ಉಗ್ರ ಸಂಘಟನೆಯಿಂದ ರೈತ ಪ್ರತಿಭಟನೆ ಹೈಜಾಕ್; ಖಲಿಸ್ತಾನ ವಿರುದ್ಧ ತನಿಖೆಗೆ ಸಜ್ಜಾದ MHA!

First Published | Dec 17, 2020, 6:13 PM IST

ಕೃಷಿ ಕಾಯ್ದೆ ವಿರೋಧಿಸಿ ರೈತರು ನಡೆಸುತ್ತಿರುವ ಪ್ರತಿಭಟನೆಯನ್ನು ಖಲಿಸ್ತಾನ ಸಂಘಟನೆ ಹೈಜಾಕ್ ಮಾಡಿದೆ ಅನ್ನೋ ಮಾಹಿತಿ ಕೇಂದ್ರ ಗೃಹ ಸಚಿವಾಲಯಕ್ಕೆ ಲಭ್ಯವಾಗಿದೆ. ಪಂಜಾಬ್ ಪೊಲೀಸ್ ಹಾಗೂ ಕೇಂದ್ರ ಗುಪ್ತಚರ ಇಲಾಖೆ ನೀಡಿದ ಮಾಹಿತಿ ಆಧರಿಸಿ ಇದೀಗ ಅಮಿತ್ ಶಾ ತನಿಖೆಗೆ ಮುಂದಾಗಿದ್ದಾರೆ. ಕೇಂದ್ರ ಗುಪ್ತಚರ ಇಲಾಖೆ ನೀಡಿದ ರಿಪೋರ್ಟ್‌ನಲ್ಲಿದೆ ಏನಿದೆ?

ಕೇಂದ್ರ ಕೃಷಿ ಕಾಯ್ದೆ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ರೈತರ ಪ್ರತಿಭಟನೆ ಹಾದಿ ತಪ್ಪುತ್ತಿದೆ ಅನ್ನೋ ಮಾತುಗಳು ಬಲವಾಗಿ ಕೇಳಿ ಬರುತ್ತಿದೆ. ಪ್ರಮುಖವಾಗಿ ಉಗ್ರ ಸಂಘಟನೆಗಳ ಸಂಪರ್ಕ ಹೊಂದಿದ ಸಂಘಟನೆಗಳು ರೈತರ ಪ್ರತಿಭಟನೆ ಹೈಜಾಕ್ ಮಾಡಿದೆ ಅನ್ನೋ ಮಾಹಿತಿ ಹೊರಬಿದ್ದಿದೆ.
undefined
ನಿಷೇಧಿತ ಖಲಿಸ್ತಾನ ಸಂಘಟನೆ ಇದೀಗ ರೈತರ ಪ್ರತಿಭಟನೆಯನ್ನು ಹೈಜಾಕ್ ಮಾಡಿದೆ ಅನ್ನೋ ಮಾಹಿತಿ ಕೇಂದ್ರಕ್ಕೆ ಲಭ್ಯವಾಗಿದೆ. ಇದೀಗ ಖಲಿಸ್ತಾನ ನೆಟ್‌ವರ್ಕ್ ವಿರುದ್ಧ ಕೇಂದ್ರ ಗೃಹ ಸಚಿವ ಅಮಿತ್ ಶಾ ತನಿಖೆ ನಡೆಸಲು ಮುಂದಾಗಿದೆ.
undefined

Latest Videos


ರೈತರ ಪ್ರತಿಭಟನೆಯಲ್ಲಿ ಖಲೀಸ್ತಾನ ಪಾಲು ಖಚಿತವಾಗುತ್ತಿದೆ. ಪಂಜಾಬ್ ಸ್ವತಂತ್ರವಾಗಿಸಲು ಹಾಗೂ ಸಿಖ್‌ರ ಅವಶ್ಯಕತೆಗಳಿಗಾಗಿ ಹೋರಾಡುವ ಉಗ್ರ ಸಂಘಟನೆ ಹಾಗೂ ನಿಷೇಧಿತ ಸಂಘಟನೆ ಖಲೀಸ್ತಾನ ವಿರುದ್ಧ ಕೇಂದ್ರ ಗೃಹ ಇಲಾಕೆ ಸಮರ ಸಾರಲು ಸಜ್ಜಾಗಿದೆ.
undefined
ಪಂಜಾಬ್ ಪೊಲೀಸ್, ಕೇಂದ್ರ ಗುಪ್ತಚರ ಇಲಾಖೆ ನೀಡಿದ ಮಾಹಿತಿ ಆಧರಿಸಿ ಇದೀಗ ಗೃಹ ಸಚಿವಾಲಯ ಖಲಿಸ್ತಾನದ ಉಗ್ರ ಸಂಪರ್ಕ, ವಿದೇಶಿ ಹಣದ ಮೂಲದ ಕುರಿತು ತನಿಖೆಗೆ ಮುಂದಾಗಿದೆ.
undefined
ಕೇಂದ್ರ ತನಿಖಾ ದಳ ಇದೀಗ ಖಲೀಸ್ತಾನ ಉಗ್ರಸಂಘಟನೆ, ಬಬ್ಬರ್ ಖಲ್ಸಾ ಇಂಟರ್‌ನ್ಯಾಶನಲ್, ಖಲಿಸ್ತಾನ್ ಜಿಂದಾಬಾದ್ ಫೋರ್ಸ್, ಖಲಿಸ್ತಾನ ಟೈಗರ್ ಪೋರ್ಸ್ ಸೇರಿದಂತೆ ಇತರ ಕೆಲ ಸಂಘಟನಗಳನ್ನು ತನಿಖಾ ದಳ ವಿಚಾರಣೆ ನಡೆಸಲಿದೆ.
undefined
NIA, ED, CBI, FIU ಹಾಗೂ ಆದಾಯ ತೆರಿಗೆ ಇಲಾಖೆ ಇದೀಗ ತನಿಖೆಗೆ ನಡೆಸಲಿದೆ. ಖಲಿಸ್ತಾನ ಸಂಘಟನೆಗೆ ಅಮೆರಿಕ, ಇಂಗ್ಲೆಂಡ್, ಆಸ್ಟ್ರೇಲಿಯಾ, ಕೆನಡಾ, ಫ್ರಾನ್ಸ್ ಸೇರಿದಂತೆ ವಿದೇಶಿ ಮೂಲದದಿಂದ ಹಣ ಹರಿದು ಬಂದಿದೆ. ಈ ಕುರಿತು ತನಿಖೆ ನಡೆಸಲಿದೆ.
undefined
ಈ ಕುರಿತು ಕೇಂದ್ರ ಗೃಹ ಇಲಾಖೆ ಮಹತ್ವದ ಸಭೆ ನಡೆಸಿದೆ. ಈ ಮೂಲಕ ದೇಶದೊಳಗೆ ಶಾಂತಿ ಕದಡಲು ಹಾಗೂ ರೈತರ ಪ್ರತಿಭಟನೆಯ ಹಾದಿ ತಪ್ಪಿಸುತ್ತಿರುವ ಖಲಿಸ್ತಾನ ಉಗ್ರ ಸಂಘಟನೆಗೆ ತಕ್ಕ ಶಾಸ್ತಿಯಾಗುವ ಕಾಲ ದೂರವಿಲ್ಲ.
undefined
click me!