಲ್‌ರೌಂಡರ್ ಸರ್ ಇಯಾನ್ ಬೋಥಮ್. ಬೋಥಮ್ ಹಲವಾರು ಸಂದರ್ಭಗಳಲ್ಲಿ ಸಿಗರೇಟ್ ಹಿಡಿದಿದ್ದಾರೆ. ಹೋಟೆಲ್‌ಗಳಲ್ಲಿ, ಡ್ರೆಸ್ಸಿಂಗ್ ರೂಮ್ ಒಳಗೆ ಮತ್ತು ಬಾತ್ ಟಬ್‌ನಲ್ಲಿ ವಿಶ್ರಾಂತಿ ಪಡೆಯುತ್ತಿದ್ದರೂ ಸಹ.
ಹಾರ್ದಿಕ್ ಪಾಂಡ್ಯ:ಭಾರತದಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಸಹ ಈ ಪಟ್ಟಿಯಲ್ಲಿದ್ದಾರೆ. ಅದು ಎಂ.ಎಸ್.ಧೋನಿ ಪತ್ನಿ ಸಾಕ್ಷಿ ಅವರ ಹುಟ್ಟುಹಬ್ಬದ ಪಾರ್ಟಿಯಿಂದ ಹಂಚಿಕೊಂಡ ವೀಡಿಯೊದಲ್ಲಿ ಪಾಂಡ್ಯ ಧೂಮಪಾನ ಮಾಡುತ್ತಿದ್ದರು.
ಆರನ್ ಫಿಂಚ್:ಈ ಪಟ್ಟಿಯಲ್ಲಿರುವ ಮತ್ತೊಬ್ಬ ಆಸ್ಟ್ರೇಲಿಯಾದ ಆಟಗಾರ ಆರನ್ ಫಿಂಚ್. ಈ ಬಾರಿ ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ ನಡೆಯುತ್ತಿರುವ ಐಪಿಎಲ್ ಸಮಯದಲ್ಲಿ, ಆರ್‌ಸಿಬಿ ಪರ ಪಂದ್ಯವೊಂದರಲ್ಲಿ, ಔಟ್ ಆದ ನಂತರ, ಡ್ರೆಸ್ಸಿಂಗ್ ರೂಮ್‌ನಲ್ಲಿ ಸ್ಮೋಕ್ ಮಾಡುತ್ತಿರುವುದುಗುರುತಿಸಲಾಯಿತು.