ಕೊಚ್ಚಿ (ನ. 23) ವಿವಾದಾತ್ಮಹ ಹೇಳಿಕೆ ನೀಡಿ ಹಿಂದುಗಳ ಭಾವನೆಗೆ ಧಕ್ಕೆ ತರುತ್ತಿದ್ದ ರೆಹಾನಾ ಫಾತಿಮಾಗೆ ಕೇರಳ ಹೈಕೋರ್ಟ್ ಬಾಯಿಗೆ ಬೀಗ ಹಾಕಿಕೊಳ್ಳಿ ಎಂದಿದೆ. ಮಾಧ್ಯಮಗಳ ಮೂಲಕ ಯಾವುದೇ ಹೇಳಿಕೆ ನೀಡದಂತೆ ಹೈಕೋರ್ಟ್ ತಿಳಿಸಿದೆ. ಅಯ್ಯಪ್ಪ ಸ್ವಾಮಿ ಭಕ್ತರ ಮನಸ್ಸನ್ನು ಘಾಸಿಗೊಳಿಸುವಂತಹ ಹೇಳಿಕೆ ನೀಡಿದ್ದ ಪ್ರಕರಣದ ವಿಚಾರಣೆ ಹಿಂದೆ ನಡೆದು ಜಾಮೀನು ಸಿಕ್ಕಿತ್ತು. ಬಂಧನಕ್ಕೆ ಒಳಗಾಗಿ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ ಫಾತಿಮಾ ಅಡುಗೆ ಕಾರ್ಯಕ್ರಮವೊಂದರಲ್ಲಿ ಮತ್ತೆ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಆಕೆಗೆ ನೀಡಿರುವ ಜಾಮೀನು ರದ್ದು ಮಾಡಬೇಕು ಎಂದು ಅರ್ಜಿ ದಾಖಲಾಗಿತ್ತು. ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತ ಪೂಜನೀಯ ಗೋವನ್ನು ನಿಂದಿಸಿದ್ದರು. ಆ ಕಾರ್ಯಕ್ರಮಕ್ಕೆ ನೀಡಿದ್ದ ಸಬ್ ಟೈಟಲ್ ಗೆ ತೀವ್ರ ವಿರೋಧ ಕೇಳಿ ಬಂದಿತ್ತು. Kerala High Court Monday passed orders to restrict activist Rehana Fathima from disseminating her opinions and comments through any Media. ಧಾರ್ಮಿಕ ಭಾವನೆಗೆ ಧಕ್ಕೆ ತರುವೆ ಹೇಳಿಕೆ ನೀಡಬೇಡಿ; ಹೈಕೋರ್ಟ್ ಸ್ಪಷ್ಟ ಆದೇಶ