ಬಾಂಗ್ಲಾದೇಶ, ಮಯನ್ಮಾರ್ ಸೇರಿದಂತೆ ಹಲವು ಗಡಿ ಪ್ರದೇಶಗಳಿಂದ ಭಾರತಕ್ಕೆ ಹಲವರು ಅಕ್ರಮವಾಗಿ ನುಸುಳಿ ಮೊದಲು ಆಧಾರ್ ಕಾರ್ಡ್ ಮಾಡಿಸಿಕೊಳ್ಳುತ್ತಾರೆ. ಸುಲಭವಾಗಿ ಆಧಾರ್ ಕಾರ್ಡ್ ಎಲ್ಲರ ಕೈ ಸೇರುತ್ತಿತ್ತು. ದೇಶದ ಭದ್ರತೆ ಸವಾಲಾಗುತ್ತಿರುವ ಕಾರಣ ಇದೀಗ ಆಧಾರ್ ಕಾರ್ಡ್‌ನಲ್ಲಿ ಮಹತ್ತರ ಬದಲಾವಣೆ ಮಾಡಲಾಗಿದೆ.
UIDAI ಇದೀಗ ಆಧಾರ್ ಕಾರ್ಡ್ ಪಡೆಯಲು ಹೊಸ ಹಾಗೂ ಕಠಿಣ ನಿಯಮ ಜಾರಿಗೊಳಿಸಿದೆ. 18 ವರ್ಷ ಮೇಲ್ಪಟ್ಟವರು ಹೊಸ ಆಧಾರ್ ಕಾರ್ಡ್ ಪಡೆಯುವುದು ಸುಲಭವಲ್ಲ.
ಹೊಸ ನಿಯಮದ ಪ್ರಕಾರ ಆಧಾರ್ ಕಾರ್ಡ್ ಪಡೆಯಲು ಪಾಸ್‌ಪೋರ್ಟ್ ರೀತಿಯ ವೆರಿಫಿಕೇಶನ್ ನಡೆಯಲಿದೆ. ನೀವು ಆಧಾರ್ ಕಾರ್ಡ್‌ಗೆ ನೀಡುವ ವಿಳಾಸವನ್ನು ಅಧಿಕಾರಿಗಳ ಬಂದು ವೆರಿಫಿಕೇಶನ್ ನಡೆಸಲಿದ್ದಾರೆ.
ಪಾಸ್‌ಪೋರ್ಟ್ ಪಡೆಯುವ ಮೊದಲು ನಿಮ್ಮ ವಿಳಾಸವನ್ನು ಪೊಲೀಸ್ ವೆರಿಫಿಕೇಶನ್ ನಡೆಯಲಿದೆ. ಇದೇ ರೀತಿ, ಆಧಾರ್ ಕಾರ್ಡ್ ಪಡೆಯಲು ನೊಡಲ್ ಅಧಿಕಾರಿಗಳು ವಿಳಾಸ ವೆರಿಫಿಕೇಶನ್ ನಡೆಯಲಿದ್ದಾರೆ.
UIDAI ಇದೀಗ ಪ್ರತಿ ಜಿಲ್ಲಾ ಹಾಗೂ ತಾಲೂಕು ಕೇಂದ್ರಗಳಿಗೆ ನೊಡಲ್ ಅಧಿಕಾರಿಗಳನ್ನು ನೇಮಕ ಮಾಡಲಿದೆ. ಈ ಅಧಿಕಾರಿಗಳ ತಂಡ ಆಧಾರ್ ಕಾರ್ಡ್ ವಿಳಾಸದ ವೆರಿಫಿಕೇಶನ್ ಮಾಡಲಿದ್ದಾರೆ.
ವಿಳಾಸ, ವಯಸ್ಸು, ಸೇರಿದಂತೆ ಎಲ್ಲಾ ದಾಖಲೆಗಳ ಪರಿಶೀಲನೆ ಆಗಲಿದೆ. UIDAI ಪೋರ್ಟಲ್ ಮೂಲಕ ದಾಖಲೆಗಳ ಪರಿಶೀಲನೆ ನಡೆಯಲಿದೆ. ಈ ಎಲ್ಲಾ ಪ್ರಕ್ರಿಯೆಗ ಕನಿಷ್ಠ 180 ದಿನ ತೆಗೆದುಕೊಳ್ಳಲಿದೆ.
2010ರಲ್ಲಿ ಅಧಾರ್ ನೋಂದಣಿ ಆರಂಭಗೊಂಡಿತ್ತು. ಇದೀಗ 10 ವರ್ಷಕ್ಕಿಂತ ಮೇಲ್ಪಟ್ಟ ಆಧಾರ್ ಕಾರ್ಡ್ ವಿಳಾಸ, ಫೋಟೋ ಸೇರಿದಂತೆ ಕೆಲ ದಾಖಲೆಗಳ ಅಪ್‌ಡೇಟ್ ಕಡ್ಡಾಯ ಮಾಡಲಾಗಿದೆ
ಆಧಾರ್ ಅಪ್‌ಡೇಟ್ ದಿನಾಂಕ ಗಡುವನ್ನು ಮಾರ್ಚ್ 24, 2024ರ ವರೆಗೆ ವಿಸ್ತರಿಸಲಾಗಿದೆ. ಈ ಮೂಲಕ ಆಧಾರ್ ಕಾರ್ಡ್ ಡೇಟಾಗಳನ್ನು ಪರಿಶೀಲಿಸಿ ಅಪ್‌ಡೇಟ್ ಮಾಡಿಕೊಳ್ಳಲು UIDAI ಮನವಿ ಮಾಡಿದೆ.