ಪ್ರಧಾನಿ ನರೇಂದ್ರ ಮೋದಿ ಹಾಗೂ ಎಲ್ಲಾ ರಾಜ್ಯ ಹಾಗೂ ಕೇಂದ್ರಾಡಳಿ ಪ್ರದೇಶದ ಮುಖ್ಯಮಂತ್ರಿಗಳ ಜೊತೆ ಕೊರೋನಾ ನಿಯಂತ್ರಣ ಕುರಿತು ಮಹತ್ವದ ಸಭೆ ನಡೆಸಿದ್ದಾರೆ. ಕೊರೋನಾ ಹೆಚ್ಚಿರುವ ಹಾಗೂ ಇತರ ರಾಜ್ಯಗಳಿಗೆ ಮಹತ್ವದ ಸಲಹೆ ನೀಡಿದ್ದಾರೆ.
undefined
ಸಭೆ ಮರುದಿನದ ಕೊರೋನಾ ಅಂಕಿ ಅಂಶ ಇದೀಗ ಮತ್ತೆ ನಿರ್ಣಯಗಳನ್ನು ಬದಲಾಯಿಸಬೇಕಾದ ಅನಿವಾರ್ಯತೆಗೆ ತಳ್ಳಿದೆ. ಕಾರಣ ಭಾರತದಲ್ಲಿ 2021ರ ಗರಿಷ್ಠ ಪ್ರಕರಣಗಳು ದಾಖಲಾಗಿದೆ. ಹೀಗಾಗಿ ಲಾಕ್‌ಡೌನ್ ಅನಿವಾರ್ಯ ಅನ್ನೋ ಮಾತುಗಳು ಕೇಳಿಬರುತ್ತಿದೆ.
undefined
ಮಹಾರಾಷ್ಟ್ರದಲ್ಲಿ ಮಾರ್ಚ್ 17 ರಂದು 23,179 ಹೊಸ ಕೊವಿಡ್ ಪ್ರಕರಣ ದಾಖಲಾಗಿದೆ. ಕಳೆದ ವರ್ಷ ಸೆಪ್ಟೆಂಬರ್ ತಿಂಗಳಲ್ಲಿ ಒಂದೇ ದಿನ ಮಹಾರಾಷ್ಟ್ರದಲ್ಲಿ 24,886 ಹೊಸ ಪ್ರಕರಣ ದಾಖಲಾಗಿತ್ತು. ಇದು ಒಂದು ದಿನ ದಾಖಲಾದ ಗರಿಷ್ಠ ಪ್ರಕರಣವಾಗಿದೆ. ಆದರೆ ಇದೀಗ ಈ ಸಂಖ್ಯೆಯ ಸನಿಹಕ್ಕೆ ತಲುಪಿದೆ.
undefined
ಕೊರೋನಾಗೆ ಬಲಿಯಾಗುತ್ತಿರುವರ ಪೈಕಿ ಪಂಜಾಬ್ 2ನೇ ಸ್ಥಾನ ಪಡೆದುಕೊಂಡಿದೆ. ಕಳೆದೆರಡು ದಿನದಲ್ಲಿ ಮಹಾರಾಷ್ಟ್ರ ಮೊದಲ ಸ್ಥಾನದಲ್ಲಿದ್ದರೆ, ಪಂಜಾಬ್ ನಂತರದಲ್ಲಿದೆ
undefined
ಕಳೆದ 24 ಗಂಟೆಯಲ್ಲಿ ಭಾರತದಲ್ಲಿ 35,871 ಹೊಸ ಕೋವಿಡ್ ಪ್ರಕರಣಗಳು ದಾಖಲಾಗಿದೆ. ಮಹಾರಾಷ್ಟ್ರ, ಪಂಜಾಬ್, ಕೇರಳ, ತಮಿಳುನಾಡು, ಕರ್ನಾಟಕ, ಗುಜರಾತ್, ಮಧ್ಯಪ್ರದೇಶ ಸೇರಿದಂತೆ ಹಲವು ರಾಜ್ಯಗಳಲ್ಲಿ ಕೊರೋನಾ ಆರ್ಭಟ ಮುಂದುವರಿದಿದೆ.
undefined
ಲಾಕ್‌ಡೌನ್, ಕರ್ಫ್ಯೂ ಹೇರಿಕೆ ನೀರ್ಧಾರಗಳು ಕೇಂದ್ರದ ಮುಂದಿಲ್ಲ ಅನ್ನೋದನ್ನು ಈಗಾಗಲೇ ಸ್ಪಷ್ಟಪಡಿಸಲಾಗಿದೆ. ಇತ್ತ ಕರ್ನಾಟಕದಲ್ಲಿ ಸಿಎಂ ಯಡಿಯೂರಪ್ಪ ಇದೇ ಮಾತನ್ನು ಉಚ್ಚರಿಸಿದ್ದಾರೆ.
undefined
ಆದರೆ ಸದ್ಯ ಕೊರೋನಾ ವಿರುದ್ಧ ದಿಕ್ಕಿನಲ್ಲಿ ಸಂಚರಿಸುತ್ತಿದೆ. ಹೀಗಾಗಿ ಮೋದಿ ಸಭೆಯ ನಿರ್ಧಾರಗಳು ಬದಲಾಗುವು ಸಾಧ್ಯತೆಗಳನ್ನು ಅಲ್ಲಗೆಳೆಯುುವಂತಿಲ್ಲ. ಇದೇ ಕಾರಣಕ್ಕೆ ಇದೀಗ ಲಾಕ್‌ಡೌನ್ ಆತಂಕಗಳು ಆರಂಭಗೊಂಡಿದೆ.
undefined