ಫೆಬ್ರವರಿ 15ರಿಂದ ಇವರಿಗೆ ಮಾತ್ರ ಸಿಗುತ್ತೆ ರೇಷನ್; ಲಕ್ಷಾಂತರ ಜನರಿಗೆ ಶಾಕ್

Published : Jan 26, 2025, 03:13 PM IST

ರಾಷ್ಟ್ರೀಯ ಆಹಾರ ಭದ್ರತಾ ಕಾಯಿದೆಯಡಿ, ಭಾರತ ಸರ್ಕಾರ ಕಡಿಮೆ ದರದಲ್ಲಿ ಮತ್ತು ಉಚಿತವಾಗಿ ಪಡಿತರ ವಿತರಿಸುತ್ತದೆ. ಈ ಒಂದು ಕೆಲಸ ಮಾಡಿಸಿಕೊಳ್ಳದಿದ್ದರೆ ಫೆಬ್ರವರಿ 15ರಿಂದ ಇವರಿಗೆಲ್ಲಾ ಪಡಿತರ ಸಿಗೋದು ಅನುಮಾನ.

PREV
16
ಫೆಬ್ರವರಿ 15ರಿಂದ ಇವರಿಗೆ ಮಾತ್ರ ಸಿಗುತ್ತೆ ರೇಷನ್; ಲಕ್ಷಾಂತರ ಜನರಿಗೆ ಶಾಕ್

ಭಾರತ ಸರ್ಕಾರ ದೇಶದ ಜನತೆಗೆ ಹಲವು ಯೋಜನೆಗಳನ್ನು ನೀಡುತ್ತಾ ಬಂದಿದೆ. ಭಾರತ ಸರ್ಕಾರದ ಈ ಯೋಜನೆಯ ಲಾಭವನ್ನು ಕೋಟ್ಯಂತರ ಜನರು ಪಡೆದುಕೊಳ್ಳುತ್ತಾರೆ. ದೇಶದ ಜನರು ಹಸಿವಿನಿಂದ ಇರಬಾರದು ಎಂಬ ಕಾರಣಕ್ಕೆ ಭಾರತ ಸರ್ಕಾರ ಪಡಿತರ ವಿತರಣೆ ಮಾಡುತ್ತಿದೆ.

26

ಭಾರತದಲ್ಲಿ ಇಂದಿಗೂ ಎರಡು ಹೊತ್ತಿನ ಊಟಕ್ಕೆ ಕಷ್ಟಪಡುವ ಜನರಿದ್ದಾರೆ. ಈ ವರ್ಗದ ಜನರಿಗಾಗಿ ಭಾರತ ಸರ್ಕಾರ ಹಲವು ಯೋಜನೆಗಳನ್ನು ತಂದಿದೆ. ರಾಷ್ಟ್ರೀಯ ಆಹಾರ ಭದ್ರತಾ ಕಾಯಿದೆಯಡಿ, ಭಾರತ ಸರ್ಕಾರ ಕಡಿಮೆ ದರದಲ್ಲಿ ಮತ್ತು ಉಚಿತವಾಗಿ ಪಡಿತರ ವಿತರಿಸುತ್ತದೆ. ಈ ಯೋಜನೆಯು ದೇಶದ ಎಲ್ಲಾ ರಾಜ್ಯಗಳಲ್ಲಿ ಅನ್ವಯಿಸುತ್ತದೆ.

36

ಈ ಯೋಜನೆಯಡಿ ಅರ್ಹ ಫಲಾನುಭವಿಗಳಿಗೆ ಮಾತ್ರ ಕಡಿಮೆ ದರದಲ್ಲಿ ಪಡಿತರ ಸಿಗುತ್ತದೆ. ಇದಕ್ಕಾಗಿ ಭಾರತ ಫಲಾನುಭವಿಗಳನ್ನು ಗುರುತಿಸಲು ರ್ಕಾರ ಅರ್ಹತಾ ಮಾನದಂಡಗಳನ್ನು ನಿಗದಿಪಡಿಸಿದೆ. ಈ ಅರ್ಹತಾ ಮಾನದಂಡಗಳನ್ನು ಆಧರಿಸಿ ಪಡಿತರ ಚೀಟಿ (ರೇಷನ್ ಕಾರ್ಡ್) ವಿತರಣೆ ಮಾಡಲಾಗಿರುತ್ತದೆ.

46

ಪಡಿತರ ಚೀಟಿ ಹೊಂದಿದವರಿಗೆ ಮಾತ್ರ ಕಡಿಮೆ ದರದಲ್ಲಿ ಆಹಾರ ಧಾನ್ಯಗಳನ್ನು ರಾಷ್ಟ್ರೀಯ ಆಹಾರ ಭದ್ರತಾ ಕಾಯಿದೆಯಡಿ ನೀಡಲಾಗುತ್ತದೆ. ಇದೀಗ ಪಡಿತರ ಚೀಟಿದಾರರಿಗೆ ಸರ್ಕಾರ ಹೊಸ ಮಾರ್ಗಸೂಚಿಯನ್ನು ಹೊರಡಿಸಿದೆ. ಈ ಮಾರ್ಗಸೂಚಿ ಪಾಲನೆ ಮಾಡದವರಿಗೆ ಫೆಬ್ರವರಿ 15ರಿಂದ ಪಡಿತರ ಸಿಗುವುದಿಲ್ಲ.

56

ಪಡಿತರ ಚೀಟಿ ಹೊಂದಿರುವ ಫಲಾನುಭವಿಗಳಿಗೆ ಇ-ಕೆವೈಸಿ ಮಾಡಲು ಸೂಚನೆ ನೀಡಿದೆ.  ಹಾಗಾಗಿ  ಎಲ್ಲಾ ಪಡಿತರ ಚೀಟಿದಾರರು ಕಡ್ಡಾಯವಾಗಿ ಇ-ಕೆವೈಸಿ ಮಾಡಿಸಿಕೊಳ್ಳಬೇಕಾಗುತ್ತದೆ. ಇ-ಕೆವೈಸಿ ಮಾಡಿಸಿಕೊಳ್ಳದ ಫಲಾನುಭವಿಗಳಿಗೆ ಪಡಿತರ ಸ್ಥಗಿತಗೊಳಿಸಲಾಗುತ್ತದೆ. ಒಂದು ವೇಳೆ ಇ-ಕೆವೈಸಿ ಮಾಡಿಕೊಳ್ಳದಿದ್ದರೆ ಶೀಘ್ರದಲ್ಲಿಯೇ ಮಾಡಿಕೊಳ್ಳಬೇಕು. 

66

ಇ-ಕೆವೈಸಿ ಮಾಡಿಸಿಕೊಳ್ಳೋದು ಹೇಗೆ?
ಪಡಿತರ ಚೀಟಿಗಾಗಿ ಇ-ಕೆವೈಸಿ ಮಾಡಲು, ನೀವು ನಿಮ್ಮ ಹತ್ತಿರದ ಆಹಾರ ಪೂರೈಕೆ ಕೇಂದ್ರಕ್ಕೆ ಹೋಗಬಹುದು. ಇ-ಕೆವೈಸಿ ಮಾಡಲು ಆಧಾರ್ ಕಾರ್ಡ್‌  ಕಡ್ಡಾಯವಾಗಿದೆ. ಆನ್‌ಲೈನ್ ಮೂಲಕವೂ ಪಡಿತರ ಚೀಟಿಯ ಇ-ಕೆವೈಸಿಯನ್ನು ಮಾಡಿಸಬಹುದು. 
 

Read more Photos on
click me!

Recommended Stories